ಹೃದಯಾಘಾತಕ್ಕೆ ವಿರಕ್ತ ಮಠದ ಸಿದ್ದರಾಮ ಸ್ವಾಮೀಜಿ ಬಲಿ!
ಕಲಬುರಗಿ; ಇಂದು ನಸುಕಿನ ಜಾವ ತೀವ್ರ ಹೃದಯಾಘಾತಕ್ಕೆ ತುತ್ತಾಗಿ ಕಲಬುರಗಿಯ ಕಾಳಗಿ ತಾಲೂಕಿನ ವಿರಕ್ತ ಮಠದ ಶ್ರೀ ಸಿದ್ದರಾಮ ಮಹಾಸ್ವಾಮಿ (35) ಸಾವನ್ನಪ್ಪಿದ್ದಾರೆ.. ನಿನ್ನೆಯಷ್ಟೇ ವಚನ ಸಂಗಮ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸ್ವಾಮೀಜ ತುಂಬಾ ಆರೋಗ್ಯದಿಂದ ಇದ್ದರು.. ಜೊತೆಗೆ ಕಡಿಮೆ ವಯಸ್ಸಿನ ಸ್ವಾಮೀಜಿ, ದಿಢೀರ್ ಹೃದಯಘಾತದಿಂದ ಇಹಲೋಕ ತ್ಯಜಿಸಿದ್ದಾರೆ..
ನಿನ್ನೆ ಸ್ವಾಮೀಜಿಯವರು ರಟಕಲ್ ಗ್ರಾಮದಲ್ಲಿ ನಡೆದ ವಚನ ಸಂಗಮ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.. ಇದ್ರಲ್ಲಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಹಲವು ಗಣ್ಯರು ಕೂಡಾ ಉಪಸ್ಥಿತರಿದ್ದರು.. ಕಾರ್ಯಕ್ರಮ ಮುಗಿಸಿಕೊಂಡು ಬಂದಿದ್ದ ಸ್ವಾಮೀಜಿ ಮಠದಲ್ಲಿ ಮಲಗಿದ್ದರು. ಆದ್ರೆ ಬೆಳಗಿನ ಜಾವ ಸ್ವಾಮೀಜಿ ಹೃದಯಘಾತಕ್ಕೆ ಬಲಿಯಾಗಿದ್ದಾರೆ..
ಇಂದು ಸಂಜೆ ಐದು ಗಂಟೆಗೆ ರಟಕಲ್ ಗ್ರಾಮದಲ್ಲಿ ಶ್ರೀಗಳ ಅಂತ್ಯಕ್ರಿಯೆ ನಡೆಯಲಿದೆ..