Miss World 2024; ವಿಶ್ವಸುಂದರಿ ಆಗ್ತಾರಾ ಈ ಕನ್ನಡದ ಬ್ಯೂಟಿ..?
ವಿಶ್ವಸುಂದರಿ ಸ್ಪರ್ಧೆ 71ನೇ ಆವೃತ್ತಿ ಶುರುವಾಗಿದೆ. ಫೆಬ್ರವರಿ 18ರಿಂದ ಸ್ಪರ್ಧೆ ಶುರುವಾಗಿದ್ದು, ಮಾರ್ಚ್ 18ರವರೆಗೆ ಈ ಸ್ಪರ್ಧೆ ನಡೆಯಲಿದೆ. 28 ವರ್ಷಗಳ ನಂತರ ಭಾರತದಲ್ಲಿ ಈ ಸ್ಪರ್ಧೆ ನಡೆಯುತ್ತಿದೆ… ವಿಶೇಷ ಏನು ಅಂದ್ರೆ ಕನ್ನಡತಿಯೊಬ್ಬರು ಈ ಬಾರಿ ಭಾರತದ ಪರವಾಗಿ ವಿಶ್ವಸುಂದರಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ… ಐಶ್ವರ್ಯಾ ರೈ ನಂತರ ಕನ್ನಡತಿ ಸಿನಿ ಶೆಟ್ಟಿಯವರು ಭಾರತದ ಪರವಾಗಿ ಸ್ಪರ್ಧೆ ಮಾಡುತ್ತಿದ್ದು, ಮತ್ತೊಬ್ಬ ಕನ್ನಡತಿ ವಿಶ್ವಸುಂದರಿಯಾಗುವ ಭರವಸೆ ಮೂಡಿಸಿದ್ದಾರೆ.
ಇದನ್ನೂ ಓದಿ; Dhruva Sarja; ವಿಮಾನ ದುರಂತದಿಂದ ಪಾರಾದ ಧ್ರುವ ಸರ್ಜಾ & ಮಾರ್ಟಿನ್ ಟೀಂ
ವಿಶ್ವಸುಂದರಿ ಆಗ್ತಾರಾ ಕನ್ನಡತಿ..?;
ವಿಶ್ವಸುಂದರಿ ಆಗ್ತಾರಾ ಕನ್ನಡತಿ..?; 2022ರ ಫೆಮಿನಾ ಇಂಡಿಯಾ ಕಿರೀಟವನ್ನು ಸಿನಿ ಶೆಟ್ಟಿ ಮುಡಿಗೇರಿಸಿಕೊಂಡಿದ್ದರು. ಇದೀಗ ಅವರು, ವಿಶ್ವಸುಂದರಿ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. ಈ ಸ್ಪರ್ಧೆಯ ಆತಿಥ್ಯವನ್ನೇ ಭಾರತವೇ ವಹಿಸುತ್ತಿದೆ. 28 ವರ್ಷಗಳ ಹಿಂದೆ ಬೆಂಗೂರಿನಲ್ಲಿ ಸ್ಪರ್ಧೆ ನಡೆದಿತ್ತು. ಇದೀಗ ದೆಹಲಿ ಸೇರಿ ಹಲವು ನಗರಗಳಲ್ಲಿ ಈ ಸ್ಪರ್ಧೆ ಆಯೋಜಿಸಲಾಗಿದೆ. ನಮ್ಮ ದೇಶದಲ್ಲೇ ಈ ಸ್ಪರ್ಧೆ ನಡೆಯುತ್ತಿರುವುದರಿಂದ ಸಿನಿ ಶೆಟ್ಟಿ ವಿಶ್ವ ಸುಂದರಿ ಕಿರೀಟ ಧರಿಸಲಿ ಎಂದು ಎಲ್ಲರೂ ಆಶಿಸುತ್ತಿದ್ದಾರೆ. ಸಿನಿ ಶೆಟ್ಟಿ ಕನ್ನಡಿಗರಾಗಿದ್ದು, ಕರಾವಳಿ ಮೂಲದವರಾಗಿದ್ದಾರೆ. ಕರಾವಳಿಯ ಐಶ್ವರ್ಯಾ ರೈ ವಿಶ್ವಸುಂದರಿಯಾಗಿದ್ದರು.. ಇದೀಗ ಸಿನಿ ಶೆಟ್ಟಿ ಕೂಡಾ ವಿಶ್ವಸುಂದರಿಯಾದರೆ, ಕನ್ನಡಕ್ಕೆ ಹೆಮ್ಮೆ.
ಇದನ್ನೂ ಓದಿ; Investment Plan; ಸಂಪ್ರದಾಯಿಕ ಉಳಿತಾಯ ನಿಲ್ಲಿಸಿ, ಸರಿಯಾದ ಕಡೆ ಹೂಡಿಕೆ ಮಾಡಿ, ಕೋಟಿ ಗಳಿಸಿ!
120 ಸುಂದರಿಯರು ಸ್ಪರ್ಧೆಯಲ್ಲಿ ಭಾಗಿ;
120 ಸುಂದರಿಯರು ಸ್ಪರ್ಧೆಯಲ್ಲಿ ಭಾಗಿ; ಸುಮಾರು 120 ದೇಶಗಳ ಸೌಂದರ್ಯ ರಾಣಿಯರು ಈ ವಿಶ್ವಸುಂದರಿಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ಪೋಲೆಂಡ್‌ನ ಮಾಜಿ ವಿಶ್ವ ಸುಂದರಿ ಕರೋಲಿನಾ ಬಿಲಾವ್ಸ್ಕಾ, ಮಾಜಿ ವಿಜೇತರಾದ ಟೋನಿ ಆನ್ ಸಿಂಗ್, ವನೆಸ್ಸಾ ಪೊನ್ಸ್ ಡಿ ಲಿಯಾನ್ ಮತ್ತು ಭಾರತದ ಮಾನುಷಿ ಚಿಲ್ಲರ್ ಇತ್ತೀಚೆಗೆ ದೆಹಲಿಯಲ್ಲಿ ಈ ವಿಷಯದ ಕುರಿತು ನಡೆದ ಸಭೆಯಲ್ಲಿ ಭಾಗವಹಿಸಿದ್ದರು.
ಫೆಮಿನಾ ಮಿಸ್ ಇಂಡಿಯಾ 2022ರ ಪ್ರಶಸ್ತಿ ವಿಜೇತೆ ಸಿನಿ ಶೆಟ್ಟಿ ಮಿಸ್ ವರ್ಲ್ಡ್ ಸ್ಪರ್ಧೆಯಲ್ಲಿ ಭಾರತಕ್ಕಾಗಿ ಸ್ಪರ್ಧಿಸುತ್ತಿದ್ದಾರೆ. ಅಕೌಂಟಿಂಗ್ ಮತ್ತು ಫೈನಾನ್ಸ್‌ನಲ್ಲಿ ಪದವಿ ಓದಿರುವ ಸಿನಿ ಶೆಟ್ಟಿ ಭಾರತವನ್ನು ಪ್ರತಿನಿಧಿಸುವ ಅವಕಾಶ ಪಡೆದ ಖುಷಿಯಲ್ಲಿದ್ದಾರೆ. ಈ ಬಗ್ಗೆ ಮಾತನಾಡಿರುವ ಸಿನಿ ಶೆಟ್ಟಿ, ನಾನು 1.4 ಬಿಲಿಯನ್ ಜನರನ್ನು ಪ್ರತಿನಿಧಿಸುತ್ತಿದ್ದೇನೆ. ಇದು ನನಗೆ ಹೆಚ್ಚಿನ ಸಂತೋಷವನ್ನು ನೀಡುತ್ತದೆ ಎಂದು ಹೇಳಿದ್ದಾರೆ. ದೇಶದ ವಿವಿಧ ಸಂಸ್ಕೃತಿಗಳು, ಸಂಪ್ರದಾಯಗಳು ಮತ್ತು ಭಾವನೆಗಳನ್ನು ಪ್ರತಿನಿಧಿಸುವುದು ದೊಡ್ಡ ಜವಾಬ್ದಾರಿ ನನ್ನ ಮೇಲಿದೆ. ಈ ವೇದಿಕೆಯ ಮೂಲಕ ನಾನು ಬಯಸಿದ್ದನ್ನು ಸಾಧಿಸುತ್ತೇನೆ ಎಂದು ಸಿನಿ ಶೆಟ್ಟಿ ಹೇಳಿದ್ದಾರೆ.
ಇದನ್ನೂ ಓದಿ; Marriage Problem; ಸಿಗದ ವಧು – ಬೈಕ್ ಮೇಲೆ ಗೊಂಬೆ ಕೂರಿಸಿಕೊಂಡು ಓಡಾಡಿದ ಯುವಕ!
1996ರಲ್ಲಿ ಬೆಂಗಳೂರಿನಲ್ಲಿ ನಡೆದಿತ್ತು ಸ್ಪರ್ಧೆ;
1996ರಲ್ಲಿ ಬೆಂಗಳೂರಿನಲ್ಲಿ ನಡೆದಿತ್ತು ಸ್ಪರ್ಧೆ; 1996ರಲ್ಲಿ ವಿಶ್ವ ಸುಂದರಿ ಸ್ಪರ್ಧೆ ಬೆಂಗಳೂರಿನಲ್ಲಿ ನಡೆದಿತ್ತು. ಈ ಸ್ಪರ್ಧೆಗಳನ್ನು ಬಿಗ್ ಬಿ ಅಮಿತಾಬ್ ಬಚ್ಚನ್ ಆಯೋಜಿಸಿದ್ದರು. ನಂತರ 130 ದೇಶಗಳ ಸುಂದರಿಯರು ಭಾಗವಹಿಸಿದ್ದರು. ಇದುವರೆಗೆ ಭಾರತದ ಆರು ಮಹಿಳೆಯರು ವಿಶ್ವ ಸುಂದರಿ ಕಿರೀಟವನ್ನು ಗೆದ್ದಿದ್ದಾರೆ. ರೀಟಾ ಫರಿಯಾ 1966 ರಲ್ಲಿ ಮೊದಲ ಬಾರಿಗೆ ಪ್ರತಿಷ್ಠಿತ ವಿಶ್ವ ಸುಂದರಿ ಪ್ರಶಸ್ತಿಯನ್ನು ಭಾರತಕ್ಕೆ ತಂದರು. 1994 ರಲ್ಲಿ ಐಶ್ವರ್ಯಾ ರೈ, 1997 ರಲ್ಲಿ ಡಯಾನಾ ಹೇಡನ್, 1999 ರಲ್ಲಿ ಯುಕ್ತಾ ಮುಖಿ ವಿಶ್ವ ಸುಂದರಿ ಕಿರೀಟವನ್ನು ಪಡೆದರು. 2006ರಲ್ಲಿ ಪ್ರಿಯಾಂಕಾ ಚೋಪ್ರಾ ಮತ್ತು 2017ರಲ್ಲಿ ಮಾನುಷಿ ಚಿಲ್ಲರ್ ಈ ಸಾಧನೆ ಮಾಡಿದವರಲ್ಲಿ ಪ್ರಮುಖರು.
ಯಾವಾಗ ಶುರುವಾಯ್ತು ವಿಶ್ವಸುಂದರಿ ಸ್ಪರ್ಧೆ?;
ಯಾವಾಗ ಶುರುವಾಯ್ತು ವಿಶ್ವಸುಂದರಿ ಸ್ಪರ್ಧೆ?; ಮೊದಲ ವಿಶ್ವಸುಂದರಿ ಸ್ಪರ್ಧೆ 1951 ರಲ್ಲಿ ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಎರಿಕ್ ಮೋರ್ಲೆ ಪ್ರಾರಂಭಿಸಿದರು. ಆ ಸಮಯದಲ್ಲಿ ಅವರು ದೂರದರ್ಶನ ನಿರೂಪಕರಾಗಿದ್ದರು. ಈ ಸ್ಪರ್ಧೆಗಳನ್ನು ಎರಿಕ್ ಮೊರ್ಲೆಯವರು ಹೆಚ್ಚು ಪ್ರಚಾರ ಮಾಡಿದರು. ಅಂದಿನಿಂದ ಪ್ರತಿ ವರ್ಷ ಈ ಸ್ಪರ್ಧೆಗಳು ಅತ್ಯಂತ ಅದ್ಧೂರಿಯಾಗಿ ನಡೆಯುತ್ತಿವೆ.
ಇದನ್ನೂ ಓದಿ; Elvish Yadav; ಪತ್ರಕರ್ತರು, ಮಹಿಳೆಯರ ಬಗ್ಗೆ ಬಿಗ್‌ಬಾಸ್ ವಿನ್ನರ್ ಅವಹೇಳನ!