CrimeNational

ಪಬ್ಲಿಕ್‌ನಲ್ಲೇ ಅಪ್ರಾಪ್ತಳ ತಬ್ಬಿ ಕಿಸ್‌ ಮಾಡಿದ ಐಸ್‌ಕ್ರೀಮ್‌ ಮಾರಾಟಗಾರ!

ಭೋಪಾಲ್‌; ಐಸ್‌ಕ್ರೀಮ್‌ ಕೊಳ್ಳಲು ಬಂದ ಅಪ್ರಾಪ್ತ ಬಾಲಕಿಯನ್ನು ಪಬ್ಲಿಕ್‌ನಲ್ಲೇ ತಬ್ಬಿ ಐಸ್‌ಕ್ರೀಮ್‌ ಮಾರಾಟಗಾರ ಕಿಸ್‌ ಮಾಡಿದ್ದಾನೆ.. ಮಧ್ಯಪ್ರದೇಶದ ಭೋಪಾಲ್‌ನ ಜಹಾಂಗೀರಾಬಾದ್‌ನಲ್ಲಿ ಈ ಘಟನೆ ನಡೆದಿದೆ. 11 ವರ್ಷ ಬಾಲಕಿಯನ್ನು ಐಸ್‌ಕ್ರೀಮ್‌ ಗಾಡಿಯ ಮೇಲೆ ಹತ್ತಿಸಿದ ಕಾಮುಕ, ಆಕೆಯನ್ನು ತಬ್ಬಿ ಕಿಸ್‌ ಮಾಡಿದ್ದಾನೆ.. ಇದರಿಂದ ವಿಚಲಿತಳಾದ ಬಾಲಕಿ ಆತನಿಂದ ತಪ್ಪಿಸಿಕೊಂಡು ಓಡಿಹೋಗಿದ್ದಾಳೆ..

ಇದನ್ನೂ ಓದಿ; ಗಂಡ ಕಪ್ಪಾಗಿದ್ದಾನೆ ಎಂದು ಪ್ರಿಯಕರನ ಜೊತೆ ಎಸ್ಕೇಪ್‌; ಒಂದು ತಿಂಗಳ ಮಗು ಅನಾಥ!

ಈ ಕೃತ್ಯವನ್ನು ಸ್ಥಳೀಯರು ಮೊಬೈಲ್‌ನಲ್ಲಿ ರೆಕಾರ್ಡ್‌ ಮಾಡಿಕೊಂಡಿದ್ದಾರೆ.. ಈ ವಿಡಿಯೋ ಈಗ ಎಲ್ಲಡೆ ವೈರಲ್‌ ಆಗಿದೆ.. ಯಾವಾಗ ವಿಡಿಯೋ ಹೊರಬಂತೂ ವಿಷಯ ಬಾಲಕಿಯ ಪೋಷಕರಿಗೆ ಗೊತ್ತಾಗಿದೆ. ಬಾಲಕಿಯ ತಾಯಿ ಪೊಲೀಸರಿಗೆ ದೂರು ನೀಡಿದ್ದು, ಆರೋಪಿ ಕಲ್ಪಿ ಎಂಬಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ..

ಇದನ್ನೂ ಓದಿ; ಬಿಗ್ ಬಾಸ್ ಮಾಜಿ ಸ್ಪರ್ಧಿ ಪ್ರಿಯಕರನ ಜೊತೆಯ ಅರೆಬೆತ್ತಲೆ ಫೋಟೋ ವೈರಲ್

Share Post