HealthNational

Fali Nariman; ಸುಪ್ರೀಂ ಕೋರ್ಟ್‌ ಹಿರಿಯ ವಕೀಲ ಫಾಲಿ ನಾರಿಮನ್‌ ಇನ್ನಿಲ್ಲ

ನವದೆಹಲಿ; ಕಾವೇರಿ ಜಲ ವಿವಾದದ ಬಗ್ಗೆ ಕರ್ನಾಟಕದ ಪರವಾಗಿ ವಾದ ಮಾಡಿದ್ದ ಸುಪ್ರೀಂಕೋರ್ಟ್‌ ಖ್ಯಾತ ವಕೀಲ ಫಾಲಿ ಎಸ್‌ ನಾರಿಮನ್‌ ನಿಧನರಾಗಿದ್ದಾರೆ.  ಅವರಿಗೆ 95 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಇಂದು ನಿಧನರಾಗಿದ್ದಾರೆ.

ದೆಹಲಿಯಲ್ಲಿ ಫಾಲಿ ಎಸ್‌ ನಾರಿಮನ್‌ ನಿಧನರಾಗಿದ್ದು, ಇಂದು ಅವರ ಅಂತ್ಯಕ್ರಿಯೆ ನಡೆಯಲಿದೆ. ಫಾಲಿ ನಾರಿಮನ್‌ ಅವರು ರಾಜ್ಯಸಭಾ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು. ಜೊತೆಗೆ ಭಾರತೀಯ ವಕೀಲರ ಸಂಘದ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದಾರೆ. ಅವರ ಸೇವೆಯನ್ನು ಗುರುತಿಸಿ ಕೇಂದ್ರ ಸರ್ಕಾರ 1991ರಲ್ಲಿ ಪದ್ಮಭೂಷಣ ಮತ್ತು 2007ರಲ್ಲಿ ಪದ್ಮ ವಿಭೂಷಣ ನೀಡಿ ಗೌರವಿಸಿದೆ.

ಪಾಲಿ ನಾರಿಮನ್‌ ಅವರು 1950ರಲ್ಲಿ ಬಾಂಬೆ ಹೈಕೋರ್ಟ್‌ನಲ್ಲಿ ತಮ್ಮ ವಕೀಲ ವೃತ್ತಿ ಆರಂಭ ಮಾಡಿದರು. 1961ರಲ್ಲಿ ಹಿರಿಯ ವಕೀಲರಾಗಿ ಅವರು ನೇಮಕವಾದ ಮೇಲೆ ಅವರ ಫೇಮಸ್‌ ಆಗುತ್ತಾ ಬಂದರು. ಫಾಲಿ ನಾರಿಮನ್‌ ಅವರು ಬರೋಬ್ಬರಿ 70 ವರ್ಷಗಳ ಕಾಲ ವಕೀಲ ವೃತ್ತಿ ಮಾಡಿದ್ದಾರೆ. ಹಲವಾರು ರಾಜ್ಯ ಸರ್ಕಾರಗಳ ಕೇಸ್‌ಗಳನ್ನು ಅವರು ಹ್ಯಾಂಡಲ್‌ ಮಾಡಿದ್ದಾರೆ. ಕರ್ನಾಟಕ ಸರ್ಕಾರ ಕೂಡಾ ಕಾವೇರಿ ನದಿ ನೀರು ವಿವಾದ ಸಂಬಂಧ ರಾಜ್ಯದ ಪರ ವಾದಿಸಲು ಫಾಲಿ ನಾರಿಮನ್‌ ಅವರನ್ನೇ ನೇಮಿಸಿಕೊಂಡಿತ್ತು.

1972 ರಿಂದ ಸುಪ್ರೀಂಕೋರ್ಟ್‌ನಲ್ಲಿ ವಕೀಲ ವೃತ್ತಿ ಶುರು ಮಾಡಿದ ಫಾಲಿ ನಾರಿಮನ್‌ ಅವರು,  ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ನೇಮಕಗೊಂಡರು. 1991 ರಿಂದ 2010 ರವರೆಗೆ ಫಾಲಿ ನಾರಿಮನ್‌ ಅವರು ಬಾರ್ ಅಸೋಸಿಯೇಶನ್ ಆಫ್ ಇಂಡಿಯಾದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. 1989 ರಿಂದ 2005 ರವರೆಗೆ ICC (ಇಂಟರ್ನ್ಯಾಷನಲ್ ಚೇಂಬರ್ ಆಫ್ ಕಾಮರ್ಸ್) ಪ್ಯಾರಿಸ್ನ ಇಂಟರ್ನ್ಯಾಷನಲ್ ಕೋರ್ಟ್ ಆಫ್ ಆರ್ಬಿಟ್ರೇಶನ್‌ನ ಉಪಾಧ್ಯಕ್ಷರಾಗಿಯೂ ಕೆಲಸ ಮಾಡದ್ದಾರೆ.

 

Share Post