ಪ್ರಧಾನಿ ಮೋದಿ ಹತ್ಯೆ ಮಾಡುವುದಾಗಿ ಬೆದರಿಕೆ; ಎನ್‌ಐಎಗೆ ಇ-ಮೇಲ್
ಮುಂಬೈ: ಪ್ರಧಾನಿ ನರೇಂದ್ರ ಮೋದಿಯವರಿಗೆ ಕೊಲೆ ಬೆದರಿಕೆಯ ಮೇಲ್ ಬಂದಿದೆ. ಮುಂಬೈನ ಎನ್‌ಐಎ ಶಾಖೆಗೆ ಅನಾಮಿಕರು ಇ-ಮೇಲ್ ಕಳುಹಿಸಿದ್ದು, ಬಾಂಬ್ ಸ್ಫೋಟಿಸಿ ಮೋದಿ ಹತ್ಯೆ ಮಾಡುವುದಾಗಿ ತಿಳಿಸಿದ್ದಾರೆ.
ಇ ಮೇಲ್‌ನಲ್ಲಿ ಏನೆಲ್ಲಾ ಸಿದ್ಧತೆ ಮಾಡಿಕೊಂಡಿದ್ದೇವೆ ಎಂಬುದರ ಬಗ್ಗೆ ವಿವರವಾಗಿ ಬರೆಯಲಾಗಿದೆ. ಮೋದಿಯವರನ್ನು ಕೊಲ್ಲಲು ನಮ್ಮ ಬಳಿ ೨೦ ಕೆಜಿ ಆರ್‌ಡಿಎಕ್ಸ್ ಬಾಂಬ್ ಸಿದ್ಧವಾಗಿದೆ. ಇದರ ಜೊತೆಗೆ 20 ಸ್ಪೀಪರ್ ಸೆಲ್‌ಗಳು ಕೂಡಾ ರಡಿಯಾಗಿವೆ ಎಂದು ಹೇಳಲಾಗಿದೆ.
ಹೀಗೆ ಇ-ಮೇಲ್ ಕಳುಹಿಸಿರುವ ವ್ಯಕ್ತಿ ಭಯೋತ್ಪಾದಕರೊಂದಿಗೆ ಸಂಪರ್ಕ ಹೊಂದಿದಾನೆ ಎಂದು ಹೇಳಲಾಗುತ್ತಿದೆ. ಎನ್‌ಐಎ ಅಧಿಕಾರಿಗಳು ಹಾಗೂ ಪೊಲೀಸರು ಇ-ಮೇಲ್ ಜಾಡು ಹಿಡಿದು ತನಿಖೆ ಚುರುಕುಗೊಳಿಸಿದ್ದಾರೆ.