CrimeNational

ಹೈದರಾಬಾದ್ ಬಳಿ ಭೀಕರ ಅಪಘಾತ!; ಭಯಾನಕ ವಿಡಿಯೋ ಸೆರೆ

ಹೈದರಾಬಾದ್​; ತೆಲಂಗಾಣದ ಹೈದರಾಬಾದ್‌ ಬಳಿ ಮೇಡ್ಚಲ್‌-ಸಮೀರ್‌ ಪೇಟೆಯ ರಾಜೀವ್‌ ರಸ್ತೆಯಲ್ಲಿ ಭೀಕರ ಅಪಘಾಯ ಸಂಭವಿಸಿದ್ದು, ಇಬ್ಬರು ಸಾಫ್ಟ್‌ವೇರ್‌ ಎಂಜಿನಿಯರ್‌ಗಳು ಭೀಕರವಾಗಿ ಸಾವನ್ನಪ್ಪಿದ್ದಾರೆ.. ಕಾರೊಂದರ ಡ್ಯಾಶ್‌ ಕ್ಯಾಮರಾದಲ್ಲಿ ಅಪಘಾತದ ಭೀಕರ ದೃಶ್ಯಾವಳಿ ರೆಕಾರ್ಡ್‌ ಆಗಿದ್ದು, ಎಲ್ಲೆಡೆ ವೈರಲ್‌ ಆಗುತ್ತಿದೆ..

ಇದನ್ನೂ ಓದಿ; ಬ್ಯಾಡರಹಳ್ಳಿಯ ಮಾನಸ ಆತ್ಮಹತ್ಯೆಗೆ ಕಾರಣ ಏನು ಗೊತ್ತಾ..?

ಸಾಫ್ಟ್‌ವೇರ್‌ ಎಂಜಿನಿಯರ್‌ಗಳು ಪ್ರಯಾಣಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ.. ಅನಂತರ ಅದು ಡಿವೈಡರ್‌ ದಾಟಿ ಎದುರಿಗೆ ಬರುತ್ತಿದ್ದ ಸರ್ಕಾರಿ ಬಸ್‌ಗೆ ಡಿಕ್ಕಿ ಹೊಡೆದಿದೆ.. ಇದರಿಂದಾಗಿ ಕಾರು ಪೀಸ್‌ ಪೀಸ್‌ ಆಗಿದ್ದು, ಅದರಲ್ಲಿ ಪ್ರಯಾಣಿಸುತ್ತಿದ್ದವರು ಕೂಡಾ ಭೀಕರವಾಗಿ ಸಾವನ್ನಪ್ಪಿದ್ದಾರೆ..
ಸಾಫ್ಟ್​ವೇರ್​ ಉದ್ಯೋಗಿಗಳಾದ ಮೋಹನ್ (25) ಮತ್ತು ದೀಪಿಕಾ (25) ಭೀಕರ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.. ಕಾರಿನಲ್ಲಿ ಇವರು ಅತಿವೇಗವಾಗಿ ಪ್ರಯಾಣ ಮಾಡುತ್ತಿದ್ದರು.. ಈ ಹಿನ್ನೆಲೆಯಲ್ಲಿ ಕಾರು ನಿಯಂತ್ರಣ ತಪ್ಪಿದೆ ಎಂದು ತಿಳಿದುಬಂದಿದೆ.. ಬಸ್​ನ ಹಿಂದೆ ಇನ್ನೊಂದು ಬಸ್​ ಬರುತ್ತಿತ್ತು, ಆದ್ರೆ ಅದೃಷ್ಟವಶಾತ್‌ ದೊಡ್ಡ ಅನಾಹುತ ತಪ್ಪಿದೆ..

ಇದನ್ನೂ ಓದಿ; ನಾಳೆ ದೆಹಲಿಗೆ ಹೊರಡಲಿರುವ ಸಿಎಂ, ಡಿಸಿಎಂ; ಸಂಪುಟಕ್ಕೆ ಸರ್ಜರಿ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಸಾಧ್ಯತೆ!

ರಂಗಾರೆಡ್ಡಿ ಜಿಲ್ಲೆಯಲ್ಲಿನ ಗಚ್ಚಿಬೌಲಿಯ ಸಾಫ್ಟ್‌ವೇರ್ ಕಂಪನಿಯಲ್ಲಿ ಇಬ್ಬರೂ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.. ಅಪಘಾತದಲ್ಲಿ ಬಸ್‌ಗೂ ಕೊಂಚ ಹಾನಿಯಾಗಿದ್ದು, ಕೆಲ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ..

ಇದನ್ನೂ ಓದಿ; ನಿಮ್ಮ ಗ್ರಹಿಕೆಗೊಂದು ಚಾಲೆಂಜ್‌; ಈ ಚಿತ್ರದಲ್ಲಿ ಎರಡು ಕುದುರೆ ಇದೆ, ಗುರುತಿಸಿ..

Share Post