NationalPolitics

Breaking; ನಾಳೆಯೇ ಚುನಾವಣಾ ಬಾಂಡ್‌ ವಿವರ ಬೇಕು; ಎಸ್‌ಬಿಐಗೆ ಸುಪ್ರೀಂ ಖಡಕ್‌ ಸೂಚನೆ

ನವದೆಹಲಿ; ಚುನಾವಣಾ ಬಾಂಡ್‌ಗಳ ಮೂಲಕ ರಾಜಕೀಯ ಪಕ್ಷಗಳು ಪಡೆದಿರುವ ದೇಣಿಗೆ ಮಾಹಿತಿಯನ್ನು ಬಹಿರಂಗ ಪಡಿಸುವಂತೆ ಸುಪ್ರೀಂಕೋರ್ಟ್‌ ಮತ್ತೊಮ್ಮೆ ಎಸ್‌ಬಿಐ ಬ್ಯಾಂಕ್‌ಗೆ ತಾಕೀತು ಮಾಡಿದೆ. ನಾಳೆಯೊಳಗೆ ಚುನಾವಣಾ ಬಾಂಡ್‌ ವಿವರಗಳನ್ನು ಕೇಂದ್ರ ಚುನಾವಣಾ ಆಯೋಗಕ್ಕೆ ನೀಡಬೇಕು ಹಾಗೂ ಮಾರ್ಚ್‌ 15ರೊಳಗೆ ವಿವರಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟ ಮಾಡಬೇಕೆಂದು ಖಡಕ್‌ ಸೂಚನೆ ಕೊಡಲಾಗಿದೆ. ಇದರಿಂದಾಗಿ ಮಾಹಿತಿ ಒದಗಿಸಲು ಹಿಂದೇಟು ಹಾಕುತ್ತಿದ್ದ, ಏನೇನೋ ಸಬೂಬು ಹೇಳುತ್ತಿದ್ದ ಎನ್‌ಬಿಐಗೆ ಸಂಕಷ್ಟ ಶುರುವಾಗಿದೆ. ನಾಳೆಯೊಳಗೆ ಮಾಹಿತಿ ಒದಗಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಇದನ್ನೂ ಓದಿ;Loksabha; ರಾಜ್ಯಕ್ಕೆ ಬರಲಿದ್ದಾರೆ ಪ್ರಧಾನಿ ಮೋದಿ; ಮಾರ್ಚ್‌ 15-19ರವರೆಗೆ ಭರ್ಜರಿ ಕ್ಯಾಂಪೇನ್‌

ಜೂನ್‌ವರೆಗೆ ಸಮಯ ಕೇಳಿದ್ದ ಎಸ್‌ಬಿಐ;

ಜೂನ್‌ವರೆಗೆ ಸಮಯ ಕೇಳಿದ್ದ ಎಸ್‌ಬಿಐ; ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಲು ಕೇಂದ್ರ ಬಿಜೆಪಿ ಸರ್ಕಾರ ಎಲೆಕ್ಷನ್‌ ಬಾಂಡ್‌ಗಳನ್ನು ಪರಿಚಯಿಸಿತ್ತು.. ಎನ್‌ಬಿಐ ಬ್ಯಾಂಕ್‌ ನ ಮೂಲಕ ರಾಜಕೀಯ ಪಕ್ಷಗಳಿಗೆ ಎಲೆಕ್ಷನ್‌ ಬಾಂಡ್‌ ಖರೀದಿ ಮಾಡಿ ದೇಣಿಗೆ ನೀಡಬಹುದಾಗಿತ್ತು.. ಆದ್ರೆ ಇದನ್ನು ಸುಪ್ರೀಂ ಕೋರ್ಟ್‌ ಇತ್ತೀಚೆಗೆ ರದ್ದು ಮಾಡಿತ್ತು. ಜೊತೆಗೆ ಈಗಾಗಲೇ ರಾಜಕೀಯ ಪಕ್ಷಗಳಿಗೆ ಪಾವತಿಯಾದ ಮೊತ್ತದ ವಿವರ ನೀಡುವಂತೆ ಸುಪ್ರೀಂ ಕೋರ್ಟ್‌ ಸೂಚನೆ ಕೊಟ್ಟಿತ್ತು. ಆದ್ರೆ ಎಸ್‌ಬಿಐ ಬ್ಯಾಂಕ್‌ ಈ ಮಾಹಿತಿ ಒದಗಿಸೋದಕ್ಕೆ ಹಿಂದೇಟು ಹಾಕಿತ್ತು. ಮಾಹಿತಿ ಒದಗಿಸಲು ತಡವಾಗುತ್ತದೆ. ಇದಕ್ಕಾಗಿ ಜೂನ್‌ 30ರವರೆಗೆ ಅವಕಾಶ ನೀಡಬೇಕೆಂದು ಮನವಿ ಮಾಡಿಕೊಂಡಿತ್ತು. ಆದ್ರೆ ಎಸ್‌ಬಿಐ ಮನವಿಯನ್ನು ಸುಪ್ರೀಂ ಕೋರ್ಟ್‌ ಮಾನ್ಯ ಮಾಡಿಲ್ಲ. ಬದಲಾಗಿ, ನಾಳೆಯೇ ಮಾಹಿತಿ ಒದಗಿಸುವಂತೆ ಖಡಕ್‌ ಸೂಚನೆ ಕೊಟ್ಟಿದೆ.

ಇದನ್ನೂ ಓದಿ;ಬೆಂಗ್ಳೂರಲ್ಲಿ ಪ್ರಭಾಸ್‌-ಅಲ್ಲು ಅರ್ಜುನ್‌ ಫ್ಯಾನ್ಸ್‌ ಕಿತ್ತಾಟ; ಓರ್ವನಿಗೆ ಹಿಗ್ಗಾಮುಗ್ಗಾ ಥಳಿತ!

ಯಾರು ಚುನಾವಣಾ ಬಾಂಡ್‌ ಖರೀದಿಸಬಹುದಿತ್ತು..?;

ಚುನಾವಣಾ ಬಾಂಡ್​ ಯೋಜನೆ ಪ್ರಕಾರ, ದೇಶದ ಯಾವುದೇ ಪ್ರಜೆ ಅಥವಾ ದೇಶದ ಯಾವುದೇ ಘಟಕ ಈ ಚುನಾವಣಾ ಬಾಂಡ್‌ ಖರೀದಿಸಬಹುದು. ಯಾವುದೇ ವ್ಯಕ್ತಿ ಏಕಾಂಗಿಯಾಗಿ ಅಥವಾ ಇತರ ವ್ಯಕ್ತಿಗಳ ಸಹಯೋಗದಲ್ಲೂ ಬಾಂಡ್‌ಗಳ ಖರೀದಿಗೆ ಅವಕಾಶವಿದೆ. 1951ರ ಜನತಾ ಪ್ರಾತಿನಿಧ್ಯ ಕಾಯಿದೆಯ ಸೆಕ್ಷನ್ 29(A) ಅಡಿಯಲ್ಲಿ ನೋಂದಾಯಿಸಲ್ಪಟ್ಟ ರಾಜಕೀಯ ಪಕ್ಷಗಳು ಈ ಬಾಂಡ್‌ಗಳನ್ನು ಪಡೆಯುತ್ತಿದ್ದವು. ಲೋಕಸಭೆ ಅಥವಾ ವಿಧಾನಸಭೆಗೆ ಕಳೆದ ಚುನಾವಣೆಯಲ್ಲಿ ಕನಿಷ್ಠ ಒಂದು ಶೇಕಡಾ ಮತಗಳನ್ನು ಗಳಿಸಿದ ಪಕ್ಷಗಳು ಚುನಾವಣಾ ಬಾಂಡ್‌ಗಳನ್ನು ಪಡೆಯಬಹುದಾಗಿತ್ತು. ಬಾಂಡ್‌ಗಳನ್ನು ಅಧಿಕೃತ ಬ್ಯಾಂಕ್ ಖಾತೆಯ ಮೂಲಕ ಅರ್ಹ ರಾಜಕೀಯ ಪಕ್ಷ ಎನ್‌ಕ್ಯಾಶ್ ಮಾಡಬಹುದಾಗಿತ್ತು.

ಇದನ್ನೂ ಓದಿ; ಮೈಸೂರು-ಕೊಡಗು ಲೋಕಸಭಾ; ಶೃಂಗೇರಿಗೆ ಭೇಟಿ ನೀಡಿದ ಯದುವೀರ್‌!

ಏನಿದು ಚುನಾವಣಾ ಬಾಂಡ್‌..? ಇದರ ಖರೀದಿ ಹೇಗೆ..?;

ಜನಸಾಮಾನ್ಯರು ಹಾಗೂ ಕಾರ್ಪೊರೇಟ್ ಸಂಸ್ಥೆಗಳು ರಾಜಕೀಯ ಪಕ್ಷಗಳಿಗೆ ನೀಡುವ ಒಂದು ವಿಧದ ದೇಣಿಯೇ ಚುನಾವಣಾ ಬಾಂಡ್‌.. 1,000 ರೂಪಾಯಿ, 10,000 ರೂಪಾಯಿ, 1 ಲಕ್ಷ ರೂಪಾಯಿ, 10 ಲಕ್ಷ ರೂಪಾಯಿ, 1 ಕೋಟಿ ರೂಪಾಯಿ ಇತ್ಯಾದಿ ಮುಖಬೆಲೆಗಳಲ್ಲಿ ಬಾಂಡ್​ಗಳನ್ನು ಖರೀದಿಸಲು ಅವಕಾಶವಿತ್ತು. ಈ ಬಾಂಡ್​ಗಳು ಅನಾಮಧೇಯವಾಗಿದ್ದು, ಇದನ್ನು ಖರೀದಿಸಿದ ವ್ಯಕ್ತಿ ಅಥವಾ ಸಂಸ್ಥೆಯ ಹೆಸರು ಬಹಿರಂಗ ಪಡಿಸುತ್ತಿರಲಿಲ್ಲ. ಯಾವ ರಾಜಕೀಯ ಪಕ್ಷಕ್ಕೆ ದೇಣಿಗೆ ಕೊಡಲಾಗಿದೆ ಎಂಬುದೂ ಬಹಿರಂಗವಾಗುತ್ತಿರಲಿಲ್ಲ.

ಇತ್ತೀಚಿನ ಚುನಾವಣೆಯಲ್ಲಿ ಶೇ.1ಕ್ಕೂ ಹೆಚ್ಚು ಮತ ಪಡೆದ ಯಾವುದೇ ಪಕ್ಷ ಕೂಡಾ ಎಲೆಕ್ಟ್ರೋರಲ್ ಬಾಂಡ್ ಅಕೌಂಟ್ ತೆರೆಯಬಹುದಾಗಿತ್ತು. ಎಲೆಕ್ಟೋರಲ್ ಬಾಂಡ್ ಖರೀದಿಸಿದ ಬಳಿಕ 15 ದಿನದೊಳಗೆ ಆ ಹಣವನ್ನು ಎನ್​ಕ್ಯಾಷ್ ಮಾಡ್ಕೋಬಹುದಿತ್ತು. ತಪ್ಪಿದರೆ ಆ ಹಣ ಪಿಎಂ ರಾಷ್ಟ್ರೀಯ ಪರಿಹಾರ ನಿಧಿಗೆ ಹೋಗುತ್ತಿತ್ತು. ಆದ್ರೆ ಇನ್ಮೇಲೆ ಇದಕ್ಕೆ ಅವಕಾಶವಿರುವುದಿಲ್ಲ.

ಇದನ್ನೂ ಓದಿ;ನೀವು ಬಳಸುತ್ತಿರುವ ಅರಿಶಿನ ಅಸಲಿಯಾ..? ನಕಲಿಯಾ..?; ಹೀಗೆ ಪರೀಕ್ಷೆ ಮಾಡಿ!

Share Post