BengaluruLifestyle

ಇದು ನಮ್ಮ ಮೆಟ್ರೋ ಅಲ್ಲವೇ..?; ಗಲೀಜು ಬಟ್ಟೆ ಧರಿಸಿದ ರೈತನಿಗೆ ಮೆಟ್ರೋ ಪ್ರವೇಶವಿಲ್ಲವಂತೆ!

ಬೆಂಗಳೂರು; ಬೆಂಗಳೂರು ಮೆಟ್ರೋಗೆ ನಮ್ಮ ಮೆಟ್ರೋ ಅಂತ ಹೆಸರಿಟ್ಟಿದ್ದಾರೆ.. ನಮ್ಮ ಮೆಟ್ರೋ ಅಂದ್ರೆ ಜನರ ಮೆಟ್ರೋ ಎಂದು ಎಲ್ಲರೂ ಭಾವಿಸಿದ್ದರು.. ಆದ್ರೆ ಎಲ್ಲಾ ಜನರದ್ದೂ ಅಲ್ಲ ಅನ್ನೋದು ಈ ಸಾಬೀತಾಗಿದೆ.. ನಮ್ಮ ಮೆಟ್ರೋ ಒಳ್ಳೆ ಬಟ್ಟೆ ಧರಿಸಿ ಬರೋರಿ ಮಾತ್ರ ಅಂತೆ.. ಕೊಳಕು ಬಟ್ಟೆ ಧರಿಸಿ, ಹಳ್ಳಿಯಿಂದ ಬಂದ ರೈತರು ಮೆಟ್ರೋ ಹತ್ತುತ್ತೇವೆ ಅಂತ ಹೋದರೆ ಅವರಿಗೆ ಒಳಗೇ ಬಿಡೋಲ್ವಂತೆ.. ಹೀಗೆ ನಮ್ಮ ಮೆಟ್ರೋದಲ್ಲಿ ಟಿಕೆಟ್‌ ಖರೀದಿ ಮಾಡಿದರೂ, ಬಟ್ಟೆ ಗಲೀಜಾಗಿದೆ ಅನ್ನೋದ ಕಾರಣಕ್ಕೆ ರೈತನೊಬ್ಬನನ್ನು ಒಳಬಿಟ್ಟಿಲ್ಲ.. ಇದನ್ನು ನೋಡಿದರೆ ಸಹ ಪ್ರಯಾಣಿಕರು ಮೆಟ್ರೋ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

ಇದನ್ನೂ ಓದಿ; Plov; ಇದು ಲೈಂಗಿಕ ಶಕ್ತಿ ಹೆಚ್ಚಿಸಲೆಂದೇ ಇರುವ ವಿಶೇಷ ಅಡುಗೆ!

ಹಾಗಾದ್ರೆ ಮೆಟ್ರೋ ವಿಐಪಿಗಳಿಗೆ, ಉಳ್ಳವರಿಗೆ ಮಾತ್ರಾನಾ..?;

ಹಾಗಾದ್ರೆ ಮೆಟ್ರೋ ವಿಐಪಿಗಳಿಗೆ, ಉಳ್ಳವರಿಗೆ ಮಾತ್ರಾನಾ..?; ರೈತನೊಬ್ಬ ತಲೆಯ ಮೇಲೆ ಬಟ್ಟೆ ಮೂಟೆಯನ್ನಿಟ್ಟುಕೊಂಡು ಬೆಂಗಳೂರಿನ ರಾಜಾಜಿನಗರದ ಮೆಟ್ರೋ ನಿಲ್ದಾಣದಲ್ಲಿ ಟಿಕೆಟ್‌ ಖರೀದಿ ಮಾಡಿದ್ದಾರೆ. ಆದ್ರೆ ಒಳಗೆ ಎಂಟ್ರಿ ಕೊಡುವ ಸಮಯದಲ್ಲಿ ಆ ರೈತನನ್ನು ತಡೆದಿದ್ದಾರೆ.  ತಡೆದು ನಿಮ್ಮ ಬಟ್ಟೆ ಗಲೀಜಿದೆ.. ಬೇರೆ ಪ್ರಯಾಣಿಕರಿಗೆ ತೊಂದರೆಯಾಗುತ್ತದೆ.. ಒಳಗೆ ಬಿಡೋದಿಲ್ಲ ಎಂದು ಮೆಟ್ರೋ ಸಿಬ್ಬಂದಿ ಹೇಳಿದ್ದಾರೆ ಎಂದು ಆರೋಪಿಸಲಾಗಿದೆ. ಈ ವೇಳೆ ಅಲ್ಲಿದ್ದ ಪ್ರಯಾಣಿಕರೊಬ್ಬರು, ಮೆಟ್ರೋ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.. ಹಾಗಾದ್ರೆ ಇದು ವಿಐಪಿಗಳಿಗೆ ಮಾತ್ರಾನಾ ಇರೋದು ಎಂದು ಪ್ರಶ್ನೆ ಮಾಡಿದ್ದಾರೆ. ರೈತನಿಗೆ ನೀವು ಮೆಟ್ರೋ ಹತ್ತಲು ಬಿಡೋದಿಲ್ಲ ಎಂದು ಹೇಳಿದರೆ ಹೇಗೆ ಎಂಬ ಪ್ರಯಾಣಿಕರು ಪ್ರಶ್ನೆ ಮಾಡಿದ್ದಾರೆ.. ಈ ವಿಡಿಯೋ ಈಗ ಎಲ್ಲೆಡೆ ವೈರಲ್‌ ಆಗುತ್ತಿದೆ.. ನಮ್ಮ ಮೆಟ್ರೋ ಅಂದ್ರೆ ಉಳ್ಳವರ ಮೆಟ್ರೋನಾ ಎಂದು ಜನ ಪ್ರಶ್ನೆ ಮಾಡುತ್ತಿದ್ದಾರೆ.

ಇದನ್ನೂ ಓದಿ; Honey; ಸಕ್ಕರೆ ಬದಲು ಜೇನು ಬಳಸಬಹುದೇ?; ಯಾರು ಬೇಕಾದರೂ ಜೇನು ಸೇವಿಸಬಹುದೇ..?

ರೈತನ ಬೆಂಬಲಕ್ಕೆ ನಿಂತ ಕೆಲ ಪ್ರಯಾಣಿಕರು;

ರೈತನ ಬೆಂಬಲಕ್ಕೆ ನಿಂತ ಕೆಲ ಪ್ರಯಾಣಿಕರು; ರೈತ ಬಟ್ಟೆ ಗಂಟಿನೊಂದಿಗೆ ಮೆಟ್ರೋ ಹತ್ತಲು ಬಂದಿದ್ದಾನೆ. ವಯಸ್ಸಿನಲ್ಲೂ ಹಿರಿಯನಾದ ರೈತನ ಬಟ್ಟೆ ಸ್ವಲ್ಪ ಮಾಸಿದೆ.. ಹೀಗಾಗಿ, ಲಗ್ಗೇಜ್‌ ಚೆಕ್‌ ಮಾಡುವ ರೈತನನ್ನು ಒಳಬಿಡುವುದಿಲ್ಲ ಎಂದು ಹೇಳಲಾಯಿತಂತೆ. ಇದನ್ನು ನೋಡಿದ ಕೆಲ ಪ್ರಯಾಣಿಕರು ಇದನ್ನು ಪ್ರಶ್ನೆ ಮಾಡಿದ್ದಾರೆ.. ರೈತನಿಗೆ ಯಾಕೆ ಒಳಬಿಡುವುದಿಲ್ಲ..? ಅವರು ಟಿಕೆಟ್‌ ಖರೀದಿ ಮಾಡಿಲ್ಲವೇ..? ಇದು ಶ್ರೀಮಂತರಿಗೆ ಮಾತ್ರವೇನಾ ಇರೋದು ಎಂದು ಪ್ರಶ್ನೆ ಮಾಡಿದ್ದಾರೆ. ಕಾರ್ತೀಕ್‌ ಎಂಬ ಪ್ರಯಾಣಿಕನಂತೂ ಇದೇನು ವಿಐಪಿ ಟ್ರಾನ್ಸ್‌ಪೋರ್ಟಾ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ;ಸ್ಪರ್ಮ್‌ ಕೌಂಟ್‌ ಹೆಚ್ಚಾಗಬೇಕು ಅಂದ್ರೆ ಏನು ಮಾಡಬೇಕು ಗೊತ್ತಾ..?

ನಗುತ್ತಲೇ ಹೊರ ನಡೆದ ರೈತ;

ನಗುತ್ತಲೇ ಹೊರ ನಡೆದ ರೈತ; ಮೆಟ್ರೋ ಬಂದಿದ್ದ ರೈತ , ಮೆಟ್ರೋ ಟಿಕೆಟ್‌ ಖರೀದಿ ಮಾಡಿದ್ದ… ಆದ್ರೆ ಮೆಟ್ರೋ ಸಿಬ್ಬಂದಿ ಸಹಪ್ರಯಾಣಿಕರಿಗೆ ಅಸಹ್ಯವಾಗುತ್ತೆ ಅನ್ನೋ ಕಾರಣಕ್ಕೆ ಮಾಸಿದ ಬಟ್ಟೆ  ಹಾಕಿದ್ದ ರೈತನನ್ನು ಒಳಬಿಟ್ಟಿಲ್ಲ.. ಕೆಲ ಪ್ರಯಾಣಿಕರು ರೈತನ ಪರವಾಗಿ ಮಾತನಾಡಿದರೂ, ಮೆಟ್ರೋ  ಸಿಬ್ಬಂದಿ ಅದನ್ನು ಕೇಳಿಲ್ಲ.. ರೈತನನ್ನು ಒಳಬಿಡೋದಕ್ಕೆ ಒಪ್ಪಿಲ್ಲ. ಕೊನೆಗೆ ಆ ರೈತ ನಗುತ್ತಲೇ ಮೆಟ್ರೋ ನಿಲ್ದಾಣದಿಂದ ಹೊರನಡೆದಿದ್ದಾರೆ..

ಇದನ್ನೂ ಓದಿ; Smoking and eye disease; ಧೂಮಪಾನದಿಂದ ಕ್ಯಾನ್ಸರ್‌ ಅಷ್ಟೇ ಬರಲ್ಲ, ಕಣ್ಣೂ ಕಾಣ್ಸೋದಿಲ್ಲ!

Share Post