Dry Fruits; ಖಾಲಿ ಹೊಟ್ಟೆಯಲ್ಲಿ ಈ ಒಣಹಣ್ಣುಗಳನ್ನು ತಿನ್ನಲೇಬಾರದು..!
ಆರೋಗ್ಯವಾಗಿರಬೇಕಾದರೆ ಒಣಹಣ್ಣುಗಳನ್ನು ತಿನ್ನಬೇಕೆಂದು ಎಲ್ಲರೂ ಹೇಳುತ್ತಾರೆ. ಇದಕ್ಕೆ ಕಾರಣ ಒಣ ಹಣ್ಣುಗಳಲ್ಲಿ ಕೊಬ್ಬಿನಾಮ್ಲಗಳು ಮತ್ತು ಆಂಟಿಆಕ್ಸಿಡೆಂಟ್‌ಗಳಿರುತ್ತದೆ. ಇಷ್ಟೇ ಅಲ್ಲದೆ ಅನೇಕ ಪೋಷಕಾಂಶಗಳಿರುತ್ತವೆ. ಹೀಗಾಗಿ ಮಧುಮೇಹ ಸಮಸ್ಯೆ ಹಾಗೂ ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿರುವವರು ಡ್ರೈ ಫ್ರೂಟ್ಸ್ (Dryfruits) ತಿನ್ನುವುದರಿಂದ ಪರಿಹಾರ ಪಡೆಯಬಹುದು. Dryfruitsನಲ್ಲಿರುವ ಫೈಬರ್ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಡ್ರೈ ಫ್ರೂಟ್ಸ್ ತಿನ್ನುವುದರಿಂದ ಟೈಪ್ 2 ಮಧುಮೇಹವನ್ನು ಸಾಕಷ್ಟು ನಿಯಂತ್ರಣದಲ್ಲಿಡಬಹುದು. ಪ್ರತಿನಿತ್ಯ ಒಂದು ಹಿಡಿ ಡ್ರೈ ಫ್ರೂಟ್ಸ್ ಸೇವಿಸಿದರೆ ಆಯಾಸ ಹಾಗೂ ಆಲಸ್ಯ ಕಾಡುವುದಿಲ್ಲ. ದೇಹಕ್ಕೆ ಬೇಕಾದ ಎಲ್ಲಾ ರೀತಿಯ ಪೋಷಕಾಂಶಗಳೂ ಅವುಗಳಿಂದ ಸಿಗುತ್ತವೆ. ಆದರೆ, ತುಂಬಾ ಜನ ಖಾಲಿ ಹೊಟ್ಟೆಯಲ್ಲಿ ಒಣ ಹಣ್ಣುಗಳನ್ನು ತಿನ್ನುತ್ತಾರೆ. ಇದರಲ್ಲಿ ಕೆಲವು ಒಣ ಹಣ್ಣುಗಳನ್ನು ಬೆಳಗ್ಗೆಯೇ ಖಾಲಿ ಹೊಟ್ಟೆಯಲ್ಲಿ ಸೇವಿಸಬಾರದು ಎನ್ನುತ್ತಾರೆ ತಜ್ಞರು. ಇವು ನಮ್ಮ ಜೀರ್ಣಕ್ರಿಯೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟದ ಪರಿಣಾಮ ಬೀರುತ್ತವೆ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನಬಾರದ Dryfruits ಇಲ್ಲಿವೆ.
ಒಣದ್ರಾಕ್ಷಿ
ಒಣದ್ರಾಕ್ಷಿ; ಒಣದ್ರಾಕ್ಷಿಯಲ್ಲಿ ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೀಸಿಯಮ್, ಪೊಟ್ಯಾಸಿಯಮ್ ಮತ್ತು ವಿಟಮಿನ್ ಸಿ ಯಂತಹ ಪೋಷಕಾಂಶಗಳು ಸಮೃದ್ಧವಾಗಿರುತ್ತವೆ. ಇವುಗಳಲ್ಲಿ ನೈಸರ್ಗಿಕ ಸಕ್ಕರೆಯೂ ತುಂಬಾನೇ ಅಧಿಕವಾಗಿರುತ್ತದೆ. ಆದರೆ, ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಣದ್ರಾಕ್ಷಿ ಸೇವನೆ ಮಾಡಿದರೆ ರಕ್ತದಲ್ಲಿನ ಸಕ್ಕರೆ ಪ್ರಮಾಣ ಏಕಾಏಕಿ ಹೆಚ್ಚಾಗುವ ಸಾಧ್ಯತೆ ಇದೆ. ಬೆಳಗಿನ ಉಪಾಹಾರದ ನಂತರ ನೀವು ಒಣದ್ರಾಕ್ಷಿ ತಿನ್ನಲು ಬಯಸಿದರೆ, ಅದನ್ನು ಮೊಸರು ಮತ್ತು ಇತರ ಬೀಜಗಳೊಂದಿಗೆ ಸೇರಿಸಿ ತೆಗೆದುಕೊಳ್ಳಿ.
ಒಣ ಅಂಜೂರ
ಒಣ ಅಂಜೂರ; ಅಂಜೂರದಲ್ಲಿ ನಾರಿನಂಶ ಅಧಿಕವಾಗಿದೆ. ಇದರಲ್ಲಿ ಕಬ್ಬಿಣ, ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಪ್ರೋಟೀನ್ ಮತ್ತು ವಿಟಮಿನ್ ಗಳು ಹೇರಳವಾಗಿವೆ. ಆದರೆ, ಇವುಗಳಲ್ಲಿ ಕೂಡಾ ನೈಸರ್ಗಿಕ ಸಕ್ಕರೆಯ ಅಂಶ ಹೆಚ್ಚಾಗಿರುತ್ತದೆ. ಹೀಗಾಗಿ ಇದನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ, ಅಸ್ವಸ್ಥತೆ, ವಾಯು ಮುಂತಾದ ಸಮಸ್ಯೆಗಳಿಗೆ ಕಾರಣವಾಗುತ್ತದೆ. ನೀವು ಧಾನ್ಯಗಳ ಜೊತೆಗೆ ಒಣ ಅಂಜೂರದ ಹಣ್ಣುಗಳನ್ನು ಸೇವಿಸಿರಿ. ಇದು ಪೋಷಕಾಂಶಗಳ ಸಮತೋಲನವನ್ನು ಕಾಪಾಡುತ್ತದೆ. ಜೀರ್ಣಕಾರಿ ಸಮಸ್ಯೆಗಳನ್ನು ತಡೆಯುತ್ತದೆ.
ಖರ್ಜೂರ
ಖರ್ಜೂರ; ಖರ್ಜೂರದಲ್ಲಿ ಸೆಲೆನಿಯಮ್, ಕ್ಯಾಲ್ಸಿಯಂ, ಪೊಟ್ಯಾಸಿಯಮ್, ರಂಜಕ, ತಾಮ್ರ ಮತ್ತು ಮೆಗ್ನೀಸಿಯಮ್ ಸೇರಿದಂತೆ 15 ಖನಿಜಗಳಿವೆ. ಇದಲ್ಲದೆ, ಇದು ಪಾಲ್ಮಿಟೋಲಿಕ್, ಒಲೀಕ್, ಲಿನೋಲಿಕ್, ಲಿನೋಲೆನಿಕ್ ಆಮ್ಲದಂತಹ ಅಪರ್ಯಾಪ್ತ ಕೊಬ್ಬಿನಾಮ್ಲಗಳನ್ನು ಹೊಂದಿರುತ್ತದೆ. ನಮ್ಮ ಆಹಾರದಲ್ಲಿ ಖರ್ಜೂರವನ್ನು ಸೇರಿಸುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಆದರೆ ಖರ್ಜೂರವನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ, ಅದರಲ್ಲಿರುವ ನೈಸರ್ಗಿಕ ಸಕ್ಕರೆ ಅಂಶ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ.
ಏಪ್ರಿಕಾಟ್
ಏಪ್ರಿಕಾಟ್; ಒಣಗಿದ ಏಪ್ರಿಕಾಟ್‌ಗಳಲ್ಲಿ ಪೊಟ್ಯಾಸಿಯಮ್, ಕಬ್ಬಿಣ, ಬೀಟಾ ಕ್ಯಾರೋಟಿನ್, ಫೈಬರ್ ಮತ್ತು ವಿಟಮಿನ್ ಸಿ ನಂತಹ ಪೋಷಕಾಂಶಗಳಲ್ಲಿ ಸಮೃದ್ಧವಾಗಿವೆ. ಏಪ್ರಿಕಾಟ್ ದೇಹದಲ್ಲಿ ದ್ರವದ ಪ್ರಮಾಣ ಕಡಿಮೆಯಾಗದಂತೆ ನೋಡಿಕೊಳ್ಳಲು ಸಹಾಯ ಮಾಡುತ್ತದೆ. ಇವುಗಳಲ್ಲಿ ಕೂಡಾ ನೈಸರ್ಗಿಕ ಸಕ್ಕರೆಗಳು ಅಧಿಕವಾಗಿವೆ. ಅವುಗಳನ್ನು ಖಾಲಿ ಹೊಟ್ಟೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ, ಜೀರ್ಣಕ್ರಿಯೆಯು ತೊಂದರೆಗೊಳಗಾಗುತ್ತದೆ.
ಪ್ರೂನೆ
ದ್ರಾಕ್ಷಿ (ಪ್ರೂನೆ); ಫೈಬರ್, ವಿಟಮಿನ್ ಕೆ, ವಿಟಮಿನ್ ಎ, ಪೊಟ್ಯಾಸಿಯಮ್ ಮತ್ತು ಮ್ಯಾಂಗನೀಸ್‌ನಂತಹ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ದ್ರಾಕ್ಷಿಯ ಹೆಚ್ಚಿನ ಫೈಬರ್ ಅಂಶವು ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ ಮತ್ತು ಮಲಬದ್ಧತೆಯನ್ನು ತಡೆಯುತ್ತದೆ. ಆದರೆ, ಖಾಲಿ ಹೊಟ್ಟೆಯಲ್ಲಿ ಇವುಗಳನ್ನು ಹೆಚ್ಚು ತಿನ್ನುವುದು ಒಳ್ಳೆಯದಲ್ಲ ಎನ್ನುತ್ತಾರೆ ತಜ್ಞರು. ಇವುಗಳನ್ನು ಇತರ ಆಹಾರಗಳ ಜೊತೆ ಸೇರಿಸಿ ಸೇವಿಸುವುದು ಉತ್ತಮ ಎನ್ನುತ್ತಾರೆ ತಜ್ಞರು.
ಇದನ್ನೂ ಓದಿ; Breathing; ನೀವು ಸರಿಯಾಗಿ ಉಸಿರಾಡುತ್ತಿದ್ದೀರಾ..? ಮೂಗಿನಿಂದಲೇ ಯಾಕೆ ಉಸಿರಾಡಬೇಕು..?