Lifestyle

ಇಂತಹವರನ್ನು ಮದುವೆಯಾದರೆ ನಿಮ್ಮ ಜೀವನ ನರಕವಂತೆ!

ಬೆಂಗಳೂರು; ಮದುವೆ ಅನ್ನೋದು ನೂರಾರು ವರ್ಷಗಳ ಬಂಧ.. ಮದುವೆಗೆ ಮುನ್ನ ಪ್ರತಿಯೊಬ್ಬ ವ್ಯಕ್ತಿ  ತನ್ನ ವೈವಾಹಿಕ ಜೀವನದ ಬಗ್ಗೆ ಕನಸು ಕಾಣುತ್ತಾನೆ… ನನ್ನ ಸಂಗಾತಿ ಹಾಗಿರಬೇಕು, ಹೀಗಿರಬೇಕು ಎಂದು ಆಸೆ ಪಡುತ್ತಾನೆ.. ಆದರೆ,  ಯಾಮಾರಿದ ಒಬ್ಬ ಕೆಟ್ಟ ವ್ಯಕ್ತಿ  ಜೀವನ ಸಂಗಾತಿಯಾದರೆ, ಜೀವನ ಅಯೋಮಯವಾಗಿಬಿಡುತ್ತೆ.. ಜೀವನದಲ್ಲಿ ಸಂತೋಷವೇ ಮಾಯವಾಗುತ್ತದೆ.. ಹೀಗಾಗಿ ಮದುವೆ ಅನ್ನೋದು ಜೀವನದಲ್ಲಿ ಆಗೋ ಒಂದು ಪ್ರಮುಖ ನಿರ್ಧಾರ.. ಹೀಗಾಗಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ..

ಇದನ್ನೂ ಓದಿ; ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡ ಕಾಂಗ್ರೆಸ್‌; ಸುಪ್ರೀಂನಿಂದ ಬಿಗ್‌ ರಿಲೀಫ್‌!

ಸಂಗಾತಿಯ ಅಭ್ಯಾಸಗಳು ನಿಮಗೆ ಹಿಡಿಸದಿದ್ದರೆ ನರಕ;

ಮದುವೆಯಾಗುವವರ ಸ್ವಭಾವ ಯಾವಾಗಲೂ ತದ್ವಿರುದ್ಧ ಆಗಿರಬಾಹುದು.. ಅಭಿರುಚಿಗಳು ಬೇರೆ ಬೇರೆ ಆಗಿರಬಾರದು.. ಹಾಗಿದ್ದಾಗ ಹೊಂದಾಣಿಕೆ ಬರೋದಿಲ್ಲ.. ಒಬ್ಬರು ಒಂದು ಹೇಳಿದರೆ ಇನ್ನೊಬ್ಬರು ಇನ್ನೊಂದು ಹೇಳುತ್ತಾರೆ… ಒಬ್ಬರು ಒಂದು ಇಷ್ಟ ಅಂದರೆ, ಇನ್ನೊಂದು ಇನ್ನೊಂದು ಬೇಕು ಅನ್ನುತ್ತಾರೆ.. ಹೀಗಾಗಿ ನಿಮ್ಮ ಸಂಗಾತಿಯ ಅಭ್ಯಾಸಗಳು ಅಸಹನೀಯವಾಗಿದ್ದರೆ, ಜೀವನವು ಕಷ್ಟಕರವಾಗುತ್ತದೆ. ಮದುವೆಯು ಪರಸ್ಪರ ತಿಳುವಳಿಕೆ ಮತ್ತು ಉತ್ತಮ ಸ್ವಭಾವದ ವ್ಯಕ್ತಿಯೊಂದಿಗೆ ಆಗಬೇಕು.. ಹೀಗಾಗಿ ಈ ಬಗ್ಗೆ ಯೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕು.

ಸಂಗಾತಿ ವಿಚಿತ್ರ ಅಭ್ಯಾಸಗಳು ಹೊಂದಿದ್ದರೆ ಕಷ್ಟ!;

ಕೆಲವರಿಗೆ ನಾನ್‌ ವೆಜ್‌ ಅಂದ್ರೆ ಆಗೋದಿಲ್ಲ.. ಇನ್ನು ಕೆಲವರಿಗೆ ಮದ್ಯ ಸೇವನೆ ಅಂದ್ರೆ ವಾಕರಿಗೆ ಬರುತ್ತದೆ.. ಸಿಗರೇಟ್‌ ವಾಸನೆ ಅಂದ್ರೆ ಆಗೋದೇ ಇಲ್ಲ, ಮನೆ ಸ್ವಚ್ಛವಾಗಿ ಇಟ್ಟುಕೊಳ್ಳಲಿಲ್ಲ ಅಂದ್ರೂ ಸಿಡಿದುಬೀಳ್ತಾರೆ.. ಇಂತಹ ವಿರುದ್ಧ ಅಭಿರುಚಿಗಳಿರುವವರು ಮದುವೆಯಾದರೆ ದಿನವೂ ಮನೆ ರಣರಂವಾಗುತ್ತದೆ.. ಹೀಗಾಗಿ ಭವಿಷ್ಯದ ಸಂಗಾತಿಯು ಕೆಲವು ವಿಚಿತ್ರ ಅಭ್ಯಾಸಗಳನ್ನು ಹೊಂದಿದ್ದರೆ, ಮದುವೆಯ ನಂತರ ಅದು ನಿಮಗೆ ಸಮಸ್ಯೆಯಾಗುತ್ತದೆ. ಇದು ಹಂತ ಹಂತವಾಗಿ ಮುಂದುವರಿದರೆ ದಿನವೂ ನರಕಯಾತನೆ ಅನುಭವಿಸಬೇಕಾಗುತ್ತದೆ. ಸಂತೋಷದ ಜೀವನ ನಡೆಸಲು ನಮಗೆ ಹೊಂದುವ ವ್ಯಕ್ತಿಯೇ ಬೇಕಾಗುತ್ತದೆ..

ಇದನ್ನೂ ಓದಿ; ಚಿಕನ್‌ ಕರಿ ಸರಿಯಾಗಿ ಮಾಡಿಲ್ಲ ಪತ್ನಿಯನ್ನು ಮನೆ ಮೇಲಿಂದ ನೂಕಿದ ಪಾಪಿ; ವಿಡಿಯೋ ಇದೆ!

ಸಂಗಾತಿ ಸುಳ್ಳುಗಾರ, ಸುಳ್ಳುಗಾತಿಯಾಗಿದ್ದರೆ;

ನಿಮ್ಮ ಭವಿಷ್ಯದ ಸಂಗಾತಿಯು ಸುಳ್ಳು ಹೇಳುವ ಅಭ್ಯಾಸವನ್ನು ಹೊಂದಿದ್ದರೆ ತುಂಬಾನೇ ಸಮಸ್ಯೆ.. ಯಾಕಂದ್ರೆ ಒಮ್ಮೆ ಸುಳ್ಳು ಹೆಳ್ತಾರೆ ಎಂದು ಗೊತ್ತಾದರೆ, ನಂತರ ಅವರು ನಿಜ ಹೇಳಿದರೂ ಸುಳ್ಳು ಇರಬಹುದು ಎನಿಸುತ್ತದೆ.. ಆಗ ಅನುಮಾನ ಹೆಚ್ಚಾಗುತ್ತದೆ.. ಈ ಅನುಮಾನ ಗಲಾಟೆಗೆ ಕಾರಣವಾಗುತ್ತದೆ.. ಹೀಗಾಗಿ ಒಂದೋ ಎರಡೋ ತಪ್ಪುಗಳನ್ನು ಕ್ಷಮಿಸಬಹುದು.. ಆದ್ರೆ ಸುಳ್ಳು ಹೇಳುವುದೇ ಚಟವಾಗಿಸಿಕೊಂಡವರನ್ನು ಎಂದಿಗೂ ಸಂಗಾತಿಯನ್ನಾಗಿ ಮಾಡಿಕೊಳ್ಳಬೇಡಿ..

ಇದನ್ನೂ ಓದಿ; ಡಾ.ಕೆ.ಸುಧಾಕರ್‌ ಹೆಜ್ಜೆ ಇಟ್ಟಲ್ಲೆಲ್ಲಾ ಮುಳ್ಳು!; ಚಿಕ್ಕಬಳ್ಳಾಪುರದ ಅಗ್ನಿಪರೀಕ್ಷೆ ಗೆಲ್ತಾರಾ ಮಾಜಿ ಸಚಿವ..?

ಮನೋಧರ್ಮವನ್ನು ನಿಯಂತ್ರಿಸುವುದು;

ಮದುವೆಯ ನಂತರ, ಗಂಡ ಮತ್ತು ಹೆಂಡತಿ ಇಬ್ಬರೂ ಪರಸ್ಪರ ಹೊಂದಾಣಿಕೆಯಿಂದ ಜೀವನ ನಡೆಸಬೇಕು. ಇಬ್ಬರಿಗೂ ಜವಾಬ್ದಾರಿಗಳಿರುತ್ತವೆ.. ಹಿರಿಯರ ಸಲಹೆಗಳನ್ನು ಪಡೆದುಕೊಂಡು ಹೊಂದಾಣಿಕೆಯ ಜೀವನ ಮಾಡಬೇಕಾಗುತ್ತದೆ.. ಆದರೆ ನಿಮ್ಮ ಭವಿಷ್ಯದ ಸಂಗಾತಿಯು ನಿಮ್ಮ ಸ್ವಭಾವವನ್ನು ನಿಯಂತ್ರಿಸಿದರೆ ಅದು ಅಪಾಯಕಾರಿ ಪರಿಸ್ಥಿತಿ. ಮದುವೆಯ ನಂತರ ಆ ವ್ಯಕ್ತಿ ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸಬಹುದು. ಈ ರೀತಿ ಡ್ರೆಸ್ ಮಾಡಬೇಡಿ, ಅಲ್ಲಿಗೆ ಹೋಗಬೇಡಿ, ಆ ಸ್ನೇಹಿತನನ್ನು ಭೇಟಿಯಾಗಬೇಡಿ, ನನ್ನ ಅನುಮತಿಯಿಲ್ಲದೆ ಯಾರೊಂದಿಗೂ ಮಾತನಾಡಬೇಡಿ.. ಎಂದು ಹೇಳಿದರೆ ನಿಮಗೆ ಅದನ್ನು ಒಪ್ಪಿಕೊಳ್ಳಲು ಆಗುವುದಿಲ್ಲ. ಹೀಗಾಗಿ ಇಂತಹ ವಿಷಯಗಳನ್ನು ಸಹಿಸಬೇಡಿ.. ಸಂಬಂಧದಲ್ಲಿ ಪರಸ್ಪರ ತಿಳುವಳಿಕೆ ಮುಖ್ಯ.

ಅಪಹಾಸ್ಯ ಅಥವಾ ಅವಮಾನ;

ಸಂಗಾತಿ ನಿಮ್ಮನ್ನು ಗೌರವಿಸದಿದ್ದರೆ ಅವರಿಂದ ದೂರ ಇರುವುದು ಒಳ್ಳೆಯದು. ಏಕೆಂದರೆ ಕ್ರಮೇಣ ನೀವು ಕೀಳರಿಮೆಯನ್ನು ಬೆಳೆಸಿಕೊಳ್ಳುತ್ತೀರಿ. ಇದರಿಂದ ಮಾನಸಿಕ ತೊಂದರೆಯಾಗುತ್ತದೆ. ಮಾನಸಿಕ ಆರೋಗ್ಯಕ್ಕೆ ಎಂದಿಗೂ ಒಳ್ಳೆಯದಲ್ಲ. ನಿಮ್ಮ ಭಾವಿ ಸಂಗಾತಿ ದೊಡ್ಡ ತಪ್ಪು ಮಾಡಿದ ನಂತರವೂ ಕ್ಷಮೆ ಕೇಳದಿದ್ದರೆ ಅವರ ವರ್ತನೆ ತುಂಬಾ ಹಠಮಾರಿ ಎಂದು ಅರ್ಥ. ಯಾಕೆಂದರೆ ಒಬ್ಬ ವ್ಯಕ್ತಿ ತನ್ನ ತಪ್ಪನ್ನು ಒಪ್ಪಿಕೊಂಡ ನಂತರವೇ ಮುಂದೆ ಸಾಗಲು ಸಾಧ್ಯ.. ಅಂತಹ ವ್ಯಕ್ತಿ ಜೀವನದಲ್ಲಿ ಇರದಿರುವುದು ಉತ್ತಮ.

ಇದನ್ನೂ ಓದಿ; ಬಿಸಿಲಲ್ಲಿ ನೀವು ಮಾಡುವ ಮಿಸ್ಟೇಕ್‌ ಕ್ಯಾನ್ಸರ್‌ಗೆ ಕಾರಣವಾಗುತ್ತೆ ಹುಷಾರ್‌!

Share Post