Lifestyle

ಮಂಡ್ಯದ ಈ ಬಾಲಕ ಸಾಯಿಬಾಬಾ ಮೂರನೇ ಅವತಾರವಂತೆ!

ಬೆಂಗಳೂರು; ಸಾಯಿಬಾಬಾ ಮೂರು ಬಾರಿ ಜನಿಸುತ್ತಾರೆ.. ಮೂರು ಅವತಾರಗಳಲ್ಲಿ ಜನರಿಗೆ ಆಶೀರ್ವಾದ ನೀಡುತ್ತಾರೆ ಎಂದು ಹಲವರು ನಂಬಿದ್ದಾರೆ.. ಶಿರಡಿ ಸಾಯಿಬಾಬಾ ಆಗಿ ಬಂದಿದ್ದ ಸಾಯಿಬಾಬು, ಎರಡನೇ ಅವತಾರದಲ್ಲಿ ಪುಟ್ಟಪರ್ತಿಯಲ್ಲಿ ಸತ್ಯ ಸಾಯಿಬಾಬಾ ಆಗಿ ಜನಿಸಿದ್ದರು.. ಸತ್ಯ ಸಾಯಿಬಾಬಾ ಸಾವನ್ನಪ್ಪಿದಾಗ ಮೂರನೇ ಅವತಾರವಾಗಿ ಮೈಸೂರು-ಮಂಡ್ಯ ಭಾಗದಲ್ಲಿ ಜನಿಸುತ್ತಾರೆ ಎಂದು ಹೇಳಲಾಗಿತ್ತು.. ಅವರು ಪ್ರೇಮ ಸಾಯಿಬಾಬ ಎಂದು ಭಕ್ತರು ನಂಬಿದ್ದಾರೆ.. ಈ ನಡುವೆ ಮಂಡ್ಯ ಭಾಗದಲ್ಲಿ 2012ರ ಜೂನ್‌ 28ರಂದು ಪ್ರೀತಮ್‌ ಎಂಬ ಬಾಲಕ ಜನಿಸಿದ್ದಾನೆ.. ಆತನೇ ಪ್ರೇಮ ಸಾಯಿಬಾಬಾ ಎಂದು ಹಲವರು ನಂಬಿದ್ದಾರೆ..

ಇದನ್ನೂ ಓದಿ; ತಿರುಪತಿಗೆ ಹೋಗುತ್ತಿದ್ದ ರೈಲಿಗೆ ಬೆಂಕಿ; 3 ಬೋಗಿಗಳು ಸುಟ್ಟು ಭಸ್ಮ!

ಸತ್ಯ ಸಾಯಿಬಾಬಾ ಅವರು ಸಾಯುವ ಸಮಯದಲ್ಲಿ ನಾನು ಮಂಡ್ಯ-ಮೈಸೂರು ಭಾಗದಲ್ಲಿ ಜನಿಸುವುದಾಗಿ ಹೇಳಿದ್ದರು.. ಅದಕ್ಕೆ ಪುಷ್ಠಿ ಎಂಬಂತೆ ಈಗ 2012ರ ಜೂನ್‌ 28 ರಂದು ಜನಿಸಿದ ಪ್ರೀತಮ್‌ ಎನ್ನುವ ಹುಡುಗನೇ ಪ್ರೇಮ್‌ ಸಾಯಿ ಎಂದು ಹೇಳಿಕೊಳ್ಳುವಂಥ ಸೋಶಿಯಲ್‌ ಮೀಡಿಯಾ ಪೋಸ್ಟ್‌ ಒಂದು ಈಗ ವೈರಲ್‌ ಆಗುತ್ತಿದೆ.. ಸ್ವ್ಯಾಟೋಸ್ಲಾವ್ ಡುಬಿಯಾನ್ಸ್ಕಿ ಎನ್ನುವ ವ್ಯಕ್ತಿ ಈ ಹುಡುಗನ ಪೋಸ್ಟ್‌ಗಳನ್ನು ಇನ್ಸ್‌ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.. ಈತನೇ ಪ್ರೇಮಸಾಯಿ ಎಂದು ಅವರು ಹೇಳುತ್ತಿದ್ದಾರೆ..

ಇದನ್ನೂ ಓದಿ; ಬ್ಯಾಂಕ್‌ ಕಳುವಿಗೆ ಯತ್ನಿಸಿ ವಿಫಲವಾದ ಮಹಿಳೆ!

ಹೊವಾರ್ಡ್ ಮರ್ಫೆಟ್ ಅವರ Invitation to Glory ಪುಸ್ತಕದ ನಾಲ್ಕನೇ ಅಧ್ಯಾಯದಲ್ಲಿ ‘ಅಂತಿಮವಾಗಿ, ಸತ್ಯಸಾಯಿ ಹೇಳುವಂತೆ, ಪ್ರೇಮ ಸಾಯಿ ಅವರು ಸತ್ಯಸಾಯಿ ರೂಪವನ್ನು ತಳೆದ ಒಂದು ವರ್ಷದ ನಂತರ, ಕರ್ನಾಟಕದಲ್ಲಿ (ಹಳೆಯ ಮೈಸೂರು ರಾಜ್ಯ) ಬೆಂಗಳೂರು ಮತ್ತು ಮೈಸೂರು ನಗರದ ನಡುವಿನ ಸ್ಥಳದಲ್ಲಿ ಜನಿಸುತ್ತಾರೆ ಎಂದು ಬರೆದಿರುವುದನ್ನು ನಾವು ಇಲ್ಲಿ ನೆನಪಿಸಿಕೊಳ್ಳಬಹುದು.

Share Post