ಇಂದು ಮಧ್ಯರಾತ್ರಿ ಒಳಗಾಗಿ ಕೀವ್ ನಗರ ತೊರೆದು ಬನ್ನಿ-ಭಾರತೀಯರಿಗೆ ರಾಯಭಾರಿ ಕಚೇರಿ ಸೂಚನೆ
ಕೀವ್: ಉಕ್ರೇನ್‌ನಲ್ಲಿ ರಷ್ಯಾ ಯುದ್ಧ ತಾಂಡವ ಹೆಚ್ಚಾಗಿದೆ. ಈಗಾಗಲೇ ರಷ್ಯಾ ಶೆಲ್ ದಾಳಿಗೆ ರಾಜ್ಯದ ವಿದ್ಯಾರ್ಥಿ ನವೀನ್ ಬಲಿಯಾಗಿದ್ದಾನೆ. ಈ ನಿಟ್ಟಿನಲ್ಲಿ ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಮತ್ತೊಂದು ಎಚ್ಚರಿಕೆಯ ಸಂದೇಶವನ್ನು ನೀಡಿದೆ. ಇಂದು ಮಧ್ಯರಾತ್ರಿ ಒಳಗಾಗಿ ಭಾರತೀಯರು ಕೀವ್ ನಗರವನ್ನು ತೊರೆಯಿರಿ ರಂದು ಸೂಚನೆ ನೀಡಿದೆ. ಪ್ರಧಾನಿ ಮೋದಿ ಕೂಡ ಈ ಬಗ್ಗೆ ಮಾತನಾಡಿದ್ದು, ಕೂಡಲೇ ಕೀವ್ ತೊರೆದು ಬರುವಂತೆ ನಿಮಗಾಗಿ ಭಾರತೀಯ ವಾಯಸೇನೆ ಬರಲಿದೆ ಎಂಭ ಸಂದೇಶವನ್ನು ನೀಡಿದ್ದಾರೆ.
ಏರ್ ಇಂಡಿಯಾ ವಿಮಾನದಲ್ಲಿ 250 ಮಂದಿ ಪ್ರಯಾಣಿಸಬಹುದು, ಆದರೆ ಏರ್ ಫೋರ್ಸ್ ಸಿ-17 ಒಂದು ಬಾರಿಗೆ 1000 ಜನರನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯ ಹೊಂದಿದೆ. ಹಲವು ದಿನಗಳಿಂದ ಏರ್ ಇಂಡಿಯಾ ಮೂಲಕ ಕರೆತರುವ ಪ್ರಯತ್ನ ಮಾಡಿತ್ತು. ಒಮ್ಮೆಲೆ ಕೀವ್ನಲ್ಲಿರುವ ಎಲ್ಲಾ ಭಾರತೀಯರನ್ನು ಸ್ಥಳಾಂತರಿಸಬೇಕಾಗಿದೆ.
ಯುದ್ಧ ಶುರುವಾಗುವ ಮೊದಲೇ ಉಕ್ರೇನ್ ತೊರೆದು ವಿದ್ಯಾರ್ಥಿಗಳು ಭಾರತಕ್ಕೆ ಬರುವಂತೆ ಇಂಡಿಯನ್ ಎಂಬಸಿ ಆದೇಶ ನೀಡಿತ್ತು. ಆದರೆ ಅದನ್ನು ನೆಗ್ಲೆಕ್ಟ್ ಮಾಡಿದ ಕಾರಣ ಇಂದು ವಿದ್ಯಾರ್ಥಿಗಳು ಪ್ರಾಣ ಕೈಯಲ್ಲಿಇಡಿದು ಬದುಕುತ್ತಿದ್ದಾರೆ. ಇದೀಗ ಇದ್ದಕ್ಕಿದ್ದಂತೆ ಕೀವ್ ನಗರ ಖಾಲಿ ಮಾಡಿ ಎಂಬ ಆದೇಶ ಹೊರಡಿಸಿದೆ. ಇದರ ಹಿಂದೆ ಎಂತಹ ಅನಾಹುತ ಕಾದಿದೆಯೋ ತಿಳಿದಿಲ್ಲ. ಗುಪ್ತಚರ ಇಲಾಖೆ ಮಾಹಿತಿ ಮೇರೆಗೆ ರಷ್ಯಾ ದೊಡ್ಡ ಪ್ರಮಾಣದಲ್ಲಿ ದಾಳಿ ನಡೆಸಬಹುದು ಎಂಬ ಶಂಕೆ ವ್ಯಕ್ತವಾಗುತ್ತಿದೆ.