HealthLifestyle

ತೀವ್ರ ಮಾನಸಿಕ ಒತ್ತಡ ಅನುಭವಿಸುತ್ತಿದ್ದೀರಾ..?; ಹಾಗಾದ್ರೆ ಈ ಸಲಹೆ ಪಾಲಿಸಿ

ಬೆಂಗಳೂರು; ಬ್ಯುಸಿ ಲೈಫ್‌ ನಲ್ಲಿ ಎಲ್ಲರೂ ಒತ್ತಡದಲ್ಲೇ ಜೀವನ ಸಾಗಿಸುತ್ತಿರುತ್ತಾರೆ.. ಅದ್ರಲ್ಲೂ ಕೊಂಚ ಆರ್ಥಿಕವಾಗಿ ಸಂಕಷ್ಟವಾದರೆ, ಇಲ್ಲವೇ ಕೌಟಿಂಬಿಕ ಸಮಸ್ಯೆಗಳಾದರೆ ಮತ್ತಷ್ಟು ಮಾನಸಿಕ ಒತ್ತಡಕ್ಕೆ ಸಿಲುಕುತ್ತಾರೆ.. ಇಂತಹವರ ಅದರಿಂದ ಹೊರಬರೋದಕ್ಕೆ ತುಂಬಾನೇ ಕಷ್ಟಪಡುತ್ತಿರುತ್ತಾರೆ.. ಕೆಲವರಂತೂ ಆತ್ಮಹತ್ಯೆಗೆ ಶರಣಾಗುತ್ತಾರೆ.. ಆದ್ರೆ ಒತ್ತಡ ಉಂಟಾದಾಗ ಸ್ವಲ್ಪ ಯೋಚನೆ ಮಾಡಬೇಕು.. ಒತ್ತಡ ಹೆಚ್ಚಾದರೆ ಮನೋವೈದ್ಯರ ಬಳಿ ಸಲಹೆಗಳನ್ನು ಪಡೆಯಬೇಕು.. ಜೊತೆಗೆ ನಮ್ಮ ಜೀವನದಲ್ಲಿ ಒಂದಷ್ಟು ಬದಲಾವಣೆಗಳನ್ನು ಮಾಡಿಕೊಂಡರೆ ಒತ್ತಡದಿಂದ ಹೊರಬರಬಹುದು.. ಆತ್ಮಹತ್ಯೆಯೊಂದೇ ಪರಿಹಾರವಾಗೋದಿಲ್ಲ..
ಮೊದಲಿಗೆ ನಿಮಗೆ ಒತ್ತಡ ಹೆಚ್ಚಾದರೆ ಯಾವ ವಿಷಯಗಳು ನಿಮಗೆ ಮಾನಸಿಕ ಒತ್ತಡಕ್ಕೆ ಕಾರಣವಾಗುತ್ತಿದೆ ಎಂಬುದನ್ನು ತಿಳಿಯಿರಿ.. ಕೆಲ ಸಮಯ ಅಂತಹ ವಿಷಯಗಳಿಂದ ದೂರ ಇರಬೇಕು.. ನಿಮಗೆ ತುಂಬಾ ತೊಂದರೆ ಕೊಡುವ ವಿಷಯಗಳನ್ನು ನೋಡಬೇಡಿ ಅಥವಾ ಕೇಳಬೇಡಿ. ಪ್ರತಿಯೊಂದು ಸಣ್ಣ ವಿಷಯವನ್ನೂ ಅತಿಯಾಗಿ ಯೋಚಿಸುವುದರಿಂದ ಮಾನಸಿಕವಾಗಿಯೂ ದಣಿವುಂಟಾಗುತ್ತದೆ. ಇದು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಟೆನ್ಷನ್‌ ಹೆಚ್ಚಿರುವವರು ಆಹಾರ ಸೇವಿಸುವುದರಿಂದ ದೂರವಿದ್ದು ಏನನ್ನೋ ಯೋಚನೆ ಮಾಡುತ್ತಿರುತ್ತಾರೆ.. ಆದ್ರೆ ಒತ್ತಡ ಹೆಚ್ಚಾದ ಸಮಯದಲ್ಲಿ ಉತ್ತಮ ಆಹಾರ ಸೇವಿಸುವುದು ತುಂಬಾನೇ ಒಳ್ಳೆಯದು.. ಆರೋಗ್ಯಕರ ಆಹಾರ ಸೇವನೆಯಿಂದ ಮೆದುಳು ಸಕ್ರಿಯವಾಗುತ್ತದೆ.. ಯಾವುದೇ ಕಟ್ಟ ಆಲೋಚನೆಘಲು ಬರದಂತೆ ತಡೆಯುತ್ತದೆ.. ಜೊತೆಗೆ ದೇಹ ಕ್ರಿಯಾಶೀಲವಾಗಿ ಒತ್ತಡ ಬಿಟ್ಟು ಕೆಲಸದ ಕಡೆ ಗಮನ ಕೊಡಲು ಸಹಾಯಕವಾಗುತ್ತದೆ.. ಹೀಗಾಗಿ ಖನಿಜಗಳು, ಜೀವಸತ್ವಗಳು ಹಾಗೂ ಉತ್ತಮವಾದ ಪೋಷಕಾಂಶಗಳನ್ನು ಹೊಂದಿರುವ ಆಹಾರವನ್ನು ಸೇವನೆ ಮಾಡುವುದು ಒಳ್ಳೆಯದು..
ಮಾನಸಿಕ ಒತ್ತಡ ಇದ್ದಾಗ ಆದಷ್ಟು ಜನರೊಂದಿಗೆ ಬೆರೆಯೋದಕ್ಕೆ ಪ್ರಯತ್ನ ಮಾಡಿ.. ನಿಮ್ಮ ಪ್ರೀತಿ ಪಾತ್ರರು, ನಿಮಗೆ ಒಳ್ಳೆಯದನ್ನು ಬಯಸುವವರ ಜೊತೆ ಸಮಾಲೋಚನೆ ಮಾಡಿ.. ಸಲಹೆಗಳನ್ನು ಪಡೆಯಿರಿ.. ಅದು ಬಿಟ್ಟು ಒಂಟಿಯಾಗಿರಲು ಹೋಗಬೇಡಿ.. ಒಂಟಿಯಾಗಿದ್ದರೆ ನಿಮ್ಮಲ್ಲಿ ಕೆಟ್ಟ ಆಲೋಚನೆಗಳು ಬೆಳೆಯುತ್ತವೆ..
ಸಮಸ್ಯೆಗಳ ಬಗ್ಗೆ ಯೋಚಿಸುತ್ತಾ ತುಂಬಾ ಜನ ನಿದ್ರೆಯನ್ನೂ ಮಾಡುವುದಿಲ್ಲ.. ನಿದ್ದೆಗೆಟ್ಟು ಯೋಚನೆ ಮಾಡುತ್ತಿರುತ್ತಾರೆ.. ಆದ್ರೆ ಕನಿಷ್ಠ ದಿನಕ್ಕೆ ಆರರಿಂದ ಎಂಟು ಗಂಟೆಯಾದರೂ ಚೆನ್ನಾಗಿ ನಿದ್ದೆ ಮಾಡಬೇಕು.. ಆಗ ಮಾತ್ರ ದಿನದಲ್ಲಿ ಚೆನ್ನಾಗಿ ಕೆಲಸ ಮಾಡೋದಕ್ಕೆ ಆಗುತ್ತದೆ. ಸರಿಯಾಗಿ ನಿದ್ದೆ ಮಾಡದೇ ಇದ್ದರೆ ಮಾನಸಿಕ ಒತ್ತಡ ಮತ್ತಷ್ಟು ಹೆಚ್ಚಾಗುತ್ತದೆ..
ಇನ್ನು ಪ್ರತಿದಿನ ಯೋಗ, ವ್ಯಾಯಾಮ ಧ್ಯಾನ ಮಾಡುವುದನ್ನು ರೂಢಿಸಿಕೊಳ್ಳಬೇಕು. ಮದ್ಯಪಾನ, ಧೂಮಪಾನದಂತಹ ಕೆಟ್ಟ ಅಭ್ಯಾಸಗಳನ್ನು ಕಡಿಮೆ ಮಾಡಿಕೊಳ್ಳಬೇಕು..

Share Post