ಈ ಹೂವಿನಿಂದ ಪೂಜಿಸಿದರೆ ಲಕ್ಷ್ಮೀ ಬಹುಬೇಗ ಒಲಿಯುತ್ತಾಳಂತೆ!
ಹಿಂದೂ ಪುರಾಣಗಳ ಪ್ರಕಾರ, ದೇವತೆಗಳಿಗೂ ಕೆಂಪು ಬಣ್ಣಕ್ಕೂ ಸಂಬಂಧವಿದೆ.. ದೇವತೆ ಎಂಬುದು ಶಕ್ತಿಯ ಮೂರ್ತರೂಪ.. ಈ ಬ್ರಹ್ಮಾಂಡದಲ್ಲಿ ಶಕ್ತಿಯು ಕೆಂಪು ಬಣ್ಣದಿಂದ ಕೂಡಿದೆ.. ಆದ್ದರಿಂದಲೇ ದೇವಿಯನ್ನು ಕೆಂಪು ಬಣ್ಣದಿಂದ ಒಲಿಸಿಕೊಳ್ಳಬಹುದು.. ಅದೂ ಕೂಡಾ ಲಕ್ಷ್ಮೀ ದೇವಿಯನ್ನು ಕೆಂಪು ಬಣ್ಣದ ದಾಸವಾಳದ ಹೂಗಳಿಂದ ಪೂಜಿಸುವುದರಿಂದ ಒಲಿಸಿಕೊಳ್ಳಬಹುದು..
ಇದನ್ನೂ ಓದಿ; ಡ್ರಗ್ಸ್ ಕೇಸ್‌ನಲ್ಲಿ ನಟಿ ರಕುಲ್ ಪ್ರೀತ್‌ಸಿಂಗ್ ಸಹೋದರ ಅರೆಸ್ಟ್!
ಯಾವ ದಿಕ್ಕಿನಲ್ಲಿ ದಾಸವಾಳ ಗಿಡ ಇಡಬೇಕು..?;
ಮನೆಯಲ್ಲಿ ಮುಂದೆ, ಮನೆಯ ಹಿತ್ತಿಲಲ್ಲಿ ಜಾಗವಿದ್ದರೆ ಹೂವಿನ ಗಿಡಗಳನ್ನು ನೆಡುತ್ತೇವೆ. ಆದ್ರೆ ಯಾವ ಹೂವಿನ ಗಿಡನ್ನು ಎಲ್ಲಿ ನೆಟ್ಟರೆ ಒಳ್ಳೆಯದು ಎಂಬುದನ್ನು ವಾಸ್ತು ಶಾಸ್ತ್ರ ಹೇಳುತ್ತದೆ.. ವಾಸ್ತು ಪ್ರಕಾರ ಹೂವಿನ ಗಿಡಗಳನ್ನು ಮನೆಯ ಆವರಣದಲ್ಲಿ ನೆಟ್ಟರೆ, ಮನೆಗೆ ಲಕ್ಷ್ಮೀಯ ಆಗಮನ ಖಂಡಿತವಾಗಿಯೂ ಆಗುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.. ವಾಸ್ತು ಪ್ರಕಾರ ಮನೆಯ ಪೂರ್ವ ಅಥವಾ ಉತ್ತರದ ದಿಕ್ಕಿನಲ್ಲಿ ದಾಸವಾಳ ಗಿಡವನ್ನು ಇಡಬೇಕು. ಹಾಗೆ ಮಾಡಿದರೆ, ಲಕ್ಷ್ಮೀಯನ್ನು ನಮ್ಮ ಮನೆಗೆ ಆಹ್ವಾನಿಸಿದಂತಾಗುತ್ತದೆ.
ದಾಸವಾಳ ಹೂ ಬಿಟ್ಟರೆ ಹಣದ ಆಗಮನ;
ಸೂರ್ಯ ದಿಕ್ಕು ಅಂದರೆ ಅದು ಪೂರ್ವ.. ಇನ್ನು ದಾಸವಾಳ ಹೂವಿನ ಬಣ್ಣ ಕೆಂಪು.. ಇದು ಸೂರ್ಯನನ್ನು ಪ್ರತಿನಿಧಿಸುತ್ತದೆ.. ಆದ್ದರಿಂದ ಪೂರ್ವ ದಿಕ್ಕಿಗೆ ದಾಸವಾಳ ಗಿಡವನ್ನು ನೆಟ್ಟರೆ ಸೌರಶಕ್ತಿಯ ಲಾಭವನ್ನು ಪಡೆಯುತ್ತೀರಿ. ಉತ್ತರ ದಿಕ್ಕು ದೇವರ ದಿಕ್ಕು. ಹಾಗಾಗಿ ಅಲ್ಲಿ ಕೆಂಪು ಗಿಡ ನೆಟ್ಟರೆ ದೇವಿಯ ಅನುಗ್ರಹ ಸಿಗುತ್ತದೆ. ಲಕ್ಷ್ಮಿ ದೇವಿಗೆ ಕೆಂಪು ಹೂವುಗಳೆಂದರೆ ತುಂಬಾ ಇಷ್ಟ.. ಇದರಿಂದಾಗಿ ಸಕಾರಾತ್ಮಕ ಶಕ್ತಿ ನಮ್ಮ ಮನೆಯನ್ನು ಆವರಿಸುತ್ತದೆ. ಆಗ ನಮ್ಮ ಮನೆಗೆ ಧನಾಗಮವಾಗುತ್ತದೆ.
ಇದನ್ನೂ ಓದಿ; ಹೆಂಡತಿಯ ಈ ಮೂರು ಅಭ್ಯಾಸಗಳು ಗಂಡನಿಗೆ ಇಷ್ಟವಾಗೋದಿಲ್ಲವಂತೆ..!
ಆರ್ಥಿಕ ಸಮಸ್ಯೆ ಸುಧಾರಿಸುತ್ತದಂತೆ!;
ನೀವು ಹಣಕಾಸಿನ ಸಮಸ್ಯೆಯಿಂದ ತೊಳಲಾಡುತ್ತಿದ್ದರೆ ಮತ್ತು ನಿಮ್ಮ ಆರ್ಥಿಕ ಪರಿಸ್ಥಿತಿಯು ಎಷ್ಟು ಪ್ರಯತ್ನಿಸಿದರೂ ಸುಧಾರಿಸದಿದ್ದರೆ, ಖಂಡಿತವಾಗಿಯೂ ನಿಮ್ಮ ಮನೆಯಲ್ಲಿ ದಾಸವಾಳದ ಹೂವಿನ ಗಿಡವನ್ನು ನೆಡಿ. ಮಹಾಲಕ್ಷ್ಮಿ ಖಂಡಿತವಾಗಿಯೂ ನಿಮ್ಮನ್ನು ಆಶೀರ್ವದಿಸುತ್ತಾಳೆ ಎನ್ನುತ್ತೆ ವಾಸ್ತು ಶಾಸ್ತ್ರ.
ಕೆಂಪು ದಾಸವಾಳವೇ ಶ್ರೇಷ್ಠ ಎನ್ನುತ್ತೆ ವಾಸ್ತುಶಾಸ್ತ್ರ;
ದಾಸವಾಳದ ಹೂವು ಹಲವು ಬಣ್ಣಗಳಲ್ಲಿ ಬರುತ್ತದೆ. ಆದರೆ ಕೆಂಪು ದಾಸವಾಳ ಹೂವು ಆರ್ಥಿಕ ಸಮಸ್ಯೆಗಳನ್ನು ಹೋಗಲಾಡಿಸುವಲ್ಲಿ ಅತ್ಯಂತ ಪರಿಣಾಮಕಾರಿ ಎಂದು ಹೇಳಲಾಗುತ್ತದೆ. ಶುಕ್ರವಾರದಂದು ನಿಮ್ಮ ಮನೆಯ ಸಮೀಪದಲ್ಲಿರುವ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಭೇಟಿ ನೀಡಿ ಮತ್ತು ದೇವಿಗೆ ಕೆಂಪು ಕುಂಕುಮವನ್ನು ಅರ್ಪಿಸಿ. ನಿಮ್ಮ ಹತ್ತಿರದಲ್ಲಿ ಅಮ್ಮನವರ ದೇವಸ್ಥಾನವಿಲ್ಲದಿದ್ದರೆ ಮನೆಯಲ್ಲಿ ಲಕ್ಷ್ಮಿಯ ಫೋಟೋಗೆ ಕೆಂಪು ಹೂವುಗಳಿಂದ ಸಿಂಗರಿಸಿ ಪೂಜೆ ಮಾಡಿ.
ಇದನ್ನೂ ಓದಿ; ಬಸವನಬಾಗೇವಾಡಿಯಲ್ಲಿ ರಣಭೀಕರ ಅಪಘಾತ; ಮೂವರ ದುರ್ಮರಣ!
11 ಶುಕ್ರವಾರ ಲಕ್ಷ್ಮೀ ಆರಾಧನೆ ಮಾಡಿದರೆ ಧನಾಗಮ;
11 ಶುಕ್ರವಾರದವರೆಗೆ ನಿರಂತರವಾಗಿ ಹೀಗೆ ಮಾಡಿದರೆ ಧನಾಗಮನವಾಗಿದೆ ಎನ್ನುತ್ತೆ ವಾಸ್ತುಶಾಸ್ತ್ರ. ದಾಸವಾಳದ ಹೂವಿನಿಂದ ಸೂರ್ಯನನ್ನು ಪೂಜಿಸಿದರೆ ಸೂರ್ಯನ ಕೃಪೆ ಸಿಗುತ್ತದೆ. ದಾಸವಾಳದ ಹೂವಿನಿಂದ ಸೂರ್ಯನನ್ನು ಪೂಜಿಸಿದರೆ ಜೀವನದಲ್ಲಿ ಪ್ರಗತಿಯಾಗುತ್ತದೆ. ಜೊತೆಗೆ ಲಕ್ಷ್ಮೀಯನ್ನೂ ಪೂಜಿಸಿದರೆ, ಮನೆಯ ಆರ್ಥಿಕ ಸ್ಥಿತಿ ಸಾಕಷ್ಟು ಉತ್ತಮವಾಗುತ್ತದೆ.
ಮಾಂಗಲ್ಯ ದೋಷ ಹೋಗಲಾಡಿಸುವ ದಾಸವಾಳ;
ನೀವು ಫ್ಲಾಟ್‌ನಲ್ಲಿ ವಾಸಿಸುತ್ತಿದ್ದರೆ, ನೀವು ಕುಂಡದಲ್ಲಿ ದಾಸವಾಳದ ಗಿಡವನ್ನು ನೆಡಬಹುದು. ಇದರಿಂದ ಬರುವ ಗಾಳಿ ಮನೆಯ ಋಣಾತ್ಮಕ ಶಕ್ತಿಯನ್ನು ದೂರ ಮಾಡುತ್ತದೆ. ಅಲ್ಲದೆ ಮಾಂಗಲ್ಯ ದೋಷವನ್ನು ಹೋಗಲಾಡಿಸಲು ಈ ಗಿಡವನ್ನು ನೆಡಲಾಗುತ್ತದೆ.
ಇದನ್ನೂ ಓದಿ; ಇಬ್ಬರನ್ನು ಕೊಲೆ ಮಾಡಿ ಸೂಟ್‌ಕೇಸ್‌ನಲ್ಲಿ ತಂದು ಬಿಸಾಡಿದ್ದ!
ಮಂಗಳ ಕೆಲವರಿಗೆ ದುರ್ಬಲವಾಗಿರುತ್ತದೆ. ಅವರಿಗೆ ಬೇಗ ಮದುವೆಯಾಗುತ್ತಿರುವುದಿಲ್ಲ. ಏನಾದರೂ ಅಡ್ಡಿಯಾಗುತ್ತಿರುತ್ತದೆ. ಅವರು ಮನೆ ಬಳಿ ದಾಸವಾಳದ ಗಿಡವನ್ನು ನೆಡಬೇಕು. ವಾಸ್ತು ಶಾಸ್ತ್ರದ ಪ್ರಕಾರ ಆ ಗಿಡದಿಂದ ಬರುವ ಕೆಂಪು ಹೂವುಗಳಿಂದ ಪೂಜೆ ಮಾಡಿದರೆ ಒಳ್ಳೆಯ ಫಲಿತಾಂಶ ಸಿಗುತ್ತದೆ.