ಚಿಕನ್ ಕರಿ ಸರಿಯಾಗಿ ಮಾಡಿಲ್ಲ ಪತ್ನಿಯನ್ನು ಮನೆ ಮೇಲಿಂದ ನೂಕಿದ ಪಾಪಿ; ವಿಡಿಯೋ ಇದೆ!
ಕರಾಚಿ; ಮನೆಯಲ್ಲಿ ಗಂಡ-ಹೆಂಡತಿ ಜಗಳ ಕಾಮನ್.. ಅದ್ರಲ್ಲೂ ಅಡುಗೆ ಸರಿಯಾಗಿ ಮಾಡಿಲ್ಲ ಅಂತ ಕೆಲ ಗಂಡಂದಿರು ಜಗಳಕ್ಕಿಳಿಯೋದಿದೆ.. ಕೆಲವರು ಪತ್ನಿ ಮೇಲೆ ಹಲ್ಲೆ ಮಾಡಿದ ಉದಾಹರಣೆಗಳೂ ಸಿಗುತ್ತವೆ.. ಆದ್ರೆ ಪಾಕಿಸ್ತಾನದಲ್ಲಿ ವ್ಯಕ್ತಿಯೊಬ್ಬ, ಚಿಕನ್ ಕರಿ ರುಚಿಯಾಗಿ ಮಾಡಿಲ್ಲ ಅಂತ ಪತ್ನಿಯನ್ನು ಮನೆ ಮೇಲಿಂದ ಕೆಳಕ್ಕೆ ದೂಡಿದ್ದಾನೆ..
ಇದನ್ನೂ ಓದಿ; ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡ ಕಾಂಗ್ರೆಸ್; ಸುಪ್ರೀಂನಿಂದ ಬಿಗ್ ರಿಲೀಫ್!
ಎರಡನೇ ಮಹಡಿಯಿಂದ ದೂಡಿದ ಪತಿ!;
ಪಾಕಿಸ್ತಾನದ ಯಾವ ಪ್ರದೇಶದಲ್ಲಿ ಈ ಘಟನೆ ನಡೆದಿದೆಯೋ ಗೊತ್ತಿಲ್ಲ.. ಆದ್ರೆ ಟ್ವಿಟರ್ ನ್ನು ಸಿಸಿಟಿವಿ ವಿಡಿಯೋ ವೊಂದರನ್ನು ವ್ಯಕ್ತಿಯೊಬ್ಬರು ಅಪ್ಲೋಡ್ ಮಾಡಿದ್ದಾರೆ.. ಮಾರ್ಚ್ 30ರಂದು ಈ ವಿಡಿಯೋ ಅಪ್ ಲೋಡ್ ಮಾಡಲಾಗಿದ್ದು, ಚಿಕನ್ ಕರಿ ಸರಿಯಾಗಿ ಮಾಡದಿದ್ದಕ್ಕೆ ಹೀಗೆ ಗಂಡ ತನ್ನ ಪ್ರತ್ನಿಯನ್ನು ಎರಡನೇ ಮಹಡಿಯಿಂದ ದೂಡಿದ್ದಾನೆ ಎಂದು ಆರೋಪಿಸಲಾಗಿದೆ.. @ZafarHeretic ಎಂಬ ಟ್ವಿಟರ್ ಖಾತೆಯಿಂದ ಈ ವಿಡಿಯೋ ವನ್ನು ಅಪ್ಲೋಡ್ ಮಾಡಲಾಗಿದೆ..
ಭಾರೀ ಚರ್ಚೆಗೆ ಕಾರಣವಾಗಿರುವ ಘಟನೆ;
ಈ ವಿಡಿಯೋ ಹಂಚಿಕೊಳ್ಳುತ್ತಿದ್ದಂತೆ ಸೋಷಿಯಲ್ ಮೀಡಿಯಾದಲ್ಲಿ ಘಟನೆ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ.. ಒಂದೇ ದಿನದಲ್ಲಿ ಲಕ್ಷಾಂತರ ಜನ ಈ ವಿಡಿಯೋವನ್ನು ನೋಡಿದ್ದಾರೆ.. ಗಂಡನ ಪೈಶಾಚಿಕ ಕೃತ್ಯವನ್ನು ಖಂಡಿಸಿದ್ದಾರೆ.. ದೃಶ್ಯಗಳಲ್ಲಿ ಮಹಿಳೆಯ ಮನೆಯ ಮೇಲಿಂದ ಬೀಳುತ್ತಾಳೆ.. ಅದನ್ನು ನೋಡಿದ ಮಗುವೊಂದು ಹೆದರಿಕೊಂಡು ಮನೆಯೊಳಗೆ ಓಡಿಹೋಗುತ್ತದೆ.. ರಸ್ತೆಯಲ್ಲಿ ಬರುತ್ತಿದ್ದ ದಂಪತಿಯೊಬ್ಬರು ಆ ಮಹಿಳೆಯನ್ನು ರಕ್ಷಣೆ ಮಾಡುತ್ತಾರೆ.. ದೃಶ್ಯದಲ್ಲಿ ಮಹಿಳೆ ನೋವಿನಿಂದ ಕಿರುಚಾಡುತ್ತಿರುವುದು ಕಂಡುಬಂದಿದೆ.
ಇದನ್ನೂ ಓದಿ; ಬಿಸಿಲಲ್ಲಿ ನೀವು ಮಾಡುವ ಮಿಸ್ಟೇಕ್ ಕ್ಯಾನ್ಸರ್ಗೆ ಕಾರಣವಾಗುತ್ತೆ ಹುಷಾರ್!