Health

Protien; ನಮ್ಮ ದೇಹಕ್ಕೆ ಎಷ್ಟು ಪ್ರೋಟೀನ್‌ ಬೇಕು?; ಎಲ್ಲಿಂದ ಸಿಗುತ್ತೆ..?

Heath Tips; ಮನುಷ್ಯನ ದೇಹದ ಬೆಳವಣಿಗೆಗೆ ಪ್ರೊಟೀನ್‌ ಬೇಕೇಬೇಕು.. ನಮ್ಮ ದೇಹವೇ ಪ್ರೊಟೀವ್‌ ಉತ್ಪತ್ತಿ ಮಾಡಿಕೊಳ್ಳುತ್ತದೆ.. ಆದರೂ ಕೂಡಾ ಕೆಲವೊಮ್ಮೆ ನಮ್ಮ ದೇಹಕ್ಕೆ ಆಹಾರದ ಮೂಲಕ ಪ್ರೊಟೀನ್‌ ನೀಡಬೇಕಾಗುತ್ತದೆ.. ಹೀಗಾಗಿ ನಮ್ಮ ದೇಹಕ್ಕೆ ಎಷ್ಟು ಪ್ರೊಟೀನ್‌ ಬೇಕು..?, ಅದನ್ನು ಹೇಗೆ ತೆಗೆದುಕೊಳ್ಳಬೇಕು..? ಅಷ್ಟಕ್ಕೂ ಒಬ್ಬ ಆರೋಗ್ಯವಂತ ವ್ಯಕ್ತಿಗೆ ಎಷ್ಟು ಪ್ರೊಟೀನ್‌ ಬೇಕು..? ಎಂಬುದರ ಬಗ್ಗೆ ಅನೇಕರಲ್ಲಿ ಪ್ರಶ್ನೆಗಳಿವೆ.. ಇದರ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ…

ಸ್ನಾಯು ಬೆಳವಣಿಗೆಗೆ ನಿಯಮಿತವಾಗಿ ದೇಹಕ್ಕೆ ಬೇಕಾದಷ್ಟು ಪ್ರೋಟೀನ್​ ಬೇಕಾಗುತ್ತದೆ… ಹೀಗಾಗಿಯೇ ಜಿಮ್‌ಗಳಲ್ಲಿ ಪ್ರೊಟೀನ್‌ ಪೌಡರ್‌ ನೀಡುತ್ತಾರೆ.. ಹಾಗಾದರೆ ನಾವು ಎಷ್ಟು ಪ್ರೊಟೀನ್‌ ತೆಗೆದುಕೊಳ್ಳಬೇಕು…? ಅದರ ಸೇವನೆ ಹೇಗೆ ಎಂಬುದರ ಮಾಹಿತಿ ನೋಡೋಣ..

ಇದನ್ನೂ ಓದಿ; ಬಾಯಿಯ ಆರೋಗ್ಯ ಕಾಪಾಡಲು ಈ 6 ಆಹಾರಗಳನ್ನು ತಿನ್ನಿ..!

ಪ್ರೊಟೀನ್‌ಗಾಗಿ ಯಾವ ಆಹಾರ ಆಶ್ರಯಿಸಬೇಕು..?;

ಪ್ರೊಟೀನ್‌ಗಾಗಿ ಯಾವ ಆಹಾರ ಆಶ್ರಯಿಸಬೇಕು..?; ಪ್ರೊಟೀನ್‌ ಎಂಬುದು ಅಮೈನೋ ಆಮ್ಲಗಳಿಂದ ಕೂಡಿದ್ದು. ನಮ್ಮ ದೇಹದಲ್ಲೇ ಪ್ರೋಟೀನ್​ ಉತ್ಪಾದನೆಯಾಗುತ್ತದೆ. ಆದ್ರೆ ಅದು ಕೆಲವೊಮ್ಮೆ ನಮ್ಮ ದೇಹಕ್ಕೆ ಸಾಕಾಗೋದಿಲ್ಲ. ಹೀಗಾಗಿ ನಮ್ಮ ದೇಹಕ್ಕೆ ಬೇಕಾಗುವಷ್ಟು ಪ್ರೊಟೀನ್‌ ಅನ್ನು ತೆಗೆದುಕೊಳ್ಳಬೇಕಾಗುತ್ತದೆ.. ಹೆಚ್ಚು ಪ್ರೊಟೀನ್‌ ಇರುವ  ಆಹಾರಗಳನ್ನು ಸೇವಿಸುವ ಮೂಲಕ ನಮ್ಮ ದೇಹಕ್ಕೆ ಬೇಕಾದಷ್ಟು ಪ್ರೊಟೀನ್‌ ಪಡೆಯಬಹುದು. ಮಾಂಸ, ಮೀನು, ಮೊಟ್ಟೆ ಮತ್ತು ಡೈರಿ ಉತ್ಪನ್ನಗಳಲ್ಲಿ ಪ್ರೊಟೀನ್‌ ಅಂಶ ಹೆಚ್ಚಿರುತ್ತದೆ. ಇವನ್ನು ಸೇವನೆ ಮಾಡುವ ಮೂಲಕ ನಮ್ಮ ದೇಹಕ್ಕೆ ಪ್ರೊಟೀನ್‌ ಪಡೆಯಬಹುದು. ಹೆಚ್ಚಿನ ಪ್ರೋಟೀನ್ ದೇಹಕ್ಕೆ ಸಿಗುವುದರಿಂದ ಸ್ನಾಯುಗಳು ಬಲಗೊಳ್ಳುತ್ತವೆ ಹಾಗೂ ದೈಹಿಕ ಶಕ್ತಿ ಹೆಚ್ಚಾಗುತ್ತದೆ.

ಇದನ್ನೂ ಓದಿ; Smile Designing Surgery; ಸ್ಮೈಲ್‌ ಹೆಚ್ಚಿಸೋ ಸರ್ಜರಿ; ಮದುವೆಗೂ ಮುನ್ನವೇ ಹೋಯ್ತು ಪ್ರಾಣ!

ಗರ್ಭಾವಸ್ಥೆಯಲ್ಲಿ ಪ್ರೊಟೀನ್‌ ಹೆಚ್ಚು ಬೇಕು;

ಗರ್ಭಾವಸ್ಥೆಯಲ್ಲಿ ಪ್ರೊಟೀನ್‌ ಹೆಚ್ಚು ಬೇಕು; ಮಗು ಗರ್ಭಾವಸ್ಥೆಯಲ್ಲಿದ್ದಾಗ ಶಿಶುವಿನ ದೇಹದ ಬೆಳವಣಿಗೆಗೆ ಪ್ರೊಟೀನ್‌ ಬಹುಮುಖ್ಯ ಪಾತ್ರ ವಹಿಸುತ್ತದೆ. ಈ ವೇಳೆ ತಾಯಿ ಹಾಗೂ ಮಗು ಇಬ್ಬರಿಗೂ ಹೆಚ್ಚಿನ ಪ್ರೊಟೀನ್‌ ಅವಶ್ಯಕತೆ ಇರುತ್ತದೆ. ಪ್ರೊಟೀನ್‌ಯುಕ್ತ ಆಹಾರಗಳನ್ನು ಗರ್ಭಿಣಿಯರು ಹೆಚ್ಚು ತೆಗೆದುಕೊಳ್ಳಬೇಕು. ಇದರಿಂದ ಗರ್ಭದಲ್ಲಿರುವ ಮಗುವಿನ ಅಂಗಾಂಗಗಳ ಬೆಳವಣಿಗೆ ಚೆನ್ನಾಗಿ ಆಗುತ್ತದೆ. ಅಷ್ಟೇ ಅಲ್ಲ, ತಾಯಿಯ ಆರೋಗ್ಯ ಕೂಡಾ ಚೆನ್ನಾಗಿರುತ್ತದೆ.

ಗರ್ಭಿಣಿಯರು ಗರ್ಭಾವಸ್ಥೆಯಲ್ಲಿ ನಿತ್ಯವೂ ಪ್ರತಿ ಕೆಜಿಗೆ 1.2-1.52 ಗ್ರಾಂ ಪ್ರೋಟೀನ್​ ಸೇವನೆಯನ್ನು ಶಿಫಾರಸು ಮಾಡಲಾಗುತ್ತದೆ. ಹಾಲುಣಿಸುವ ಸಮಯದಲ್ಲಿ ತಾಯಿ ಪ್ರೊಟೀನ್‌ ಯುಕ್ತ ಆಹಾರ ಸೇವನೆ ಮಾಡಿದರೆ, ಮಗು ಚೆನ್ನಾಗಿ ಬೆಳೆಯಲು  ಸಹಾಯಕವಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.

ಇದನ್ನೂ ಓದಿ; Garlic; ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ತಿಂದರೆ ಏನಾಗುತ್ತೆ ಗೊತ್ತಾ..?

 ಕ್ರೀಡಾಪಟುಗಳಿಗೆ ಹೆಚ್ಚಿನ ಪ್ರೊಟೀನ್‌ ಅಗತ್ಯ;

ಕ್ರೀಡಾಪಟುಗಳಿಗೆ ಹೆಚ್ಚಿನ ಪ್ರೊಟೀನ್‌ ಅಗತ್ಯ; ಜಿಮ್‌ ಮಾಡುವವರು, ಕ್ರೀಡಾಪಟುಗಳು ದಿನವೂ ದೇಹ ದಂಡನೆ ಮಾಡುತ್ತಾರೆ.. ಅವರು ದಿನವೂ ಬೆವರು ಹರಿಸುತ್ತಾರೆ.. ಹೀಗಾಗಿ, ಇವರ ದೇಹಕ್ಕೆ ಹೆಚ್ಚಿನ ಪ್ರಮಾಣದ ಪ್ರೊಟೀನ್‌ ಅಗತ್ಯವಿರುತ್ತದೆ. ಹೀಗಾಗಿ, ಇಂತಹವರಿಗೆ ದಿನಕ್ಕೆ ಕೆಜಿಗೆ 1.2-1.4 ಗ್ರಾಂ ಪ್ರೋಟೀನ್ ಬೇಕಾಗುತ್ತದೆ. ಪ್ರೊಟೀನ್‌ ಸೇವನೆಯು ರಕ್ತದೊತ್ತಡ ಕಡಿಮೆ ಮಾಡುತ್ತದೆ. ಜೊತೆಗೆ ಪ್ರೊಟೀನ್‌ ಸೇವನೆ ಮಧುಮೇಹದ ವಿರುದ್ಧ ಹೋರಾಡೋದಕ್ಕೂ ಸಹಾಯ ಮಾಡುತ್ತದೆ.

ಪ್ರೊಟೀನ್‌ ಯಾವುದರಲ್ಲಿ ದೊರೆಯುತ್ತದೆ?;

ಪ್ರೊಟೀನ್‌ ಯಾವುದರಲ್ಲಿ ದೊರೆಯುತ್ತದೆ?; ಪ್ರೊಟೀನ್‌ ಮಾಂಸ, ಮೀನು, ಮೊಟ್ಟೆ ಮತ್ತು ಡೈರಿ ಉತ್ಪನ್ನಗಳಲ್ಲಿ ಹೆಚ್ಚಾಗಿರುತ್ತದೆ.. ಇವುಗಳ ಸೇವನೆಯಿಂದ ನಮ್ಮ ದೇಹಕ್ಕೆ ಬೇಕಾಗುವ ಅಮೈನೋ ಆಮ್ಲಗಳನ್ನು ಪೂರೈಸುತ್ತದೆ.. ಮಾಂಸ ಸೇವನೆ ಮಾಡದವರು, ದ್ವಿದಳ ಧಾನ್ಯಗಳು ಮತ್ತು ಬೀಜಗಳನ್ನು ಕೂಡಾ ಸೇವನೆ ಮಾಡಬಹುದು. ಇವುಗಳಲ್ಲಿ  ಕೂಡಾ ಪಪ್ರೊಟೀನ್‌ ಹೇರಳವಾಗಿರುತ್ತದೆ. ಮೊಟ್ಟೆಯಲ್ಲಿ ಹೆಚ್ಚಿನ ಪ್ರೊಟೀನ್‌ ಇದ್ದು, ಇದನ್ನು ದಿನವೂ ಸೇವಿಸುವುದು ಒಳ್ಳೆಯದು ಎಂದು ವೈದ್ಯರು ಹೇಳುತ್ತಾರೆ.  ಇದರಲ್ಲಿರುವ ವಿಟಮಿನ್​ಗಳು, ಮಿನರಲ್​ಗಳು, ಆಂಟಿ-ಆಕ್ಸಿಡೆಂಟ್​ಗಳು ದೇಹಕ್ಕೆ ಆರೋಗ್ಯಕರ ಕೊಬ್ಬು ಒದಗಿಸುತ್ತವೆ.

ಇದನ್ನೂ ಓದಿ; Jayalalitha; ಆರು ಟ್ರಂಕ್‌ನಲ್ಲಿ ತಮಿಳುನಾಡಿಗೆ ಜಯಲಲಿತಾ ವಜ್ರ-ವೈಢೂರ್ಯಗಳು!

Share Post