ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರರನ್ನು ಎಂದಿಗೂ ಒಪ್ಪಲ್ಲ; ಮಾಜಿ ಸಚಿವ ರಮೇಶ್ ಜಾರಕಿಹೊಳಿ
ಬೆಳಗಾವಿ; ವಿಜಯೇಂದ್ರ ಅವರು ಬಿಜೆಪಿ ರಾಜ್ಯಾಧ್ಯಕ್ಷರಾಗಿರಬಹುದು.. ಆದ್ರೆ ನಾವು ಇನ್ನೂ ಅವರನ್ನು ರಾಜ್ಯಾಧ್ಯಕ್ಷರಾಗಿ ಒಪ್ಪಿಕೊಂಡೇ ಇಲ್ಲ.. ಮುಂದೆ ಒಪ್ಪುವುದೂ ಇಲ್ಲ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.. ಗೋಕಾಕ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ನಮಗೆ ಹೈಕಮಾಂಡ್ ಮುಖ್ಯವಾಗುತ್ತೆ ಅಷ್ಟೇ.. ನಾವು ಹೈಕಮಾಂಡ್ ಹೇಳಿದಂತೆ ಕೇಳುತ್ತೇವೆಯೋ ಹೊರತು ರಾಜ್ಯ ನಾಯಕರ ಅಪ್ಪನೆಯಂತೆ ಅಲ್ಲ ಎಂದು ಹೇಳಿದ್ದಾರೆ..
ಇದನ್ನೂ ಓದಿ; ಹೈದರಾಬಾದ್ ಬಳಿ ಭೀಕರ ಅಪಘಾತ!; ಭಯಾನಕ ವಿಡಿಯೋ ಸೆರೆ
ಮೈಸೂರಿಗೆ ಬಿಜೆಪಿ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಆಪದಯಾತ್ರೆ ಮಾಡುತ್ತಿರುವುದಕ್ಕೆ ನಮ್ಮ ಸ್ವಾಗತಿದೆ.. ಆದ್ರೆ ಅದಕ್ಕಿಂತ ಮುಖ್ಯವಾಗಿ ವಾಲ್ಮೀಕಿ ಹಗರಣ ದೊಡ್ಡದಿದೆ.. ಹೀಗಾಗಿ ನಾವು ಈ ಹಗರಣದ ವಿರುದ್ಧ ಕೂಡಲಸಂಗಮದಿಂದ ಬಳ್ಳಾರಿಗೆ ಪಾದಯಾತ್ರೆ ಮಾಡಬೇಕು ಎಂದುಕೊಂಡಿದ್ದೇವೆ.. ಅದಕ್ಕೆ ಅವಕಾಶ ನೀಡಲು ಹೈಕಮಾಂಡ್ ಅವರನ್ನು ಮತ್ತೊಮ್ಮೆ ಕೇಳುತ್ತೇವೆ.. ಈಗಾಗಲೇ ಒಮ್ಮೆ ಮನವಿ ಮಾಡಿದ್ದೆವು.. ನಾನು, ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಕೆಲ ಶಾಸಕರು ಪಾದಯಾತ್ರೆ ಮಾಡಲು ತೀರ್ಮಾನ ಮಾಡಿದ್ದೇವೆ.. ಹೈಕಮಾಂಡ್‌ನವರು ಸ್ವಲ್ಪ ತಡೆಯಿರಿ ಎಂದು ಹೇಳಿದ್ದಾರೆ.
ಇದನ್ನೂ ಓದಿ; ಬ್ಯಾಡರಹಳ್ಳಿಯ ಮಾನಸ ಆತ್ಮಹತ್ಯೆಗೆ ಕಾರಣ ಏನು ಗೊತ್ತಾ..?
ಇಡೀ ಪಕ್ಷದ ನಾಯಕರು ಈ ಪಾದಯಾತ್ರೆಯಲ್ಲಿ ಪಾಲ್ಗೊಂಡರೆ ಒಳ್ಳೆಯದಾಗುತ್ತದೆ.. ಇಲ್ಲದೇ ಹೋದರೆ ನಾವೇ ಪಾದಯಾತ್ರೆ ಮಾಡಬೇಕು ಎಂದುಕೊಂಡಿದ್ದೇವೆ. ಆದ್ರೆ ದಿನಾಂಕ ನಿಗದಿಯಾಗಿಲ್ಲ ಎಂದೂ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.. ಇದೇ ವೇಳೆ ಡಿ.ಕೆ.ಶಿವಕುಮಾರ್ ಅವರನ್ನು ಸಿಡಿ ಶಿವು ಎಂದು ರಮೇಶ್ ಜಾರಕಿಹೊಳಿ ಕರೆದಿದ್ದಾರೆ..