CrimeLifestyle

ಗಟ್ಟಿಮೇಳಕ್ಕೆ ಸರಿಯಾಗಿ ಮೊಬೈಲ್‌ ಮೊಳಗಿತು..!; ಮದುವೆ ಕ್ಯಾನ್ಸಲ್‌ ಮಾಡಿ ಹೊರಟ ವರ..!

ಲಕ್ನೋ; ಇನ್ನೇನು ತಾಳಿ ಕಟ್ಟುವ ಸಮಯ.. ಗಟ್ಟಿಮೇಳ ಮೊಳಗಬೇಕಿತ್ತು.. ಆದ್ರೆ ಆಗ ಮೊಳಗಿದ್ದು ವರನ ಮೊಬೈಲ್‌.. ಆ ಕಡೆಯಿಂದ ನಾನು ನೀನು ಮದುವೆಯಾಗುತ್ತಿರುವ ಹುಡುಗಿಯ ಪ್ರಿಯತಮ.. ಆಕೆಯನ್ನು ನೀನು ಮದುವೆಯಾದರೆ ಪರಿಸ್ಥಿತಿ ನೆಟ್ಟಗಿರೋದಿಲ್ಲ ಅಂತ ಬೆದರಿಕೆ ಹಾಕಿದ್ದಾನೆ.. ಆದ್ರೆ ವರ ನೀನು ಆಕೆಯನ್ನು ಪ್ರೀತಿಸುತ್ತಿದ್ದೀಯಾ ಎಂಬುದಕ್ಕೆ ಸಾಕ್ಷಿ ಏನು ಅಂತ ಕೇಳಿದ್ದಾನೆ.. ಹಾಗೆ ಕೇಳಿದ್ದೇ ತಡ ವಾಟ್ಸಾಪ್‌ ಮೂಲಕ ವಧುವಿನ ಜೊತೆಗಿರುವ ಫೋಟೋಗಳನ್ನು ಹಾಗೂ ಖಾಸಗಿ ವಿಡಿಯೋಗಳನ್ನು ಕಳುಹಿಸಿದ್ದಾನೆ.. ಅದನ್ನು ನೋಡುತ್ತಲೇ ವರ ಮದುವೆ ಪೀಠದಿಂದ ಮೇಲೆದ್ದಿದ್ದಾನೆ.. ಮದುವೆ ಕ್ಯಾನ್ಸಲ್‌ ಮಾಡಿಕೊಂಡು ಹೊರಟುಬಿಟ್ಟಿದ್ದಾನೆ..

ಇದನ್ನೂ ಓದಿ; ನೇಪಾಳದಲ್ಲಿ ಭಾರೀ ಭೂಕುಸಿತ; 63ಕ್ಕೂ ಹೆಚ್ಚು ಮಂದಿ ನಾಪತ್ತೆ!

ಈ ಘಟನೆ ನಡೆದಿರೋದು ಉತ್ತರ ಪ್ರದೇಶದ ಅಮ್ರೊಹ್‌ ಎಂಬ ಸ್ಥಳದಲ್ಲಿ.. ಕಮಲ್‌ ಸಿಂಗ್‌ ಎಂಬಾತನೇ ಕರೆ ಮಾಡಿದವನು.. ಈಗ ಕಮಲ್‌ ಸಿಂಗ್‌ ವಿರುದ್ಧ ವಧುವಿನ ಪೋಷಕರು ದೂರು ದಾಖಲಿಸಿದ್ದಾರೆ.. ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ..

ಇದನ್ನೂ ಓದಿ; ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿಗೆ ಹಣವಿಲ್ಲ; ಬಸವರಾಜರಾಯ ರೆಡ್ಡಿ

Share Post