HealthLifestyle

ಚಿಕ್ಕ ವಯಸ್ಸಿಗೇ ಕೂದಲು ಬಿಳಿಯಾಗುವುದು ಏಕೆ..?; ಅದನ್ನು ತಡೆದು ಹೇಗೆ..?

ಬೆಂಗಳೂರು; ವಯಸ್ಸಾದಂತೆ ಕೂದಲು ಬೆಳ್ಳಗಾಗುತ್ತಿದ್ದವು.. ಆದ್ರೆ ಇತ್ತೀಚಿನ ದಿನಗಳಲ್ಲಿ ಚಿಕ್ಕ ಮಕ್ಕಳಿಗೂ ಕೂಡಾ ಕೂದಲು ಬೆಳ್ಳಗಾಗುತ್ತಿವೆ.. ನಮ್ಮ ಜೀವನ ಶೈಲಿಯಲ್ಲಿನ ಬದಲಾವಣೆಯಿಂದಾಗಿಯೇ ಇದಕ್ಕೆ ಕಾರಣ.. ಸರಿಯಾದ ಪೌಷ್ಠಕಾಂಶಯುಕ್ತ ಆಹಾರ ಸೇವಿಸದೇ ಜಂಕ್‌ ಫುಡ್‌ ತಿಂದು ಜೀವನ ಸಾಗಿಸುವುದು, ವಾಯು ಮಾಲಿನ್ಯ ಮುಂತಾದ ಕಾರಣಗಳಿಂದ ಈ ಸಮಸ್ಯೆ ಉಂಟಾಗುತ್ತದೆ.. ಚಿಕ್ಕ ವಯಸ್ಸಿನಲ್ಲೇ ಬಿಳಿ ಕೂದಲು ಬಂದರೆ ಅವರಲ್ಲಿ ಕೀಳರಿಮೆ ಮೂಡುತ್ತದೆ.. ಹೀಯಾಳಿಸುವವರೂ ಜಾಸ್ತಿಯಾಗುತ್ತಾರೆ.. ಇಂತಹವರು ಬಿಳಿ ಕೂದಲು ಬರುವುದನ್ನು ತಡೆಯಬಹುದು.. ಅದಕ್ಕಾಗಿ ತಜ್ಞರು ಒಂದಷ್ಟು ಸಲಹೆಗಳನ್ನು ಕೊಟ್ಟಿದ್ದಾರೆ..

ಇದನ್ನೂ ಓದಿ;ಸಿಎಂ ಆಪ್ತ ಎಂದು ಹೇಳಿಕೊಂಡು ಜಿಲ್ಲಾ ಆರೋಗ್ಯಾಧಿಕಾರಿಗೆ 7 ಲಕ್ಷ ರೂಪಾಯಿ ವಂಚನೆ!

ಇತ್ತೀಚಿನ ದಿನಗಳಲ್ಲಿ 16 ವರ್ಷದ ಮಕ್ಕಳಿಗೂ ಬಿಳಿ ಕೂದಲು ಬರುತ್ತಿವೆ.. ಅದ್ರಲ್ಲೂ 25 ವರ್ಷ ವಯಸ್ಸಿನವರಲ್ಲಿ ಹೆಚ್ಚಾಗಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ.. ಇದರಿಂದಾಗಿ ಮದುವೆಯಾಗೋ ವಿಚಾರದಲ್ಲಿ ಸಮಸ್ಯೆಯಾಗಿ ಕೆಲವರು ಮಾನಸಿಕವಾಗಿ ಒತ್ತಡಕ್ಕೆ ಒಳಗಾಗುವುದೂ ಇದೆ.. ಈ ಸಮಸ್ಯೆಗೆ ಪೋಷಕಾಂಶಗಳ ಕೊರತೆ ಪ್ರಮುಖ ಕಾರಣ ಎಂದು ತಜ್ಞರು ಹೇಳುತ್ತಾರೆ.. ವಿಟಮಿನ್ ಬಿ 12, ಡಿ 3, ಥೈರಾಯ್ಡ್, ಸೀರಮ್ ಫೆರಿಟಿನ್ ಪರೀಕ್ಷೆಗಳು ಬಿಳಿ ಕೂದಲು ಬರಲು ಪ್ರಮುಖ ಕಾರಣ ಎಂದು ತಿಳಿದುಬಂದಿದೆ..

ಇದನ್ನೂ ಓದಿ; ಮೂತ್ರ ವಿಸರ್ಜನೆ ಮಾಡುವಾಗ ಪ್ರವಹಿಸಿದ ವಿದ್ಯುತ್‌; ಯುವಕ ಸಾವು!

ಬಿಳಿ ಕೂದಲು ಶುರುವಾಗಿದ್ದರೆ ವೈದ್ಯರ ಬಳಿ ಹೋಗಿ ರಕ್ತ ಪರೀಕ್ಷೆ ಮಾಡಿಸಬೇಕು.. ಆಗ ಯಾವ ವಿಟಮಿನ್‌ ಕಡಿಮೆ ಇದೆ ಎಂದು ಗೊತ್ತಾಗುತ್ತದೆ.. ಆ ಪೋಷಕಾಂಶಗಳನ್ನು ದೇಹಕ್ಕೆ ನೀಡುತ್ತಾ ಬಂದರೆ ಬಿಳಿಕೂದಲಾಗುವುದು ಕಡಿಮೆಯಾಗುತ್ತದೆ.. ಮದ್ಯಪಾನ, ಸಿಗರೇಟ್ ಸೇರಿ ಹಲವು ಕೆಟ್ಟ ಹಾಗೂ ಅನಾರೋಗ್ಯಕರ ಚಟಗಳು ಕೂಡಾ ಬಿಳಿ ಕೂದಲು ಬರಲು ಅವಕಾಶ ನೀಡುತ್ತವೆ.. ಇನ್ನು, ಜಂಕ್ ಫುಡ್ ಹೆಚ್ಚಾಗಿ ಸೇವಿಸುವುದು, ತಡವಾಗಿ ಮಲಗುವುದು ಕೂಡಾ ಬಿಳಿಕೂದಲಿಗೆ ಕಾರಣವಾಗಬಹುದು..

ಇದನ್ನೂ ಓದಿ; ನೇಪಾಳದಲ್ಲಿ ಭಾರೀ ಭೂಕುಸಿತ; 63ಕ್ಕೂ ಹೆಚ್ಚು ಮಂದಿ ನಾಪತ್ತೆ!

Share Post