CinemaCrime

ಡ್ರಗ್ಸ್‌ ಕೇಸ್‌ನಲ್ಲಿ ನಟಿ ರಕುಲ್‌ ಪ್ರೀತ್‌ಸಿಂಗ್‌ ಸಹೋದರ ಅರೆಸ್ಟ್‌!

ಹೈದರಾಬಾದ್‌; ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಡ್ರಗ್ಸ್‌ ದಂಧೆ ಜೋರಾಗಿ ನಡೆಯುತ್ತದೆ.. ಅದ್ರಲ್ಲೂ ಸಿನಿಮಾ ಮಂದಿಯಲ್ಲೇ ಕೆಲವರ ಹೆಸರು ಈ ದಂಧೆಯಲ್ಲಿ ಆಗಾಗ ಕೇಳಿ ಬರುತ್ತಿರುತ್ತದೆ.. ಕೆಲವರನ್ನು ಈ ಹಿಂದೆ ಹಲವರನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ ಕೂಡಾ. ಇದೀಗ ಮತ್ತೆ ಡ್ರಗ್ಸ್‌ ದಂಧೆ ವಿಚಾರ ದೊಡ್ಡದಾಗಿ ಸುದ್ದಿಯಾಗುತ್ತಿದೆ.. ಯಾಕಂದ್ರೆ ಈ ಬಾರಿ ಡ್ರಗ್ಸ್‌ ಮಾರಾಟದ ಆರೋಪದ ಮೇಲೆ ಟಾಲಿವುಡ್‌ ಸೇರಿ ಹಲವು ಭಾಷೆಗಳಲ್ಲಿ ನಟಿಸಿ ದೊಡ್ಡ ಹೆಸರು ಮಾಡಿರುವ ನಟಿ ರಕುಲ್‌ ಪ್ರೀತ್‌ ಸಿಂಗ್‌ ಅವರ ಸಹೋದರ ಅಮನ್‌ ಪ್ರೀತ್‌ ಸಿಂಗ್‌ ಅವರನ್ನು ಬಂಧಿಸಲಾಗಿದೆ..
ನಾರ್ಕೋಟಿಕ್ಸ್ ಬ್ಯೂರೋ ಮತ್ತು ರಾಜೇಂದ್ರ ನಗರ ಎಸ್‌ಒಟಿ ಪೊಲೀಸರು ಸೈಬರಾಬಾದ್ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ 2 ಕೋಟಿ ಮೌಲ್ಯದ 200 ಗ್ರಾಂ ಕೊಕೇನ್ ವಶಪಡಿಸಿಕೊಂಡಿದ್ದಾರೆ. ಡ್ರಗ್ಸ್ ಮಾರಾಟ ಮಾಡುತ್ತಿದ್ದ ನಾಲ್ವರು ನೈಜೀರಿಯನ್ನರು ಮತ್ತು ಸೆಲೆಬ್ರಿಟಿಗಳನ್ನು ಬಂಧಿಸಲಾಗಿದೆ. ಇದರಲ್ಲಿ ರಕುಲ್‌ ಪ್ರೀತ್‌ ಸಿಂಗ್‌ ಸಹೋದರ ಕೂಡಾ ಸೇರಿದ್ದಾನೆ ಎಂದು ತಿಳಿದುಬಂದಿದೆ.. ಐವರು ನೈಜೀಯರನ್ನರನ್ನು ಬಂಧಿಸಲಾಗಿದ್ದು, ಅವರಿಂದ ಡ್ರಗ್ಸ್‌ ಖರೀದಿ ಮಾಡಿದ ಐವರು ಪ್ರಮುಖರನ್ನು ಕೂಡಾ ಬಂಧಿಸಲಾಗಿದೆ.. ಇದರಲ್ಲಿ ಸಿನಿಮಾ ಹಾಗೂ ಉದ್ಯಮ ಕ್ಷೇತ್ರಕ್ಕೆ ಸಂಬಂಧಿಸಿದ ಸೆಲೆಬ್ರಿಟಿಗಳು ಹಾಗೂ ಅವರ ಸಂಬಂಧಿಗಳಿದ್ದಾರೆ ಎಂದು ತಿಳಿದುಬಂದಿದೆ..
ತುಂಬಾ ದಿನಗಳಿಂದ ತೆಲುಗು ಸಿನಿಮಾಗಳಿಂದ ದೂರ ಉಳಿದಿದ್ದ ರಾಕುಲ್ ಇತ್ತೀಚೆಗಷ್ಟೇ ಇಂಡಿಯನ್ 2 ಸಿನಿಮಾ ಮೂಲಕ ಮತ್ತೆ ಪ್ರೇಕ್ಷಕರ ಮುಂದೆ ಬಂದಿದ್ದರು..

Share Post