CrimeNational

ಕೇರಳ ಸಿಎಂ ಅಕ್ರಮ ಹಣ ಸಾಗಿಸಿದ್ದಾರೆ; ಆರೋಪಿ ಸ್ವಪ್ನಾ ಗಂಭೀರ ಆರೋಪ

ತಿರುವನಂತಪುರಂ; 2020ರಲ್ಲಿ ದೇಶಾದ್ಯಂತ ಭಾರಿ ಸದ್ದು ಮಾಡಿದ್ದ ಕೇರಳದ ಚಿನ್ನ ಕಳ್ಳಸಾಗಣೆ ಪ್ರಕರಣಕ್ಕೆ ಮತ್ತಷ್ಟು ರೋಚಕತೆ ಸಿಕ್ಕಿದೆ. ಯಾಕಂದ್ರೆ ಈ ಪ್ರಕರಣ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್‌ ಅವರು ಕೇರಳ ಸಿಎಂ ಪಿಣರಾಯಿ ವಿಜಯನ್‌ ವಿರುದ್ಧವೇ ಆರೋಪ ಮಾಡಿದ್ದಾರೆ. 

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ 2016ರಲ್ಲಿ ದುಬೈಗೆ ಭೇಟಿ ನೀಡಿದ್ದ ವೇಳೆ ಅಕ್ರಮವಾಗಿ ಹಣ ಸಾಗಣೆ ಮಾಡಿದ್ದಾರೆ ಎಂದು ತಿರುವನಂತಪುರಂ ಚಿನ್ನ ಕಳ್ಳಸಾಗಣೆ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ ಆರೋಪಿಸಿದ್ದಾರೆ. ಕೊಚ್ಚಿಯ ನ್ಯಾಯಾಂಗ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್‌  ನ್ಯಾಯಾಲಯದ ಮುಂದೆ ಸ್ವಪ್ನಾ ಸುರೇಶ್‌ ಈ ರೀತಿಯ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಚಿನ್ನದ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಆರ್‌ಪಿಸಿಯ ಸೆಕ್ಷನ್ 164ರ ಅಡಿಯಲ್ಲಿ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ.  ತನ್ನ ಹೇಳಿಕೆಯನ್ನು ದಾಖಲಿಸಲು ಸ್ವಪ್ನಾ ಮನಿ ಲ್ಯಾಂಡರಿಂಗ್ ತಡೆ ಕಾಯ್ದೆ (ಪಿಎಂಎಲ್‌ಎ) ವಿಶೇಷ ನ್ಯಾಯಾಲಯವನ್ನು ಸಂಪರ್ಕಿಸಿದ್ದರು. ವಿಶೇಷ ನ್ಯಾಯಾಲಯವು ಆಕೆಯ ಹೇಳಿಕೆಯನ್ನು ದಾಖಲಿಸುವ ಸಲುವಾಗಿ ಎರ್ನಾಕುಲಂ ಮುಖ್ಯ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ನಿಯೋಜಿಸಿತ್ತು.

2016ರಲ್ಲಿ ನಾನು ತಿರುವನಂತರಪುರಂನಲ್ಲಿರುವ ಯುಎಇ ಕನ್ಸುಲೇಟ್‌ನಲ್ಲಿ ಕೆಲಸ ಮಾಡುತ್ತಿದೆ. ಆಗ ಸಿಎಂಗೆ ಕಾರ್ಯದರ್ಶಿಯಾಗಿದ್ದ ಎಂ.ಶಿವಶಂಕರ್ ಮುಖ್ಯಮಂತ್ರಿಗಳಿಗೆ ಆದಷ್ಟು ಬೇಗ ಬ್ಯಾಗ್‌ವೊಂದನ್ನು ತಲುಪಿಸಬೇಕು ಎಂದು ಹೇಳಿ, ನೇರವಾಗಿ ಲಗೇಜ್ ಕ್ಲಿಯರೆನ್ಸ್‌ಗೆ ಕರೆದರು. ನಂತರ ಬ್ಯಾಗನ್ನು ಕನ್ಸುಲೇಟ್‌ನಲ್ಲಿರುವ ಯಂತ್ರದಲ್ಲಿ ಸ್ಕ್ಯಾನ್ ಮಾಡಲಾಯಿತು. ಈ ವೇಳೆ ಬ್ಯಾಗ್‌ನಲ್ಲಿ ಹಣ ಇರುವುದು ನನ್ನ ಗಮನಕ್ಕೆ ಬಂತು. ಇಷ್ಟೇ ಅಲ್ಲದೆ ಶಿವಶಂಕರ್ ಸೂಚನೆಯಂತೆ ಹಲವು ಬಾರಿ ಸಿಎಂ ಅವರ ಅಧಿಕೃತ ನಿವಾಸ ಕ್ಲಿಪ್‌ಹೌಸ್‌ಗೆ ಬಿರಿಯಾನಿ ಪಾತ್ರೆಗಳನ್ನು ಹಸ್ತಾಂತರಿಸಲಾಗಿದೆ. ಆದರೆ ಅದರಲ್ಲಿ ಬಿರಿಯಾನಿ ಮಾತ್ರವಲ್ಲದೆ ಕೆಲ ಲೋಹದ ವಸ್ತುಗಳೂ ಇದ್ದವೆಂದು ಸ್ವಪ್ನಾ ಸುರೇಶ್‌ ಆರೋಪಿಸಿದ್ದಾರೆ.

 

Share Post