ಮೇರಿ ಕ್ರಿಸ್‌ಮಸ್ ಹಬ್ಬ ಆಚರಿಸಿದ ಬಿಳಿ ಹಾವು: ನೆಟ್ಟಿಗರು ಫಿದಾ
ಸಾಮಾನ್ಯವಾಗಿ ಹಾವು ಎಂದ್ರೆ ಎಲ್ಲರಿಗೂ ಅದೊಂದು ವಿಷಪೂರಿತ ಪ್ರಾಣಿ ಎಂಬ ಭಯ. ಅದಕ್ಕೆ ಅಷ್ಟಾಗಿ ಯಾರೂ ಅದರ ಸಹವಾಸ ಮಾಡೋದಿಲ್ಲ. ಕೇವಲ ಝೂಗಳು ಮತ್ತು ಹಾವಾಡಿಗರ ಬಳಿ ಮಾತ್ರ ಹಾವುಗಳನ್ನು ಕಾಣ್ತಿದ್ವಿ. ಆದ್ರೆ ಇತ್ತೀಚಿನ ದಿನಗಳಲ್ಲಿ ಹಾವುಗಳನ್ನು ಸಾಕು ಪ್ರಾಣಿಗಳಂತೆ ಸಾಕುವುದನ್ನು ನಾವು ನೋಡಿದ್ದೇವೆ. ಅವುಗಳೊಂದಿಗೆ ಆಟ ಆಡುವುದು, ಸ್ನಾನ ಮಾಡಿಸುವುದು ಇಂತಹ ವಿಡಿಯೋಗಳೆಲ್ಲವೂ ವೈರಲ್ ಆಗಿದ್ದವು. ಅದರ ಜೊತೆಗೆ ಈಗ ಹಾವು ಹಬ್ಬ ಕೂಡ ಆಚರಿಸುತ್ತಿವೆ.
ಹೌದು ಇನ್ಸ್ಟಾಗ್ರಾಂನಲ್ಲಿ ಒಂದು ವಿಡಿಯೋ ಪೋಸ್ಟ್ ಆಗಿದೆ. ಅದರಲ್ಲಿ ಹಾವು ಕ್ರಿಸ್‌ಮಸ್ ಹಬ್ಬವನ್ನು ಆಚರಿಸಿಕೊಂಡಿದೆ. ತನ್ನ ತಲೆ ಮೇಲೆ ಸಾಂತಾ ಕ್ಲಾಸ್ ಟೋಪಿ ಧರಿಸಿ ಮನೆಯ ತುಂಬಾ ಖುಷಿಯಿಂದ ತೆವಳುತ್ತಿದೆ. ನೋಡೋಕೆ ಬೆಳ್ಳಗೆ ಇರುವ ಹಾವಿನ ತಲೆ ಮೇಲೆ ಕೆಂಪು ಬಣ್ಣದ ಸಾಂತಾ ಕ್ಲಾಸ್ ಟೋಪಿ ಇರಿಸಿದ್ದಾರೆ. ಇದು ನೋಡುಗರಿಗೆ ತುಂಬಾ ಮುದ್ದಾಗಿರುವ ಜೊತೆಗೆ ಆಶ್ಚರ್ಯ ಕೂಡಾ ಉಂಟುಮಾಡಿದೆ. ಹಾವಿನ ಬಗ್ಗೆ ಮನಸಲ್ಲಿ ದುಗುಡ ತುಂಬಿಕೊಂಡಿರುವವರು ಒಮ್ಮೆ ನೋಡಲೇ ಬೇಕಾದ ವಿಡಿಯೋ ಇದು