ಕಳೆದ 3 ತಿಂಗಳಲ್ಲಿ ಅಂಬಾನಿಗೆ ಜಿಯೋ ಸಂಸ್ಥೆಯಿಂದ ಬಂದ ಲಾಭವೆಷ್ಟು ಗೊತ್ತಾ..?
ಮುಂಬೈ; ಇತ್ತೀಚೆಗೆ ಮುಖೇಶ್ ಅಂಬಾನಿಯವರು ತಮ್ಮ ಪುತ್ರ ಅನಂತ್ ಅಂಬಾನಿಯ ಮದುವೆ ಮಾಡಿದರು.. ಇದಕ್ಕೆ ಬರೋಬ್ಬರಿ 6 ಸಾವಿರ ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ ಎಂದು ಅಂದಾಜಿಸಲಾಗಿದೆ.. ಆದರೂ ಈ ಹಣ ಅಂಬಾನಿಗೆ ಏನೇನೂ ಅಲ್ಲ.. ಅದು ಅಂಬಾನಿ ಆಸ್ತಿಯಲ್ಲಿ ಶೇ.0.5ರಷ್ಟೂ ಇಲ್ಲ ಎಂದು ಕೆಲವರು ಲೆಕ್ಕ ಹಾಕುತ್ತಿದ್ದಾರೆ.. ಇದು ಪ್ರಪಂಚದ ಅತ್ಯಂತ ಜಿಪುಣತನತನ ಮದುವೆ.. ಸಾಮಾನ್ಯ ಜನರು ಕೂಡಾ ತಮ್ಮ ಆಸ್ತಿಯಲ್ಲಿ ಶೇಕಡಾ 20ರಷ್ಟಾದರೂ ತಮ್ಮ ಮಕ್ಕಳ ಮದುವೆಗೆ ಖರ್ಚು ಮಾಡುತ್ತಾರೆ.. ಆದ್ರೆ ಅಂಬಾನಿ ಕೇವಲ ಶೇ.0.5ರಷ್ಟು ಖರ್ಚು ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.. ಇನ್ನೊಂದೆಡೆ, ಕಳೆದ ಮೂರು ತಿಂಗಳಲ್ಲಿ ಬರೀ ಜಿಯೋ ಒಂದರಿಂದಲೇ ಅಂಬಾನಿಗೆ ಎಷ್ಟು ಹಣ ಬಂದಿದೆ ಎಂಬ ಲೆಕ್ಕಾಚಾರವನ್ನು ಕೂಡಾ ಕೆಲವರು ಮಾಡಿದ್ದಾರೆ..
ಇದನ್ನೂ ಓದಿ; ದಿನಕ್ಕೆ ಎರಡು ಖರ್ಜೂರ ತಿಂದರೆ ಸಾಕು ಫುಲ್ ಎನರ್ಜಿ ನಿಮ್ಮದಾಗುತ್ತೆ!
ರಿಲಯನ್ಸ್ ಜಿಯೋ ಲಾಭದ ಲೆಕ್ಕಾಚಾರ ಅಂದರೆ ಏಪ್ರಿಲ್, ಮೇ ಮತ್ತು ಜೂನ್ ತಿಂಗಳ ಲಾಭದ ಲೆಕ್ಕಾಚಾರ ಹೊರಬಿದ್ದಿದೆ.. ರಿಲಯನ್ಸ್ ಜಿಯೋ ಇನ್ಫೋಕಾಮ್ನ ಮೊದಲ ತ್ರೈಮಾಸಿಕ ಫಲಿತಾಂಶಗಳು ಕಳೆದ ವರ್ಷಕ್ಕಿಂತ ಹೆಚ್ಚಿನ ಲಾಭವನ್ನು ತೋರಿಸಿದೆ. ಕಳೆದ ವರ್ಷದ ಮೊದಲ ತ್ರೈಮಾಸಿಕ ನಿವ್ವಳ ಲಾಭ ರೂ. 4,863 ಕೋಟಿ ರೂಪಾಯಿ. ಈ ಬಾರಿ ಲಾಭ 5,445 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಅಂದರೆ ಕಳೆದ ವರ್ಷಕ್ಕೆ ಹೋಲಿಸಿದರೆ ನಿವ್ವಳ ಲಾಭದಲ್ಲಿ ಶೇ.12ರಷ್ಟು ಏರಿಕೆಯಾಗಿದೆ.
ಇದನ್ನೂ ಓದಿ; ಯಾಕೋ ಗುರಾಯಿಸ್ತೀಯಾ ಅಂದಿದ್ದಕ್ಕೆ ನಡೆದೇ ಹೋಯ್ತು ಕೊಲೆ!