ನೇಪಾಳದಲ್ಲಿ ಭಾರೀ ಭೂಕುಸಿತ; 63ಕ್ಕೂ ಹೆಚ್ಚು ಮಂದಿ ನಾಪತ್ತೆ!
ನೇಪಾಳ; ನೇಪಾಳದಲ್ಲಿ ಕೆಲ ದಿನಗಳಿಂದ ಭಾರೀ ಮಳೆ ಸುರಿಯುತ್ತಿದ್ದು, ಅವಾಂತರ ಸೃಷ್ಟಿಯಾಗಿದೆ.. ಹಲವು ಕಡೆ ದುರಂತಗಳು ನಡೆದಿವೆ.. ಮದನ್-ಆಶೀರ್ ಹೆದ್ದಾರಿಯಲ್ಲಿ ಭೂಕುಸಿತ ಉಂಟಾಗಿ ಸಮಸ್ಯೆಯಾಗಿದೆ.. ಭೂಕುಸಿತದಿಂದಾಗಿ ಎರಡು ಬಸ್‌ಗಳು ನದಿಗೆ ಉರುಳಿಬಿದ್ದಿದ್ದು, ಬಸ್‌ಗಳಲ್ಲಿದ್ದ 63 ಪ್ರಯಾಣಿಕರು ನಾಪತ್ತೆಯಾಗಿದ್ದಾರೆ.. ಅವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ..
ಇದನ್ನೂ ಓದಿ; ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿಗೆ ಹಣವಿಲ್ಲ; ಬಸವರಾಜರಾಯ ರೆಡ್ಡಿ
ತ್ರಿಶೂಲ್ ನದಿಯಲ್ಲಿ ಬಸ್‌ಗಳು ಕೊಚ್ಚಿಹೋಗಿದ್ದು, ನೀರಿನಲ್ಲಿ ತೇಲುತ್ತಿವೆ.. ರಕ್ಷಣಾ ಕಾರ್ಯಾಚರಣೆ ಬಿರುಸಿನಿಂದ ಸಾಗಿದೆ.. ಘಟನೆಯಲ್ಲಿ 90 ಮಂದಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗಳಿಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.. ಉಳಿದಂತೆ 63 ಮಂದಿ ನಾಪತ್ತೆಯಾಗಿದ್ದು, ಬಹುತೇಕ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ..
ಇದನ್ನೂ ಓದಿ; ವರ್ಷಕ್ಕೆ 436 ರೂಪಾಯಿ ಕಟ್ಟಿದರೆ 2 ಲಕ್ಷ ರೂಪಾಯಿ ವಿಮೆ!
ನಾಪತ್ತೆಯಾದವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.. ಮಳೆಯಿಂದಾಗಿ 121 ಮನೆಗಳು ಮುಳುಗಿವೆ. ಮುಳುಗು ತಜ್ಞರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ..