ಈ ಬಾರಿ ಅಧಿಕ ಶ್ರಾವಣಮಾಸ; ಎರಡು ತಿಂಗಳು ಮಾಂಸ ಮುಟ್ಟಂಗಿಲ್ಲ!
ಬೆಂಗಳೂರು; ಶ್ರಾವಣಮಾಸ ಬಂದುಬಿಟ್ಟಿದೆ. ಆದ್ರೆ ಈ ಬಾರಿಯ ಶ್ರಾವಣ ಮಾಸ ಸ್ಪೆಷಲ್ ಇದೆ. ಯಾಕಂದ್ರೆ ಶ್ರಾವಣ ಮಾಸ ಅಂದ್ರೆ ಒಂದೇ ತಿಂಗಳಲ್ಲ. ಈ ಬಾರಿ ಎರಡು ತಿಂಗಳು ಶ್ರಾವಣ ಇರುತ್ತದೆ. ಬರೋಬ್ಬರಿ 59 ದಿನ ಶ್ರಾವಣ ಆಚರಿಸಬೇಕಾಗುತ್ತದೆ. ಯಾಕಂದ್ರೆ ಈ ಬಾರಿ ಅಧಿಕ ಶ್ರಾವಣಮಾಸ ಬಂದಿದೆ.
ಶ್ರಾವಣದಲ್ಲಿ ಬಹುತೇಕರು ಮಾಂಸ ಸೇವಿಸೋದಿಲ್ಲ. ಪ್ರತಿ ಸೋಮವಾರ ಹಾಗೂ ಶನಿವಾರಗಳಂದು ಉಪವಾಸವಿರುತ್ತಾರೆ. ಪ್ರತಿ ಶ್ರಾವಣಮಾಸದಲ್ಲಿ ಬರೀ ನಾಲ್ಕು ಶ್ರಾವಣ ಸೋಮವಾರಗಳು ಬರುತ್ತಿದ್ದವು. ಆದ್ರೆ ಈ ಬಾರಿ ಎಂಟು ಸೋಮವಾರಗಳು ಬಂದಿವೆ. ಆಗಸ್ಟ್ 31ರವರೆಗೂ ಶ್ರಾವಣ ಮಾಸ ಇರುತ್ತದೆ.
19 ವರ್ಷಕ್ಕೊಮ್ಮೆ ಹೀಗೆ ಅಧಿಕ ಮಾಸ ಬರುತ್ತದೆ. ಈ ಕಾರಣದಿಂದಾಗಿ ಶ್ರಾವಣ ಮಾಸ ಎರಡು ತಿಂಗಳು ಇರುತ್ತದೆ.