Bengaluru

ಬೆಂಗಳೂರಲ್ಲಿ ಇವತ್ತು ಮಳೆ ಬರುತ್ತೆ; ಮುಂದಿನ 5 ತಂಪೆರೆಯುವ ವರುಣ!

ಬೆಂಗಳೂರು; ಬೆಂಗಳೂರು ಸೇರಿ ರಾಜ್ಯದ ನಾನಾ ಕಡೆ ಬಿಸಿಲಿಗೆ ಜನ ತತ್ತರಿಸಿ ಹೋಗಿದ್ದಾರೆ.. ಕೊಂಚ ಮಳೆ ಬಂದಿದ್ದರೆ ಸಾಕು ಎಂದು ಜನ ಕಾಯುತ್ತಿದ್ದಾರೆ.. ಹೀಗಿರುವಾಗಲೇ ಇಂದಿನಿಂದ ರಾಜ್ಯಕ್ಕೆ ತಂಪೆರಲು ಮಳೆ ಬರಲಿದೆ ಎಂದು ಹವಾಮಾನ ಇಲಾಖೆ ಗುಡ್‌ ನ್ಯೂಸ್‌ ನೀಡಿದೆ..

ಇದನ್ನೂ ಓದಿ; ಬಿಎಂಟಿಸಿ ಬಸ್‌ ಚಾಲಕನ ಮೇಲೆ ಚಿರತೆ ಅಟ್ಯಾಕ್‌..!; ಬಸ್‌ಗೆ ನುಗ್ಗಿದ ಕಾಡುಮೃಗ!

ಐದು ದಿನಗಳ ಕಾಲ ಮಳೆಯ ಆಗಮನ;

ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ಐದು ದಿನಗಳ ಕಾಲ ಮಳೆ ಆಗಲಿದೆ ಎಂದು ಹಾವಾಮಾನ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.. ಎರಡು ದಿನಗಳ ಹಿಂದೆ ವಿಜಯಪುರ ಸುತ್ತಮುತ್ತ ಉತ್ತಮ ಮಳೆಯಾಗಿತ್ತು.. ಇದೀಗ ಮತ್ತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಸುರಿಯಲಿದೆ.. ಇಂದು ರಾತ್ರಿ ಬೆಂಗಳೂರಿನಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ..

ಇದನ್ನೂ ಓದಿ; ಆರ್‌ಸಿಬಿಯಲ್ಲಿ ಕನ್ನಡಿಗ ಆಟಗಾರರಿಗೆ ಬೆಲೆಯೇ ಇಲ್ಲವೇ..?; ವಿಜಯ್‌ಗೆ ಅವಕಾಶ ಸಿಗದಿದ್ದು ಯಾಕೆ..?

ದಕ್ಷಿಣ ಕರ್ನಾಟಕ ಹಾಗೂ ಕರಾವಳಿ ಭಾಗದಲ್ಲಿ ಮಳೆ;

ದಕ್ಷಿಣ ಕರ್ನಾಟಕ ಹಾಗೂ ಕರಾವಳಿ ಭಾಗಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.. ಕೊಡಗು, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಧಾರವಾಡ, ಉಡುಪಿ, ಹಾವೇರಿ, ಬೆಳಗಾವಿ, ಚಿತ್ರದುರ್ಗ, ಚಾಮರಾಜನಗರ, ತುಮಕೂರುಗಳಲ್ಲಿ ಮಳೆಯಾಗಲಿದೆ ಎಂದು ತಿಳಿದುಬಂದಿದೆ..

ಇದನ್ನೂ ಓದಿ; ಮೈಸೂರು ಕಾಂಗ್ರೆಸ್‌ ಅಭ್ಯರ್ಥಿ ಒಕ್ಕಲಿಗರಲ್ಲವೇ..?; ಪ್ರತಾಪ ಸಿಂಹ ಹೇಳೋದೇನು..?

ಬಿಸಿಗ ಧಗೆಗೆ ತತ್ತರಿಸಿರುವ ಜನರು;

ಇನ್ನು ಬೆಂಗಳೂರು ಸೇರಿದಂತೆ ರಾಜ್ಯದ ಜನ ಬಿಸಿಲ ಧಗೆಗೆ ತತ್ತರಿಸಿದ್ದಾರೆ… ಬೆಂಗಳೂರಿನಲ್ಲಿ ತಾಪಮಾನ 35 ಡಿಗ್ರಿ ಮೀರಿದೆ.. ಉತ್ತರ ಕರ್ನಾಟಕ ಭಾಗದಲ್ಲಿ ಅದು 40 ಡಿಗ್ರಿವರೆಗೂ ಮುಟ್ಟಿದೆ.. ಈ ಹಿನ್ನೆಲೆಯಲ್ಲಿ ಈಗ ಮಳೆ ಬಂದರೆ ಜನರಿಗೆ ಕೊಂಚ ನೆಮ್ಮದಿ ಸಿಗಲಿದೆ.. ಇನ್ನು ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆಯೂ ಎದುರಾಗಿದೆ… ಹೀಗಾಗಿ ಕೊಂಚ ಮಳೆ ಸುರಿದರೆ ಇರಿಂದ ನೀರಿನ ಸಮಸ್ಯೆಯೂ ಕೊಂಚ ನೀಗಲಿದೆ..

ಇದನ್ನೂ ಓದಿ; ಬರ್ತ್‌ ಡೇ ದಿನವೇ ಭೀಕರ ಅಪಘಾತ; ದೇವಸ್ಥಾನದ ಬಳಿಯೇ ತಾಯಿ, ಮಗು ದಾರುಣ ಸಾವು!

Share Post