Health

Smoking and eye disease; ಧೂಮಪಾನದಿಂದ ಕ್ಯಾನ್ಸರ್‌ ಅಷ್ಟೇ ಬರಲ್ಲ, ಕಣ್ಣೂ ಕಾಣ್ಸೋದಿಲ್ಲ!

ಧೂಮಪಾನ ಮಾಡಿದರೆ ಕ್ಯಾನ್ಸರ್‌ ಬರುತ್ತದೆ.. ಉಸಿರಾಟದ ತೊಂದರೆಗಳು ಉಂಟಾಗುತ್ತವೆ… ಅಷ್ಟೇ ಏಕೆ ಹೃದಯ ಸಂಬಂಧಿಕ ಕಾಯಿಲೆಗಳೂ ಬರುತ್ತವೆ… ಹೀಗಂತ ನಾವು ಮೊದಲಿನಿಂದ ಕೇಳಿಕೊಂಡು ಬಂದಿದ್ದೇವೆ… ಇದಿಷ್ಟೇ ಅಲ್ಲ, ಸಿಗರೇಟ್‌, ಬೀಡಿ ಸೇದುವುದರಿಂದ ಕಣ್ಣಿನ ಸಮಸ್ಯೆಯೂ ಎದುರಾಗುತ್ತದೆ ಅಂತ ವೈದ್ಯರು ಹೇಳುತ್ತಿದ್ದಾರೆ.. ಧೂಮಪಾನ ಮಾಡುವವರು ಬಹುಬೇಗ ದೃಷ್ಟಿ ಕಳೆದುಕೊಂಡು ಅಂಧರಾಗುತ್ತಾರೆ ಎಂದು ತಜ್ಞರು ಎಚ್ಚರಿಕೆ ಕೊಡುತ್ತಿದ್ದಾರೆ.

ವಯಸ್ಸಿಗೆ ಸಂಬಂಧಿಸಿದ ಮ್ಯಾಕ್ಯುಲರ್ ಡಿಜೆನರೇಶನ್;

ವಯಸ್ಸಿಗೆ ಸಂಬಂಧಿಸಿದ ಮ್ಯಾಕ್ಯುಲರ್ ಡಿಜೆನರೇಶನ್; ಧೂಮಪಾನದಿಂದ ಹಲವಾರು ಕಾಯಿಲೆಗಳಿಗೆ ದಾರಿ ಮಾಡಿಕೊಡುತ್ತದೆ.. ಅದರಲ್ಲೂ ಕೂಡಾ ಇತ್ತೀಚಿನ ಅಧ್ಯಯನಗಳ ಪ್ರಕಾರ ಮಾಡುವವರು ಬಹುಬೇಗ ದೃಷ್ಟಿಹೀನರಾಗುತ್ತಿದ್ದಾರೆ.. ಯಾಕಂದ್ರೆ ಧೂಮಪಾನಿಗಳಲ್ಲಿ ವಯಸ್ಸಿಗೆ ಸಂಬಂಧಿಸಿದ ಮ್ಯಾಕ್ಯುಲರ್ ಡಿಜೆನರೇಶನ್ (AMD) ಅಪಾಯವು ಹೆಚ್ಚು ಎಂದು ತಜ್ಞರು ಹೇಳುತ್ತಾರೆ. ವಯಸ್ಸಾದವರಲ್ಲಿ ಬದಲಾಯಿಸಲಾಗದ ದೃಷ್ಟಿ ನಷ್ಟಕ್ಕೆ AMD ಪ್ರಮುಖ ಕಾರಣವಾಗಿದೆ. ಇದು ಕ್ರಮೇಣ ದೃಷ್ಟಿ ಹದಗೆಡುವಂತೆ ಮಾಡುತ್ತದೆ. ಓದುವ, ಓಡಾಡುವ, ಇತರ ಜನರನ್ನು ಗುರುತಿಸುವ ಸಾಮರ್ಥ್ಯವನ್ನು ದಿನೇ ದಿನೇ ಕಳೆದುಕೊಳ್ಳುತ್ತಾ ಹೋಗುತ್ತೇವೆ. ಧೂಮಪಾನವನ್ನು ತಪ್ಪಿಸುವುದರಿಂದ AMD ಯ ಬೆಳವಣಿಗೆಯನ್ನು ವಿಳಂಬಗೊಳಿಸಬಹುದು. ದೀರ್ಘಕಾಲದವರೆಗೆ ದೃಷ್ಟಿಯನ್ನು ರಕ್ಷಿಸಬಹುದು.

 ಚಿಕ್ಕ ವಯಸ್ಸಿನಲ್ಲೇ ಕಣ್ಣಿನ ಪೊರೆ;

ಚಿಕ್ಕ ವಯಸ್ಸಿನಲ್ಲೇ ಕಣ್ಣಿನ ಪೊರೆ; ಧೂಮಪಾನ ಮಾಡುವುದರಿಂದ ಕಣ್ಣಿನ ಪೊರೆಗಳ ಬೆಳವಣಿಗೆ ಹೆಚ್ಚಿರುತ್ತದೆ.. ಇದರಿಂದಾಗಿ ಕಣ್ಣಿನ ಅಪಾಯ ಜಾಸ್ತಿಯಾಗುತ್ತದೆ. ಈ ಸಮಸ್ಯೆ ಇದ್ದರೆ ಕಣ್ಣುಗುಡ್ಡೆಯಲ್ಲಿ ಮಂಜಾದ ದೃಷ್ಟಿ, ದೃಷ್ಟಿ ಮಂದವಾಗುವುದು, ವಸ್ತುಗಳು ಎರಡೆರಡು ಕಾಣುವುದು, ಕಣ್ಣಿನಲ್ಲಿ ಬಿಳಿ ದೃಷ್ಟಿ ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಧೂಮಪಾನಿಗಳಲ್ಲದವರಿಗೆ ಹೋಲಿಸಿದರೆ, ಧೂಮಪಾನಿಗಳಲ್ಲಿ ಕಣ್ಣಿನ ಪೊರೆ ಬೆಳೆಯುವ ಸಾಧ್ಯತೆ ಎರಡರಿಂದ ಮೂರು ಪಟ್ಟು ಹೆಚ್ಚು. ಕಣ್ಣಿನ ಪೊರೆಗಳ ಹೊರತಾಗಿ, ಇದು ಕಾಂಟ್ರಾಸ್ಟ್ ಸೆನ್ಸಿಟಿವಿಟಿಯನ್ನು ಕಡಿಮೆ ಮಾಡುತ್ತದೆ. ರಾತ್ರಿ ದೃಷ್ಟಿ ಕಡಿಮೆಯಾಗುತ್ತದೆ. ಧೂಮಪಾನವನ್ನು ತ್ಯಜಿಸುವುದರಿಂದ ಕಣ್ಣಿನ ಪೊರೆಗಳ ಅಪಾಯವನ್ನು ಕಡಿಮೆ ಮಾಡಬಹುದು.

ಹೊಗೆ ಸೇದುವವರ ಬಳಿ ಇದ್ದವರಿಗೂ ಅಪಾಯ;

ಹೊಗೆ ಸೇದುವವರ ಬಳಿ ಇದ್ದವರಿಗೂ ಅಪಾಯ; ಬರೀ ಧೂಮಪಾನ ಮಾಡುವವರಿಗೆ ಅಷ್ಟೇ ಅಲ್ಲ. ಧೂಮಪಾನ ಮಾಡುವವರ ಜೊತೆ ಯಾವಾಗಲೂ ಇರುವವರಿಗೂ ಈ ದೃಷ್ಟಿ ಸಮಸ್ಯೆ ಎದುರಾಗುತ್ತದೆ. ಧೂಮಪಾನ ಮಾಡುವವರಿಗಿಂತ ಅವರ ಜೊತೆ ಇರುವವರಿಗೆ ಈ ಸಮಸ್ಯೆ ಹೆಚ್ಚಾಗುತ್ತದೆ. ಅದೂ ಕೂಡಾ ಬೀಡಿ, ಸಿಗರೇಟ್‌ ಮಾರುವ ಅಂಗಡಿಗಳವರಿಗೆ ಈ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳಬಹುದು. ಯಾಕಂದ್ರೆ ನಿತ್ಯ ಅವರ ಅಂಗಡಿ ಬಳಿ ಬರುವ ಗ್ರಾಹಕರು ಅಲ್ಲಿಯೇ ಸಿಗರೇಟ್‌ ಸೇದುತ್ತಾರೆ.. ಇದು ಅಂಗಡಿ ಮಾಲೀಕರು ಹೊಗೆ ಉಸಿರಾಡುವಂತಾಗುತ್ತದೆ. ಇದರಿಂದಾಗಿ ಅವರಿಗೂ ಕಣ್ಣು ಮಂಜಾಗುವ ಸಾಧ್ಯತೆ ಇದೆ. ಇಂತಹವರಿಗೆ ಸಮೀಪ ದೃಷ್ಟಿದೋಷದ ಅಪಾಯವಿದೆ ಎಂದು ತಜ್ಞರು ಹೇಳುತ್ತಿದ್ದಾರೆ.

 

Share Post