InternationalLifestyle

ರೆಸ್ಟೋರೆಂಟ್‌ನಲ್ಲಿ ಫ್ಲೈಓವರ್‌ಗಳು, ರಸ್ತೆಗಳು; ವೈರಲ್‌ ಆಗ್ತಿದೆ ಈ ಸ್ಪೆಷಲ್‌ ರೆಸ್ಟೋರೆಂಟ್‌

ಬೀಜಿಂಗ್‌(ಚೀನಾ); ಇತ್ತೀಚಿಗೆ ಬಗೆಬಗೆಯ ಥೀಮ್ ಹೊಂದಿರುವ ಹೋಟೆಲ್ ಗಳು ಎಲ್ಲರನ್ನೂ ಆಕರ್ಷಿಸುತ್ತಿವೆ. ಗ್ರಾಹಕರನ್ನು ಮೆಚ್ಚಿಸಲು ರೆಸ್ಟೋರೆಂಟ್‌ ಮಾಲೀಕರು ವಿವಿಧ ರೀತಿಯಲ್ಲಿ ಪ್ರಯತ್ನಿಸುತ್ತಿದ್ದಾರೆ. ಅದರಲ್ಲೂ ಚೀನಾದ ರೆಸ್ಟೋರೆಂಟ್ ಒಂದು ಜನರನ್ನು ತುಂಬಾನೇ ಆಕರ್ಷಿಸುತ್ತಿದೆ. ಅದರ ವಿಡಿಯೋ ಒಂದು ಕೂಡಾ ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟು ವೈರಲ್‌ ಆಗುತ್ತಿದೆ.

ಚೀನಾ ವಿಶ್ವದ ಕೆಲವು ಅದ್ಭುತ ಕಟ್ಟಡಗಳಿಗೆ ಸಾಕ್ಷಿಯಾಗಿದೆ. ಅಲ್ಲಿರುವ ಕೆಲವು ರೆಸ್ಟೋರೆಂಟ್‌ಗಳು ಮತ್ತು ಅಂಗಡಿಗಳು ಸಹ ನವೀನವಾಗಿವೆ. ಚೀನಾದ ಚಾಂಗ್‌ಕಿಂಗ್ ನಲ್ಲಿ ವಿವಿಧ ಆಕಾರದ ರೆಸ್ಟೋರೆಂಟ್ ಗಳಿವೆ. ಅದರಲ್ಲೊಂದು ರೆಸ್ಟೋರೆಂಟ್‌ ಸಾಕಷ್ಟು ಸದ್ದು ಮಾಡುತ್ತಿದೆ. ದುಂಡನೆಯ ಆಕಾರದ ರೆಸ್ಟೊರೆಂಟ್ ಅನ್ನು ಕಾಂಕ್ರೀಟ್ ಪೈಪ್‌ಗಳಿಂದ ಸ್ಧೂಪ್ ಆಕಾರದಲ್ಲಿ ನಿರ್ಮಿಸಲಾಗಿದೆ.

ಪೈಪ್‌ ಬೂತ್‌ಗಳಲ್ಲಿ ಆಹಾರ ಸೇವಿಸಲು ಸಾಧ್ಯವಾಗದವರಿಗೆ ರೆಸ್ಟೊರೆಂಟ್‌ನ ಹೊರಗಿನ ಟೇಬಲ್‌ ಮೇಲೆಯೂ ಊಟ ಬಡಿಸಲಾಗುತ್ತದೆ. ಹಸಿರು ಮರಗಳ ನಡುವೆ ಹಿತಕರವಾದ ವಾತಾವರಣದಲ್ಲಿ ಇಷ್ಟವಾದ ಆಹಾರವನ್ನು ತಿನ್ನಲು ಬಯಸುವವರಿಗೆ ಇದು ಉತ್ತಮ ಸ್ಥಳವಾಗಿದೆ. ಈ ರೆಸ್ಟೋರೆಂಟ್‌ನಿಂದ ಫ್ಲೈ ಓವರ್‌ಗಳು ಮತ್ತು ರಸ್ತೆಗಳನ್ನು ನೋಡಬಹುದು.

ಚಾಂಗ್‌ಕಿಂಗ್ ನಗರವನ್ನು ಸಂಪೂರ್ಣ ನೈಸರ್ಗಿಕ ಸೌಂದರ್ಯದಿಂದ ಹೆಸರಿಸಲಾಗಿದೆ. ಈ ಹಿಂದೆ ಇಲ್ಲಿನ ಪ್ರಕೃತಿಗೆ ಸಂಬಂಧಿಸಿದ ಹಲವು ವಿಡಿಯೋಗಳು ವೈರಲ್ ಆಗಿದ್ದವು. ಈ ರೆಸ್ಟೋರೆಂಟ್ ಪ್ರಸ್ತುತ ಈ ನಗರದಲ್ಲಿ ಸುಂದರವಾದ ಕಾಡುಗಳ ನಡುವೆ ಗ್ರಾಹಕರನ್ನು ಆಕರ್ಷಿಸುತ್ತಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ರಾತ್ರಿ ಊಟಕ್ಕೆ ಇದು ಪರ್ಫೆಕ್ಟ್ ರೆಸ್ಟೋರೆಂಟ್ ಎಂದು ಕಮೆಂಟ್ ಮಾಡಿದ್ದಾರೆ. ಏನೇ ಆಗಲಿ, ರೆಸ್ಟೊರೆಂಟ್ ಗಳನ್ನು ಸ್ಥಾಪಿಸಲು ಬಯಸುವವರು ಈ ಕ್ರಿಯಾಶೀಲತೆಯನ್ನು ತೋರಿದರೆ ಮಾತ್ರ ಜನರನ್ನು ಆಕರ್ಷಿಸಲು ಸಾಧ್ಯ.

Share Post