CrimeHealthNational

ನಿಂತಿದ್ದ ಟ್ರಕ್‌ಗೆ ಪ್ರವಾಸಿಗರ ವಾಹನ ಡಿಕ್ಕಿ; 8 ಮಂದಿ ದುರ್ಮರಣ

ಒಡಿಶಾ; ಒಡಿಶಾದ ಘಾಟಗಾಂವ್‌ನಲ್ಲಿ ಭೀಕರ ಅಪಘಾತ ಸಂಭವಿಸಿದೆ. ರಸ್ತೆ ಪಕ್ಕ ನಿಂತಿದ್ದ ಟ್ರಕ್‌ಗೆ ವಾಹನವೊಂದು ಡಿಕ್ಕಿ ಹೊಡೆದಿದ್ದರಿಂದ ದುರಂತ ಸಂಭವಿಸಿದೆ. ಘಟನೆಯಲ್ಲಿ ಎಂಟು ಮಂದಿ ಸಾವನ್ನಪ್ಪಿದ್ದಾರೆ.

ಮೃತರೆಲ್ಲಾ ಗಂಜಮ್ ಜಿಲ್ಲೆಯ ಪೊಡಮರಿ ಮೂಲದವರು ಎಂದು ಹೇಳಲಾಗುತ್ತಿದೆ.  ಇವರೆಲ್ಲಾ ಪ್ರವಾಸಕ್ಕೆ ಬಂದಿದ್ದರು. ಕಳೆದ ರಾತ್ರಿ ಕಿಯೋಂಜಾರ್​ ಜಿಲ್ಲೆಯ ತಾರಣಿ ದೇವಸ್ಥಾನದ ಬಳಿ ನಿಂತಿದ್ದ ಟ್ರಕ್​​ಗೆ ಇವರಿದ್ದ ವಾಹನ ಡಿಕ್ಕಿ ಹೊಡೆದಿದೆ. ಪರಿಣಾಮ 8 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಲ್ಲಿ 12 ಮಂದಿ ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಗಾಯಗೊಂಡವರಲ್ಲಿ ಮೂವರ ಸ್ಥಿತಿ ಗಂಭೀರವಾಗಿದ್ದು, ಸಾವುಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ತೀವ್ರವಾಗಿ ಗಾಯಗೊಂಡವರನ್ನು ಕುಟಕ್​ನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ.

Share Post