Smile Designing Surgery; ಸ್ಮೈಲ್ ಹೆಚ್ಚಿಸೋ ಸರ್ಜರಿ; ಮದುವೆಗೂ ಮುನ್ನವೇ ಹೋಯ್ತು ಪ್ರಾಣ!
ಹೈದರಾಬಾದ್; ವರ್ಷದ ಹಿಂದೆ ಬೆಂಗಳೂರಿನಲ್ಲಿ ತೂಕ ಕಡಿಮೆ ಮಾಡಿಕೊಳ್ಳಲು ಕಿರುತೆರೆ ನಟಿಯೊಬ್ಬರು ಸರ್ಜರಿ ಮಾಡಿಸಿಕೊಳ್ಳಲು ಹೋಗಿದ್ದರು.. ಮನೆಯವರಿಗೆ ಗೊತ್ತಿಲ್ಲದಂತೆ ಈ ಸರ್ಜರಿ ಮಾಡಿಸಿಕೊಳ್ಳಲು ಹೋಗಿದ್ದರು.. ಈ ವೇಳೆ ಚಿಕಿತ್ಸೆಯಿಂದ ಸೈಡ್ ಎಫೆಕ್ಟ್ ಆಗಿ ಆಕೆ ಸಾವನ್ನಪ್ಪಿದ್ದಳು. ಇಂತಹದ್ದೇ ಒಂದು ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಮದುವೆಗೆ ಮೊದಲು ಸ್ಮೈಲಿ ಫೇಸ್ ಸರ್ಜರಿ ಮಾಡಿಸಿಕೊಳ್ಳಲು ಹೋಗಿದ್ದ ಯುವಕ ಸಾವನ್ನಪ್ಪಿದ್ದಾನೆ.
ಮುಖದಲ್ಲಿ ನಗು ಹೆಚ್ಚಿಸಲು ಹೋಗಿ ಮರಣ;
ಮುಖದಲ್ಲಿ ನಗು ಹೆಚ್ಚಿಸಲು ಹೋಗಿ ಮರಣ; ಇತ್ತೀಚೆಗೆ ಏನೇನೋ ಸರ್ಜರಿಗಳು ಬಂದುಬಿಟ್ಟಿವೆ. ಕೆನ್ನೆಯಲ್ಲಿ ಡಿಂಪಲ್ ಬರಲು, ಮೂಗು ಸಣ್ಣದಾಗಿ ಕಾಣಲು, ತುಟಿಗಳು ದೊಡ್ಡದಾಗಿ ಕಾಣಲು ಎಲ್ಲಾ ಸರ್ಜರಿಗಳನ್ನು ಮಾಡಿಸಿಕೊಳ್ಳುತ್ತಿದ್ದಾರೆ. ಅದೇ ರೀತಿ ಇತ್ತೀಚೆಗೆ ಮದುವೆಯಲ್ಲಿ ನಗುಮುಖದೊಂದಿಗೆ ಕಾಣೋದಕ್ಕೆ ಹಲ್ಲಿನ ಸರ್ಜರಿ ಮಾಡಿಸಿಕೊಳ್ಳುತ್ತಿದ್ದಾರೆ. ಅದೇ ರೀತಿ ಲಕ್ಷ್ಮೀ ನಾರಾಯಣ್ ಎಂಬುವವರೂ ಮದುವೆಗೂ ಮುಂಷಚೆ ಇಂತಹ ಸರ್ಜರಿ ಮಾಡಿಸಿಕೊಳ್ಳಲು ಹೋಗಿದ್ದಾರೆ. ಸರ್ಜರಿ ವೇಲೆ ಇವರು ಮೂರ್ಛೆ ಹೋಗಿದ್ದು, ಸಾವನ್ನಪ್ಪಿದ್ದಾರೆ.
ಹೈದರಾಬಾದ್‌ನ ಡೆಂಟಲ್ ಕ್ಲಿನಿಕ್‌ನಲ್ಲಿ ಘಟನೆ;
ಹೈದರಾಬಾದ್‌ನ ಡೆಂಟಲ್ ಕ್ಲಿನಿಕ್‌ನಲ್ಲಿ ಘಟನೆ; ಲಕ್ಷ್ಮೀ ನಾರಾಯಣ್ ಅವರಿಗೆ ಮದುವೆ ಫಿಕ್ಸ್ ಆಗಿತ್ತು. ಮದುವೆಗಾಗಿ ಅವರು ತಯಾರಿ ನಡೆಸಿದ್ದರು.. ಇದೇ ವೇಳೆ ಅವರು ಸ್ಮೈಲ್ ಡಿಸೈನಿಂಗ್ ಸರ್ಜರಿ ಬಗ್ಗೆ ತಿಳಿದುಕೊಂಡಿದ್ದಾರೆ. ಅದರ ಬಗ್ಗೆ ಆಸಕ್ತಿ ಬಂದು ಸರ್ಜರಿ ಮಾಡಿಸಿಕೊಳ್ಳಲು ಹೋಗಿದ್ದಾರೆ. ಈ ರೀತಿಯ ಸರ್ಜರಿ ಮಾಡಿಸಿಕೊಳ್ಳುತ್ತಿರುವ ಬಗ್ಗೆ ಅವರು ಕುಟುಂಬದವರಿಗೂ ಹೇಳಿಲ್ಲ.
ಹೈದರಾಬಾದ್ ನಗರದ ಜ್ಯುಬಿಲಿ ಹಿಲ್ಸ್‌ನ FMS ಇಂಟರ್ ನ್ಯಾಷನಲ್ ಡೆಂಟಲ್ ಕ್ಲಿನಿಕ್‌ನಲ್ಲಿ ಈ ಸರ್ಜರಿ ನಡೆದಿದೆ. ಸರ್ಜರಿ ವೇಳೆ 28 ವರ್ಷದ ಲಕ್ಷ್ಮಿನಾರಾಯಣ್ ಪ್ರಜ್ಞೆ ಕಳೆದುಕೊಂಡಿದ್ದಾರೆ. ಇದರಿಂದ ಆತಂಕಗೊಂಡ ಕ್ಲಿನಿಕ್ ಸಿಬ್ಬಂದಿ, ಲಕ್ಷ್ಮೀನಾರಾಯಣ್ ಅವರ ತಂದೆಗೆ ಕರೆ ಮಾಡಿ ಮಾಹಿತಿ ಕೊಟ್ಟಿದ್ದಾರೆ. ನಂತರ ಲಕ್ಷ್ಮೀ ನಾರಾಯಣ್ ಅವರನ್ನು ಸಮೀಪದ ಆಸ್ಪತ್ರೆಯೊಂದಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಷ್ಟರಲ್ಲೇ ಲಕ್ಷ್ಮೀನಾರಾಯಣ್ ಅವರ ಪ್ರಾಣಪಕ್ಷಿ ಹಾರಿಹೋಗಿದೆ.
ಅನಸ್ತೇಷಿಯಾ ಓವರ್‌ಡೋಸ್ ಕೊಟ್ಟಿದ್ದೇ ಕಾರಣ?;
ಅನಸ್ತೇಷಿಯಾ ಓವರ್‌ಡೋಸ್ ಕೊಟ್ಟಿದ್ದೇ ಕಾರಣ?; ಲಕ್ಷ್ಮೀನಾರಾಯಣ್‌ಗೆ ಸರ್ಜರಿ ವೇಳೆ ಓವರ್ ಡೋಸ್ ಅನಸ್ತೇಷಿಯಾ ಕೊಟ್ಟಿದ್ದೇ ಈ ದುರ್ಘಟನೆಗೆ ಕಾರಣ ಎಂದು ಆತನ ತಂದೆ ರಾಮುಲು ಆರೋಪ ಮಾಡಿದ್ದಾರೆ. ಈ ಬಗ್ಗೆ ಕೇಸ್ ಕೂಡಾ ದಾಖಲು ಮಾಡಲಾಗಿದೆ. ಡೆಂಟಲ್ ಕ್ಲಿನಿಕ್ ವಿರುದ್ಧ ಜ್ಯುಬಿಲಿ ಹಿಲ್ಸ್ ಪೊಲೀಸರು ಕೇಸ್ ದಾಖಲಿಸಿದ್ದು, ಆರೋಪದ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.