LifestyleNational

ದೇಗುಲದ ನಿರ್ವಹಣೆಗೂ ಬಂದಿದೆ ಡಿಪ್ಲೊಮಾ ಕೋರ್ಸ್‌; ಏನು ಕಲಿಸ್ತಾರೆ ಇದ್ರಲ್ಲಿ..?

ಮುಂಬೈ; ದೇಶದಲ್ಲಿ ಯಾವ್ಯಾವುದೋ ಕೋರ್ಸ್‌ಗಳು ಬಂದಿದಾವೆ. ಈಗ ಆ ಕೋರ್ಸ್‌ಗಳ ಲೀಸ್ಟ್‌ಗೆ ಟೆಂಪಲ್‌ ಮ್ಯಾನೇಜ್‌ಮೆಂಟ್‌ ಡಿಪ್ಲೊಮಾ ಕೂಡಾ ಸೇರಿದೆ. ಹೌದು, ದೇಗುಲಗಳ ನಿರ್ವಹಣೆಗೂ ಡಿಪ್ಲೊಮಾ ಕೋರ್ಸ್‌ ತೆರೆಯಲಾಗಿದೆ. ದೊಡ್ಡ ದೊಡ್ಡ ದೇವಾಲಯಗಳ ನಿರ್ವಹಣೆಗೆ ಈ ಕೋರ್ಸ್‌ನಿಂದ ಅನುಕೂಲವಾಗುತ್ತದೆ ಎಂದು ಹೇಳಲಾಗುತ್ತಿದೆ.

ಈ ಟೆಂಪಲ್‌ ಮ್ಯನೇಜ್‌ಮೆಂಟ್‌ ಕೋರ್ಸ್‌ನ್ನು ಮುಂಬೈ ವಿಶ್ವವಿದ್ಯಾಲಯ ಆರಂಭಿಸುತ್ತಿದೆ. ಆಕ್ಸ್​​ಫರ್ಡ್​ ಸೆಂಟರ್ ಫಾರ್ ಹಿಂದೂ ಸ್ಟಡೀಸ್ ಸಹಯೋಗದಲ್ಲಿ ಈ ಕೋರ್ಸ್‌ ನಿರ್ವಹಣೆ ಮಾಡಲಾಗುತ್ತದೆ. ಈ ಸಂಬಂಧ ಎರಡೂ ಸಂಸ್ಥೆಗಳ ನಡುವೆ ಈಗಾಗಲೇ ಒಪ್ಪಂದವೂ ನಡೆದಿದೆ. ಆನ್‌ಲೈನ್‌ ಹಾಗೂ ಆಫ್‌ಲೈನ್‌ ಎರಡೂ ರೀತಿಯಿಂದಲೂ ಈ ಕೋರ್ಸ್‌ನಲ್ಲಿ ಶಿಕ್ಷಣ ಪಡೆಯಬಹುದು.

ಸದ್ಯಕ್ಕೆ ಟೆಂಪಲ್‌ ಮ್ಯಾನೇಜ್‌ಮೆಂಟ್‌ ವಿಷಯದಲ್ಲಿ ಡಿಪ್ಲೊಮಾ ಮಾತ್ರ ಶುರು ಮಾಡಲಾಗುತ್ತದೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕರೆ ಡಿಗ್ರಿ ಹಾಗೂ ಸ್ನಾತಕೋತ್ತರ ಪದವಿಗಳನ್ನೂ ಮುಂದೆ ಶುರು ಮಾಡಲು ವಿವಿ ಚಿಂತನೆ ನಡೆಸಿದೆ.

Share Post