CrimeHealthNational

ವಯನಾಡಿನ ಬಳಿಯೂ ಗುಡ್ಡ ಕುಸಿತ; 5 ಸಾವು, 100 ಮಂದಿ ನಾಪತ್ತೆ!

ವಯನಾಡ್‌; ಮಳೆಯ ಅಬ್ಬರ ಜೋರಾಗಿರುವುದರಿಂದ ಅವಾಂತರಗಳು ನಡೆಯುತ್ತಲೇ ಇವೆ.. ಕಾರವಾರದ ಅಂಕೋಲಾದ ಬಳಿ ಗುಡ್ಡ ಕುಸಿದು ಹಲವರು ಪ್ರಾಣ ಕಳೆದುಕೊಂಡಿದ್ದಾರೆ.. ಇನ್ನೂ ಹಲವರು ನಾಪತ್ತೆಯಾಗಿದ್ದು, ಕಾರ್ಯಾಚರಣೆ ಮುಂದುವರೆದೇ ಇದೆ. ಹೀಗಿರುವಾಗಲೇ ಕೇರಳದಲ್ಲಿ ಕೂಡಾ ಗುಡ್ಡ ಕುಸಿದು ದುರಂತ ನಡೆದಿದೆ..

ಇದನ್ನೂ ಓದಿ; ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರರನ್ನು ಎಂದಿಗೂ ಒಪ್ಪಲ್ಲ; ಮಾಜಿ ಸಚಿವ ರಮೇಶ್‌ ಜಾರಕಿಹೊಳಿ

ಕೇರಳದ ವಯನಾಡು ಜಿಲ್ಲೆಯ ಮೆಪ್ಪಾಡಿ ಎಂಬಲ್ಲಿ ಗುಡ್ಡ ಕುಸಿದಿದ್ದು, ಐದು ಮಂದಿ ಸಾವನ್ನಪ್ಪಿದ್ದಾರೆ.. ಘಟನೆಯಲ್ಲಿ ನೂರಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.. ಎರಡು ಬಾರಿ ಭೂಕುಸಿತವಾಗಿದೆ.. ಬೆಳಗಿನ ಜಾವ ಈ ದುರ್ಘಟನೆ ನಡೆದಿದ್ದು, ಏನಾಗಿದೆ ಎಂದು ನೋಡುವಷ್ಟರಲ್ಲೇ ಹಲರವ ಪ್ರಾಣಪಕ್ಷಿ ಹಾರಿಹೋಗಿದೆ..
ಇದನ್ನೂ ಓದಿ; ಹೈದರಾಬಾದ್ ಬಳಿ ಭೀಕರ ಅಪಘಾತ!; ಭಯಾನಕ ವಿಡಿಯೋ ಸೆರೆ

ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.. ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಸಿಬ್ಬಂದಿ ನಿರಂತರ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.. ಇದುವರೆಗೆ ಐವರು ಮೃತದೇಹಗಳನ್ನು ಹೊರತೆಗೆಯಲಾಗಿದೆ.. ತೊಂಡರ್ನಾಡ್‌ ಬಳಿ ವಾಸವಿದ್ದ ನೇಪಾಳಿ ಕುಟುಂಬದ ಒಂದು ವರ್ಷದ ಮಗು ಕೂಡಾ ಸಾವನ್ನಪ್ಪಿದೆ..

ಇದನ್ನೂ ಓದಿ; ಬ್ಯಾಡರಹಳ್ಳಿಯ ಮಾನಸ ಆತ್ಮಹತ್ಯೆಗೆ ಕಾರಣ ಏನು ಗೊತ್ತಾ..?

Share Post