ಶ್ರಾವಣದ ಮೊದಲ ದಿನವೇ ದುರಂತ; ವಿದ್ಯುತ್ ಸ್ಪರ್ಶಿಸಿ 9 ಮಂದಿ ದುರ್ಮರಣ!
ಬಿಹಾರ; ಶ್ರಾವಣದ ಮೊದಲ ದಿನವೇ ಬಿಹಾರದಲ್ಲಿ ದೊಡ್ಡ ದುರಂತ ನಡೆದಿದೆ.. ವಿದ್ಯುತ್ ಸ್ಪರ್ಶ ಮಾಡಿ 9 ಮಂದಿ ಕನ್ವಾರಿಗಳು ಸಾವನ್ನಪ್ಪಿದ್ದಾರೆ.. ಮೊದಲ ಶ್ರಾವಣ ಸೋಮವಾರವಾದ್ದರಿಂದ ಕನ್ವಾರಿಗಳು ನದಿಯಲ್ಲಿ ನೀರು ತರಲು ಹೋಗಿದ್ದರು.. ಪಹೇಲಜಾ ಘಾಟ್‌ನಿಂದ ನೀರು ಹೊತ್ತುಕೊಂಡು ಬಾಬಾ ಹರಿಹರನಾಥ ದೇಗುಲಕ್ಕೆ ಹೊರಟಿದ್ದಾಗ 11 ಸಾವಿರ ವೋಲ್ಟ್ ವಿದ್ಯುತ್ ತಂತಿಗೆ ಟ್ರಾಲಿ ತಾಗಿದೆ.. ಇದರಿಂದಾಗಿ 9 ಮಂದಿ ಕನ್ವಾರಿಗಳು ಸಾವನ್ನಪ್ಪಿದ್ದಾರೆ..
ಇದನ್ನೂ ಓದಿ; ಮಂಡ್ಯದ ಈ ಬಾಲಕ ಸಾಯಿಬಾಬಾ ಮೂರನೇ ಅವತಾರವಂತೆ!
ಡಿಜೆ ಹಾಡುಗಳನ್ನು ಹಾಕಲಾಗಿತ್ತು.. ಇದಕ್ಕೆ ಎಲ್ಲರೂ ನೃತ್ಯ ಮಾಡುತ್ತಾ ನೀರು ತೆಗೆದುಕೊಂಡು ದೇವಸ್ಥಾನಕ್ಕೆ ಹೋಗುತ್ತಿದ್ದರು.. ಈ ವೇಳೆ 11 ಸಾವಿರ ವೋಲ್ಟ್ ಇರುವ ವಿದ್ಯುತ್ ಸ್ಪರ್ಶಿಸಿ ಬಂದು 9 ಮಂದಿ ಸುಟ್ಟು ಕರಕಲಾಗಿದ್ದಾರೆ. ರವಿಕುಮಾರ್, ರಾಜ್‌ಕುಮಾರ್, ನವೀನ್ ಕುಮಾರ್, ಅಮರೇಶ್ ಕುಮಾರ್, ಅಶೋಕ್ ಕುಮಾರ್, ಕಾಲು ಕುಮಾರ್, ಆಶಿಕುಮಾರ್ ಚಂದನ್ ಕುಮಾರ್ ಹಾಗೂ ಅಮೋದ್ ಕುಮಾರ್ ಎಂಬುವವರೇ ಸಾವನ್ನಪ್ಪಿದವರು ಎಂದು ಗುರುತಿಸಲಾಗಿದೆ..
ಇದನ್ನೂ ಓದಿ; ವಾಕಿಂಗ್ ಮಾಡುತ್ತಿದ್ದ ಮಹಿಳೆಯನ್ನು ಬಲವಂತವಾಗಿ ಚುಂಬಿಸಿದ ಆಗಂತುಕ!
ರಾಜೀವ್ ಕುಮಾರ್ ಸೇರಿ ಮೂವರು ತೀವ್ರವಾಗಿ ಅಸ್ವಸ್ಥರಾಗಿದ್ದಾರೆ.. ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.. ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ..