ಟಿಪ್ಪರ್ ಲಾರಿ ಡಿಕ್ಕಿ; ಗರ್ಭಿಣಿ ಹೊಟ್ಟೆಯಿಂದ ಹೊರಬಂದ ಮಗು!
ನೆಲಮಂಗಲ; ಬೈಕ್‌ಗೆ ಟಿಪ್ಪರ್ ಲಾರಿ ಡಿಕ್ಕಿಯಾಗಿ ಗರ್ಭಿಣಿ ಸಾವನ್ನಪ್ಪಿದ್ದು, ಆಕೆಯ ಹೊಟ್ಟೆಯಲ್ಲಿದ್ದ ಮಗು ಹೊರಬಂದು ಅದೂ ಕೂಡಾ ವಿಲವಿಲ ಒದ್ದಾಡಿ ಸಾವನ್ನಪ್ಪಿದೆ.. ನೆಲಮಂಗಲ ತಾಲೂಕಿನ ಎಡೇಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಈ ದಾರುಣ ಘಟನೆ ನಡೆದಿದೆ..
ಇದನ್ನೂ ಓದಿ; ಪೋಸ್ಟಾಫೀಸ್ ಆರ್‌ಡಿ; ತಿಂಗಳಿಗೆ 5 ಸಾವಿರ ಹೂಡಿಕೆ, ಕೈಗೆ ಬರೋದು 8 ಲಕ್ಷ ರೂಪಾಯಿ!
ಎಡೇಹಳ್ಳಿಯ ಸಿಂಚನಾ ಎಂಬ 30 ವರ್ಷ ಮಹಿಳೆಯೇ ಸಾವನ್ನಪ್ಪಿದಾಕೆ.. ಸಿಂಚನಾ ಎಂಟು ತಿಂಗಳ ಗರ್ಭಿಣಿಯಾಗಿದ್ದು, ದಂಪತಿ ಶಿವಗಂಗೆಯ ಗಣಪತಿ ದೇವಸ್ಥಾನಕ್ಕೆ ಪೂಜೆ ತೆರಳಿದ್ದರು.. ಪೂಜೆ ಮಾಡಿಸಿಕೊಂಡು ವಾಪಸ್ಸಾಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ.. ಆಗಸ್ಟ್ 17ಕ್ಕೆ 8 ತಿಂಗಳು ಮುಗಿದು 9 ತಿಂಗಳಿಗೆ ಕಾಲಿಡಬೇಕಿತ್ತು.. ಹೀಗಾಗಿ ಹೆರಿಗೆ ಸುಸೂತ್ರವಾಗಿ ಆಗಲಿ ಎಂದು ದಂಪತಿ ದೇವಸ್ಥಾನಕ್ಕೆ ತೆರಳಿದ್ದರು.. ಆದ್ರೆ ದಾರಿಯಲ್ಲಿ ಯಮನಂತೆ ಬಂದ ಟಿಪ್ಪರ್ ಡಿಕ್ಕಿ ಹೊಡೆದಿದೆ..
ಪೂಜೆ ಮುಗಿಸಿಕೊಂಡು ಸ್ವಗ್ರಾಮ ತೋಟನಹಳ್ಳಿಗೆ ಹೋಗುವಾಗ ವೇಗವಾಗಿ ಬಂದ ಟಿಪ್ಪರ್ ಲಾರಿ ಡಿಕ್ಕಿ ಹೊಡೆದಿದ್ದರಿಂದ ಈ ಅನಾಹುತ ನಡೆದಿದೆ.. ಡಿಕ್ಕಿಯ ರಭಸಕ್ಕೆ ಸಿಂಚನಾ ಹೊಟ್ಟೆಯಿಂದ ಮಗು ಕೂಡಾ ಹೊರಬಂದಿದೆ.. ಅದು ರಸ್ತೆಯಲ್ಲೇ ಒದ್ದಾಡಿ ಒದ್ದಾಡಿ ಸಾವನ್ನಪ್ಪಿದೆ.. ಪತಿ ಮಂಜುನಾಥ್ ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದು, ಅವರ ಗೋಳಾಟ ಕೇಳದಂತಾಗಿದೆ..