CrimeDistrictsHealth

ಮನೆಗೆ 100 ಲೀಟರ್‌ ಪೆಟ್ರೋಲ್‌ ಸುರಿದು ಬೆಂಕಿ; ಇಬ್ಬರು ಸಜೀವದಹನ!

ಬಾಗಲಕೋಟೆ; ಶೆಡ್‌ಗೆ ಬೆಂಕಿ ಇಟ್ಟು ಇಬ್ಬರನ್ನು ಸಜೀವವಾಗಿ ದಹಿಸಿರುವ ದಾರುಣ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ.. ಹೊಲವೊಂದರದಲ್ಲಿ ಶೆಡ್‌ ಹಾಕಿ ಅದರಲ್ಲಿ ಐವರು ವ್ಯಕ್ತಿಗಳು ಜೀವನ ಸಾಗಿಸುತ್ತಿದ್ದರು.. ರಾತ್ರಿ ವೇಳೆ ಬಂದ ದುಷ್ಕರ್ಮಿಗಳು ಆ ಶೆಡ್‌ಗೆ ಬೆಂಕಿ ಇಟ್ಟಿದ್ದು, ಅಗ್ನಿ ಜ್ವಾಲೆಯಲ್ಲಿ ಇಬ್ಬರು ಮಹಿಳೆಯರು ಸುಟ್ಟು ಕರಕಲಾಗಿದ್ದಾರೆ.. ಉಳಿದ ಮೂವರು ಬಚಾವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ..

ಇದನ್ನೂ ಓದಿ; ಬಸವನಬಾಗೇವಾಡಿಯಲ್ಲಿ ರಣಭೀಕರ ಅಪಘಾತ; ಮೂವರ ದುರ್ಮರಣ!

ಬೆಳಗಲಿ ಬಳಿಯ ಹೊಲವೊಂದರಲ್ಲಿ ಈ ಘಟನೆ ನಡೆದಿದೆ.. ಮಹಾಲಿಂಗಪುರ ಮೂಲದವರಾದ ದಸ್ತಗಿರಿ ಸಾಬ್‌ ಎಂಬುವವರಿಗೆ ಸೇರಿದ ಶೆಡ್‌ ಇದಾಗಿದೆ.. ಮನೆಯಲ್ಲಿ ದಸ್ತಗೀರ್‌, ಸುಭಾನಾ, ಸಿದ್ದಿಕ್‌, ಶಬನಾ, ಜಯನಬಿ ಎಂಬುವವರು ವಾಸವಿದ್ದರು.. ಇದರಲ್ಲಿ ಮನೆಯ ಯಜಮಾನ ದಸ್ತಿಗೀರ್‌ ಅವರ ಮಗಳು ಶಬಾನಾ ಹಾಗೂ ಪತ್ನಿ ಜಯನಬಿ ಎಂಬುವವರು ಸಾವನ್ನಪ್ಪಿದ್ದಾರೆ.. ಉಳಿದ ಮೂವರು ಸುಟ್ಟು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ..

ಇದನ್ನೂ ಓದಿ; ಈ ಹೂವಿನಿಂದ ಪೂಜಿಸಿದರೆ ಲಕ್ಷ್ಮೀ ಬಹುಬೇಗ ಒಲಿಯುತ್ತಾಳಂತೆ!

100 ಲೀಟರ್‌ ಪೆಟ್ರೋಲ್‌ ಅನ್ನು ಶೆಡ್‌ ಮೇಲೆ ಮೋಟಾರ್‌ ಬಳಸಿ ಸಿಂಪಡಣೆ ಮಾಡಿರುವ ದುಷ್ಕರ್ಮಿಗಳು ನಂತರ ಶೆಡ್‌ಗೆ ಬೆಂಕಿ ಹಚ್ಚಿದ್ದಾರೆ.. ಮುಧೋಳ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.. ಯಾಕೆ ಈ ದಾಳಿ ನಡೆದಿದೆ ಎಂಬುದು ಇನ್ನೂ ಗೊತ್ತಾಗಿಲ್ಲ..

 

Share Post