15 ಮಂದಿ ಶಂಕಿತ ಒಮೈಕ್ರಾನ್ ಸೋಂಕಿತರು ದೆಹಲಿ ಆಸ್ಪತ್ರೆಯಲ್ಲಿ ದಾಖಲು
ನವದೆಹಲಿ : ಕೊರೊನಾ ವೈರಸ್‌ನ ರೂಪಾಂತರಿ ತಳಿ ಒಮೈಕ್ರಾನ್ ಪ್ರಕರಣಗಳಿರುವ ದೇಶಗಳಿಂದ ಬಂದಿರುವ ೧೫ ಮಂದಿಯನ್ನು ದೆಹಲಿಯ LNJP ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರಿಗೆ ಒಮೈಕ್ರಾನ್ ತಗುಲಿರುವ ಶಂಕೆ ವ್ಯಕ್ತವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಪೈಕಿ ೯ ಮಂದಿಯಲ್ಲಿ ಕೋವಿಡ ದೃಢಪಟ್ಟಿದೆ. ಇತರ ಆರು ಮಂದಿಯಲ್ಲಿ ಗಂಟಲು ನೋವು , ಜ್ವರದಂಥ ಲಕ್ಷಣಗಳು ಕಂಡು ಬಂದಿವೆ. ಇವರೆಲ್ಲ ಸೋಂಕಿತರ ಸಂಪರ್ಕಕ್ಕೆ ಬಂದಿದ್ದವರು. ಎಲ್ಲರ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿಕೊಡಲಾಗಿದ್ದು ನಾಲ್ಕೈದು ದಿನದಲ್ಲಿ ವರದಿ ಬರಲಿದೆ ಎಂದು ಅಧಿಕಾರಿ ಹೇಳಿದ್ದಾರೆ.