CrimeNational

ಕಾರಿನಲ್ಲೇ ಪ್ರಣಯದಾಟ..!; ಅರೆಬೆತ್ತಲೆಯಾಗಿ ಸಿಕ್ಕಿಬಿದ್ದ ಇಬ್ಬರು ಯುವಕರು, ಯುವತಿ!

ಕಾನ್ಪುರ; ಆ ಕಾರನ್ನು ಒಬ್ಬ ಓಡಿಸುತ್ತಿದ್ದ.. ಮತ್ತೊಬ್ಬ ಹಿಂದಿನ ಸೀಟಿನಲ್ಲಿ ಹುಡುಗಿಯೊಂದಿಗೆ ಚಕ್ಕಂದ ಆಡುತ್ತಿದ್ದ.. ಒಬ್ಬರಾದ ಮೇಲೆ ಒಬ್ಬರು ಆ ಹುಡುಗಿಯನ್ನು ಅನುಭವಿಸುತ್ತಿದ್ದರು.. ಆದ್ರೆ ಹೊರಗಿನ ಜನಕ್ಕೆ ಇದ್ಯಾವುದೂ ಗೊತ್ತಿರಲಿಲ್ಲ.. ಕಾರು ಚಲಾಯಿಸಿಕೊಂಡೇ ಈ ಕೆಟ್ಟ ಕೆಲಸ ಮಾಡುವಾಗ ಕಾರು ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ.. ಇದನ್ನು ನೋಡಿದ ಜನ ಸಹಾಯಕ್ಕೆ ಧಾವಿಸಿದ್ದಾರೆ.. ಆಗ ಕಣ್ಣಿಗೆ ರಾಚಿದ ದೃಶ್ಯ ನೋಡಿ ಜನ ಹೌಹಾರಿದ್ದಾರೆ.. ಕಾರಿನಲ್ಲಿದ್ದವರ ವಿರುದ್ಧ ರೊಚ್ಚಿಗೆದ್ದಿದ್ದಾರೆ..

ಇದನ್ನೂ ಓದಿ; ಅಮೆರಿಕ ಮಹಿಳೆಯನ್ನು ಕಾಡಿನಲ್ಲಿ ಕಟ್ಟಿ ಹಾಕಿದ್ದ ದುರುಳರು!

ನಾಲ್ಕು ಮಕ್ಕಳು ಕಾರಿನಲ್ಲಿದ್ದಾಗಲೇ ಮಹಿಳೆಯೊಬ್ಬರು ಇಬ್ಬರು ಯುವಕರ ಜೊತೆ ಅಸಹ್ಯ ರೀತಿಯಲ್ಲಿ ಚಕ್ಕಂದವಾಡಿದ್ದಾಳೆ.. ಅಪಘಾತವಾದಾಗ ಮಹಿಳೆ ಹಾಗೂ ನಾಲ್ವರು ಮಕ್ಕಳಿಗೆ ಗಂಭೀರ ಗಾಯಗಳಾಗಿವೆ.. ಇಬ್ಬರು ಯುವಕರು ಹಾಗೂ ಮಹಿಳೆ ಅರೆಬೆತ್ತಲೆಯಾಗಿ ಜನಕ್ಕೆ ಕಾಣಿಸಿದ್ದಾರೆ.. ಇದನ್ನು ನೋಡಿ ಜನಕ್ಕೆ ಅಸಹ್ಯ ಎನಿಸಿದರೂ, ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.. ಕಾನ್ಪುರದಲ್ಲಿ ಈ ಘಟನೆ ನಡೆದಿದೆ.

ಇದನ್ನೂ ಓದಿ; ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರರನ್ನು ಎಂದಿಗೂ ಒಪ್ಪಲ್ಲ; ಮಾಜಿ ಸಚಿವ ರಮೇಶ್‌ ಜಾರಕಿಹೊಳಿ

ಜಾಜ್‌ಮೌ ಪೊಲೀಸ್‌ ಠಾಣಾ ವ್ಯಾಪ್ತಿಯ ಜೆಕೆ ಚೌರಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ.. ನಾಲ್ಕು ಮಕ್ಕಳ ಎದುರೇ ಮಹಿಳೆ ಇಬ್ಬರು ಯುವಕರ ಜೊತೆ ಲೈಂಗಿಕ ಕ್ರಿಯೆ ನಡೆಸಿದ್ದು, ಇದೇ ವೇಳೆ ಕಾರು ಅಪಘಾತಕ್ಕೀಡಾಗಿದೆ.. ಕಾರಿನಲ್ಲಿ ಮದ್ಯದ ಬಾಟಲಿಗಳು ಸಿಕ್ಕಿದ್ದು, ಕಂಠಪೂರ್ತಿ ಕುಡಿದು ಈ ಕೃತ್ಯ ಎಸಗಲಾಗಿದೆ ಎಂದು ತಿಳಿದುಬಂದಿದೆ.. ಇದರ ವಿಡಿಯೋ ಈಗ ಎಲ್ಲೆಡೆ ವೈರಲ್‌ ಆಗುತ್ತಿದೆ..

Share Post