HealthLifestyle

Plov; ಇದು ಲೈಂಗಿಕ ಶಕ್ತಿ ಹೆಚ್ಚಿಸಲೆಂದೇ ಇರುವ ವಿಶೇಷ ಅಡುಗೆ!

ಲೈಂಗಿಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಜನರು ಹಲವಾರು ದಾರಿಗಳನ್ನು ಹುಡುಕುತ್ತಿರುತ್ತಾರೆ.. ಕೆಲವರು ಔಷಧಿಗಳನ್ನು ತೆಗೆದುಕೊಂಡರೆ, ಕೆಲವರು ಗಿಡಮೂಲಿಕೆಗಳ ಮೊರೆ ಹೋಗುತ್ತಾರೆ.. ಇನ್ನು ಕೆಲವರು ಮನೆಯಲ್ಲೇ ಸಿಗುವ ಔಷಧೀಯುಕ್ತ ಆಹಾರಗಳನ್ನು ಸೇವಿಸುತ್ತಾರೆ… ಆದ್ರೆ, ಉಜ್ಬೇಕಿಸ್ತಾನದಲ್ಲಿ ಲೈಂಗಿಕ ಶಕ್ತಿ ಹೆಚ್ಚಿಸಿಕೊಳ್ಳಲು ಮುಖ್ಯವಾಗಿ ಪುರುಷರು, ವಿಶೇಷವಾದ ಆಹಾರವೊಂದನ್ನು ಸೇವನೆ ಮಾಡುತ್ತಾರೆ. ಈ ಆಹಾರ ಸೇವನೆ ಮಾಡಿದರೆ, ಪುರುಷರ ಲೈಂಗಿಕ ಶಕ್ತಿ ಹೆಚ್ಚಾಗುತ್ತದೆ.. ಈ ಆಹಾರ ಲೈಂಗಿಕ ಶಕ್ತಿ ಹೆಚ್ಚಿಸಲೆಂದೇ ಸೇವನೆ ಮಾಡುತ್ತಾರಂತೆ..

ಇದನ್ನೂ ಓದಿ; ಗುಂಡಿಕ್ಕಿ ಭಾರತೀಯ ಲೋಕದಳದ ಅಧ್ಯಕ್ಷ ಬರ್ಬರ ಹತ್ಯೆ!

ಸುಗಂಧ ದ್ರವ್ಯಯುಕ್ತ ಈ ಆಹಾರ ಫೇಮಸ್‌;

ಸುಗಂಧ ದ್ರವ್ಯಯುಕ್ತ ಈ ಆಹಾರ ಫೇಮಸ್‌; ಅಕ್ಕಿ, ತರಕಾರಿ, ಮಾಂಸ ಹಾಗೂ ಸುಗಂಧ ದ್ರವ್ಯಗಳನ್ನು ಬಳಸಿ ಈ ಅಡುಗೆ ತಯಾರು ಮಾಡಲಾಗುತ್ತದೆ.. ಇದನ್ನು ಪ್ಲಾವ್‌ ಎಂದು ಕರೆಯಲಾಗುತ್ತದೆ. ಹಲವಾರು ದೇಶಗಳಲ್ಲಿ ಈ ಪ್ಲಾವ್‌ ಎಂಬ ಅಡುಗೆ ತುಂಬಾನೇ ಫೇಮಸ್‌ ಇದೆ.. ಆದ್ರೆ ಉಜ್ಬೇಕಿಸ್ತಾನದಲ್ಲಿ ಈ ಅಡುಗೆ ವಿಶೇಷವಾದ ಸ್ಥಾನವಿದೆ.. ಇದನ್ನು ಆ ದೇಶದ ರಾಷ್ಟ್ರೀಯ ಅಡುಗೆ ಅಂತಾನೆ ಪರಿಗಣಿಸಲಾಗಿದೆ.. ಉಜ್ಬೇಕಿಸ್ತಾನದ ಜನ ಯಾವಾಗಲೂ ಈ ಆಹಾರವನ್ನು ಸೇವನೆ ಮಾಡುತ್ತಾರೆ.. ವಿಶೇಷ ಸುವಾಸನೆ ಹಾಗೂ ರುಚಿ ಇರುವ ಈ ಆಹಾರ, ಎಲ್ಲರಿಗೂ ಅಚ್ಚುಮೆಚ್ಚು..

ಇದನ್ನೂ ಓದಿ; ಮುಂಜಾನೆ ಭೀಕರ ರಸ್ತೆ ಅಪಘಾತ; 9 ಮಂದಿ ದಾರುಣ ಸಾವು!

ಅಲೆಗ್ಜಾಂಡರ್‌ಗಾಗಿ ಈ ಅಡುಗೆ ತಯಾರಿ;

ಅಲೆಗ್ಜಾಂಡರ್‌ಗಾಗಿ ಈ ಅಡುಗೆ ತಯಾರಿ; ಉಜ್ಬೇಕಿಸ್ತಾನದ ಜನ ಈ ಅಡುಗೆಯನ್ನು ವಾರಕ್ಕೆ ಒಮ್ಮೆಯಾದರೂ ಸೇವನೆ ಮಾಡುತ್ತಾರೆ.. ಕುಟುಂಬದ ಸಮಾರಂಭಗಳಲ್ಲಿ, ಬರ್ತ್‌ ಡೇಗಳಲ್ಲಿ, ಮದುವೆಗಳು, ಅಂತ್ಯಕ್ರಿಯೆಗಳು ಹೀಗೆ ಎಲ್ಲಾ ಸಂದರ್ಭಗಳಲ್ಲೂ ಈ ಅಡುಗೆ ಇದ್ದೇ ಇರುಉತ್ತದೆ… ಹಜ್‌ ಯಾತ್ರೆ ಮಾಡಿ ವಾಪಸ್‌ ಬರುವ ಯಾತ್ರಿಕರಿಗೆ ಈ ಅಡುಗೆ ವಿಶೇಷವಾಗಿ ತಯಾರಿಸಿ ಬಡಿಸಲಾಗುತ್ತದೆ.
ಅಂದಹಾಗೆ ಈ ಅಡುಗೆಯನ್ನು ಮೊದಲಿಗೆ ಅಲೆಗ್ಜಾಂಡರ್‌ ಡಿ ಗ್ರೇಟ್‌ ಗಾಗಿ ತಯಾರು ಮಾಡಿದರಂತೆ.. ಅಲೆಗ್ಜಾಂಡರ್‌ಗೆ ವಿಶೇಷ ಅಡುಗೆ ತಯಾರು ಮಾಡಬೇಕೆಂದು ಅಡುಗೆ ಭಟ್ಟನೊಬ್ಬ ಕಂಡುಹಿಡಿದ ಈ ಪ್ಲಾವ್‌ ಈಗ ಲೈಂಗಿಕ ಶಕ್ತಿ ಹೆಚ್ಚಿಸುವ ಆಹಾರವಾಗಿ ಜಗತ್ತಿನಾದ್ಯಂತ ಫೇಮಸ್‌ ಆಗಿದೆ.
ಸೆಂಟ್ರಲ್‌ ಏಷಿಯಾ ಯುದ್ಧದ ವೇಳೆಯಲ್ಲಿ ಅಲೆಗ್ಜಾಂಡರ್‌, ಯೋಧರಿಗಾಗಿ ಯಾವುದಾದರೂ ರುಚಿಕರವಾದ ಆಹಾರ ತಯಾರು ಮಾಡಬೇಕೆಂದು ಆದೇಶ ನೀಡುತ್ತಾನೆ.. ಆಗ ಉಜ್ಬೇಕಿಸ್ತಾನ್‌ ನಲ್ಲಿ ಅಡುಗೆ ಮಾಡುವವರು ಈ ರೀತಿಯ ವಿಶೇಷವಾದ ಸುಗಂಧಭರಿತವಾದ ಅಡುಗೆಯನ್ನು ತಯಾರಿಸಿಕೊಡುತ್ತಾರೆ. ಅದನ್ನು ತಿಂದ ಅಲೆಗ್ಜಾಂಡರ್‌ ಹಾಗೂ ಆತನ ಸೈನಿಕರು ಮನಸೋಲುತ್ತಾರೆ.. ಅಂದಿನಿಂದ ಈ ಅಡುಗೆಗೆ ಪ್ಲಾವ್‌ ಎಂದು ಹೆರಿಟ್ಟು ಕರೆಯಲಾಗುತ್ತದೆ.. ಇದಕ್ಕೆ ಸಾಕ್ಷಿಗಳು ಸಿಗೋದಿಲ್ಲವಾದರೂ, ಈ ಅಡುಗೆ 9, 10ನೇ ಶತಮಾನದಲ್ಲೇ ತುಂಬಾ ಜನಪ್ರಿಯವಾಗಿತ್ತು ಅನ್ನೋದಕ್ಕೆ ಸಾಕಷ್ಟು ಐತಿಹಾಸಿಕ ದಾಖಲೆಗಳು ಸಿಗುತ್ತವೆ.

ಇದನ್ನೂ ಓದಿ; Honey; ಸಕ್ಕರೆ ಬದಲು ಜೇನು ಬಳಸಬಹುದೇ?; ಯಾರು ಬೇಕಾದರೂ ಜೇನು ಸೇವಿಸಬಹುದೇ..?

ಪೋಷಕಾಂಶಗಳಿರುವ ಅಡುಗೆ ಎಂದೇ ಹೆಸರು;

ಪೋಷಕಾಂಶಗಳಿರುವ ಅಡುಗೆ ಎಂದೇ ಹೆಸರು; ಈ ಪ್ಲಾವ್‌ ನಲ್ಲಿ ಅನೇಕ ಪೋಷಕಾಂಶಗಳಿವೆ.. ಹೀಗಾಗಿ, ಇದನ್ನು ತಿಂದರೆ ಲೈಂಗಿಕ ಶಕ್ತಿ ಹೆಚ್ಚಾಗುತ್ತದೆ ಎಂಬ ನಂಬಿಕೆ ಇದೆ.. ಅಂದಹಾಗೆ, ಉಜ್ಬೇಕಿಸ್ತಾನ್‌ ಪ್ರಾಂತ್ಯದಲ್ಲಿ 1000 ವರ್ಷಗಳಿಗೂ ಮುಂಚಿನಿಂದ ಭತ್ತ ಪ್ರಧಾನ ಬೆಳೆಯಾಗಿ ಬೆಳೆಯಲಾಗುತ್ತದೆ.. ಕೃಷಿ, ದನಗಳ ಸಾಕಾಣೆ ಮುಂತಾದುವದಕ್ಕೆ ದೈಹಿಕ ಶ್ರಮ ತುಂಬಾನೇ ಅಗತ್ಯ.. ಆದ್ದರಿಂದ ಇಲ್ಲಿನ ದೇಹಕ್ಕೆ ಶಕ್ತಿ ಬರುವುದಕ್ಕಾಗಿ ಅನೇಕ ಕ್ಯಾಲರಿಗಳು, ಪೋಷಕಾಂಶಗಳಿರುವ ಪ್ಲಾವ್‌ ಅಡುಗೆಯನ್ನು ತಿನ್ನೋದಕ್ಕೆ ಶುರು ಮಾಡುತ್ತಾರೆ.. ಅದು ಲೈಂಗಿಕ ಶಕ್ತಿ ಹೆಚ್ಚಿಸಿಕೊಳ್ಳಲೂ ಸಹಾಯಕವಾಗುತ್ತದೆ ಎಂದು ಹೇಳುತ್ತಾರೆ ಇಲ್ಲಿನ ಜನ.

ಇದನ್ನೂ ಓದಿ; ಸ್ಪರ್ಮ್‌ ಕೌಂಟ್‌ ಹೆಚ್ಚಾಗಬೇಕು ಅಂದ್ರೆ ಏನು ಮಾಡಬೇಕು ಗೊತ್ತಾ..?

ಉಜ್ಬೇಕಿಸ್ತಾನದಲ್ಲಿ ಪ್ಲಾವ್‌ ಇಲ್ಲದ ಜೀವನವೇ ಇಲ್ಲವಂತೆ!;

ಉಜ್ಬೇಕಿಸ್ತಾನದಲ್ಲಿ ಪ್ಲಾವ್‌ ಇಲ್ಲದ ಜೀವನವೇ ಇಲ್ಲವಂತೆ!; ಉಜ್ಬೇಕಿಸ್ತಾನ್‌ ಅಡುಗೆಗಳಲ್ಲಿ ತುಂಬಾನೇ ವಿಶೇಷವಾದುದು ಈ ಪ್ಲಾವ್‌.. ಇದನ್ನು ಇಲ್ಲಿನ ಒಂದು ಅಡುಗೆಯಾಗಿ ಮಾತ್ರ ಎಂದೂ ನೋಡೋದಿಲ್ಲ.. ಇದು ಬಂಧಗಳನ್ನು ಸೃಷ್ಟಿ ಮಾಡುತ್ತದೆ.. ಸ್ನೇಹ ಹೆಚ್ಚು ಮಾಡುತ್ತದೆ, ದೇಶವನ್ನು ಒಗ್ಗಟ್ಟು ಮಾಡುತ್ತದೆ ಎಂದು ಇಲ್ಲಿನ ಜನ ನಂಬಿದ್ದಾರೆ.. ಉಜ್ಬೇಕಿಸ್ತಾನದ ಭಾಷೆಯಲ್ಲಿ ಪ್ಲಾವ್‌ ಎಂಬ ಪದಕ್ಕೆ ವಿಶೇಷವಾದ ಸ್ಥಾನವಿದೆ.. ಇಲ್ಲಿನ ಜನ ಇವತ್ತು ಸತ್ತುಹೋಗುತ್ತೇವೆ ಎಂದು ನಮಗೆ ಮೊದಲೇ ಗೊತ್ತಾದರೆ, ಮೊದಲು ಪ್ಲಾವ್‌ ತಿಂದು ಖುಷಿಯಿಂದ ಸಾಯುತ್ತೇವೆ ಎಂದು ಹೇಳುತ್ತಾರೆ ಉಜ್ಬೇಕಿಸ್ತಾನದ ಜನ.. ಆ ಮಟ್ಟಿಗೆ ಪ್ಲಾವ್‌ ಇಲ್ಲಿನ ಜನರ ಜೀವಾಳವಾಗಿ ನೆಲೆಯೂರಿದೆ.

ನೂರು ತರದಲ್ಲಿ ಪ್ಲಾವ್‌ ತಯಾರಿಸಲಾಗುತ್ತದೆ;

ನೂರು ತರದಲ್ಲಿ ಪ್ಲಾವ್‌ ತಯಾರಿಸಲಾಗುತ್ತದೆ; ಉಜ್ಬೇಕಿಸ್ತಾನದಲ್ಲಿ ನೂರಕ್ಕೂ ಹೆಚ್ಚು ರೀತಿಯಲ್ಲಿ ಪ್ಲಾವ್‌ ತಯಾರಿಸಲಾಗುತ್ತದೆ.. ಅಂದಹಾಗೆ, ಪ್ಲಾವ್‌ ಅಂದರೆ ಪಲಾವ್‌ ಎಂದರ್ಥ ಅಷ್ಟೇ.. ಪರ್ಷಿಯನ್‌ ಭಾಷೆಯಲ್ಲಿ ಇದಕ್ಕೆ Osh Palov ಎಂದು ಕರೆಯುತ್ತಾರೆ.. ಇಲ್ಲಿ O ಎಂದರೆ ಓಬ್‌ ಎಂದರ್ಥ. ಹಾಗಂದ್ರೆ ಪರ್ಷಿಯನ್‌ ಭಾಷೆಯಲ್ಲಿ ನೀರು. Sh ಎಂದರೆ ಷೋಲಿ ಅಂದರೆ ಅಕ್ಕಿ, P ಅಂದ್ರೆ ಪಿಯೋಜ್‌(ಈರುಳ್ಳಿ), A ಅಂದ್ರೆ ಅಯೋಜ್‌ (ಕ್ಯಾರೆಟ್‌), L ಅಂದರೆ ಲಾಮ್‌ (ಮಾಂಸ) ಹಾಗೂ O ಅಂದರೆ ಒಲಿಯೊ (ಕೊಬ್ಬು ಅಥವಾ ಎಣ್ಣೆ), V ಎಂದರೆ ವೆಟ್‌ (ಉಪ್ಪು). ಹೀಗೆ ಪ್ಲಾವ್‌ನಲ್ಲಿ ಬಳಸುವ ಪ್ರಮುಖ ವಸ್ತುಗಳ ಮೊದಲ ಅಕ್ಷರ ಸೇರಿಸಿ ಅದಕ್ಕೆ OSH PALOV ಎಂದು ಹೆಸರಿಟ್ಟಿದ್ದಾರೆ. ಅದನ್ನು ಈಗ ಪ್ಲಾವ್‌ ಎಂದು ಕರೆಯಲಾಗುತ್ತಿದೆ. ಉಜ್ಬೇಕಿಸ್ತಾನದಲ್ಲಿ ಪ್ರಾಂತ್ಯ, ಹವಾಮಾನಕ್ಕೆ ಅನುಗುಣವಾಗಿ ಪ್ಲಾವ್‌ ತಯಾರಿಸಲಾಗುತ್ತದೆ. ನೂರು ರೀತಿಯಲ್ಲಿ ಪ್ಲಾವ್‌ ತಯಾರು ಮಾಡಿದರೂ ಮೇಲೆ ಹೇಳಿದ ವಸ್ತುಗಳು ಮಾತ್ರ ಎಲ್ಲಾ ಅಡುಗೆಯಲ್ಲೂ ಇದ್ದೇ ಇರುತ್ತವೆ.

ಇದನ್ನೂ ಓದಿ; Smoking and eye disease; ಧೂಮಪಾನದಿಂದ ಕ್ಯಾನ್ಸರ್‌ ಅಷ್ಟೇ ಬರಲ್ಲ, ಕಣ್ಣೂ ಕಾಣ್ಸೋದಿಲ್ಲ!

ಗುರುವಾರ ಪ್ಲಾವ್‌ ಹೆಚ್ಚು ತಿನ್ನುತ್ತಾರೆ;

ಗುರುವಾರ ಪ್ಲಾವ್‌ ಹೆಚ್ಚು ತಿನ್ನುತ್ತಾರೆ; ಉಜ್ಬೇಕಿಸ್ತಾನದ ಜನ ಗುರುವಾರ ಗರ್ಭ ಧರಿಸುವುದಕ್ಕೆ ಒಳ್ಳೆಯ ದಿನ ಎಂದು ಭಾವಿಸುತ್ತಾರೆ.. ಹೀಗಾಗಿ, ಪ್ಲಾವ್‌ ಪುರುಷರಲ್ಲಿ ವೀರ್ಯ ಕಣಗಳನ್ನು ವೃದ್ಧಿ ಮಾಡಲಾಗುತ್ತದೆ ಎಂದು ಹೇಳಲಾಗುತ್ತದೆ.. ಹೀಗಾಗಿ ಪುರುಷರು ಗುರುವಾರದಂದು ಹೆಚ್ಚಾಗಿ ಪ್ಲಾವ್‌ ಸೇವನೆ ಮಾಡಿ, ಸಂಗಾತಿಯ ಜೊತೆ ಶೃಂಗಾರ ನಡೆಸುತ್ತಾರೆ. ಹೀಗಾಗಿ, ಉಜ್ಬೇಕಿಸ್ತಾನದಲ್ಲಿ ಗುರುವಾರ ಪ್ಲಾವ್‌ ಅಡುಗೆ ಬಹುತೇಕ ಎಲ್ಲರ ಮನೆಗಳಲ್ಲೂ ತಯಾರಾಗಿರುತ್ತವೆ.

ಇದನ್ನೂ ಓದಿ; Protien; ನಮ್ಮ ದೇಹಕ್ಕೆ ಎಷ್ಟು ಪ್ರೋಟೀನ್‌ ಬೇಕು?; ಎಲ್ಲಿಂದ ಸಿಗುತ್ತೆ..?

Share Post