Breathing; ನೀವು ಸರಿಯಾಗಿ ಉಸಿರಾಡುತ್ತಿದ್ದೀರಾ..? ಮೂಗಿನಿಂದಲೇ ಯಾಕೆ ಉಸಿರಾಡಬೇಕು..?
ಬೆಂಗಳೂರು; ಉಸಿರಾಡುವುದನ್ನು ನಮಗೆ ಯಾರೂ ಕಲಿಸಬೇಕಾದ ಅವಶ್ಯತೆ ಇಲ್ಲ. ಹುಟ್ಟುತ್ತಲೇ ನಾವು ಉಸಿರಾಡೋದನ್ನು ಕಲಿತುಕೊಂಡು ಬಂದಿರುತ್ತೇವೆ. ತಾಯಿಯ ಹೊಟ್ಟೆಯಲ್ಲಿರುವಾಗಲೇ ನಾವು ಉಸಿರಾಟ ಕಲಿತಿರುತ್ತೇವೆ. ಉಸಿರಾಟ ನಡೆಸಿದೇ ಇದ್ದರೆ ನಮ್ಮ ಸಾವು ಗ್ಯಾರೆಂಟಿ ಅನ್ನೋದು ಎಲ್ಲರಿಗೂ ಗೊತ್ತಿದೆ. ಆದ್ರೆ ನಾವು ಸರಿಯಾದ ರೀತಿಯಲ್ಲಿ ಉಸಿರಾಟ ನಡೆಸುತ್ತಿದ್ದೇವೆಯಾ..? ಅಷ್ಟಕ್ಕೂ ಮೂಗಿನಿಂದಲೇ ಯಾಕೆ ನಾವು ಉಸಿರಾಡಬೇಕು..? ಬಾಯಿಯಿಂದಲೂ ಉಸಿರಾಡಲು ಸಾಧ್ಯ. ಹಾಗಾದರೆ ಬಾಯಿಂದ ಉಸಿರಾಟ ನಡೆಸಿದರೆ ಏನಾಗುತ್ತದೆ..? ಈ ಪ್ರಶ್ನೆ ಯಾವತ್ತಾದರೂ ನಿಮ್ಮಲ್ಲಿ ಮೂಡಿದೆಯಾ..? ಹಾಗಾದ್ರೆ ಅದಕ್ಕೆ ಉತ್ತರ ಈ ಸ್ಟೋರಿಯಲ್ಲಿ ಸಿಗಲಿದೆ.
ಒಂದು ದಿನಕ್ಕೆ 12 ಸಾವಿರ ಲೀಟರ್ ಗಾಳಿ ಉಸಿರಾಡುತ್ತೇವೆ!
ಒಬ್ಬ ಮನುಷ್ಯ ದಿನಕ್ಕೆ 10 ಸಾವಿರದಿಂದ 12 ಸಾವಿರ ಲೀಟರ್ ಗಾಳಿ ಉಸಿರಾಟ ಮಾಡುತ್ತೇವೆ. ನಾವು ಉಸಿರಾಡುವ ಗಾಳಿಯಲ್ಲಿ ಧೂಳು ಇರುತ್ತದೆ, ಫಂಗಸ್ ಇರುತ್ತದೆ, ವೈರಸ್ ಇರುತ್ತದೆ, ಇನ್ನೂ ಏನೇನೋ ಇರುತ್ತವೆ. ಇವೆಲ್ಲವೂ ನಮ್ಮ ಶ್ವಾಸನಾಳಕ್ಕೆ ಸೇರುತ್ತವೆ. ಶ್ವಾಸಕೋಶದವರೆಗು ಹೋಗಿ ಸೇರುತ್ತವೆ. ಹಾಗಂತ ನಾವು ಆತಂಕಪಡುವ ಅವಶ್ಯಕತೆ ಏನೂ ಇಲ್ಲ. ಯಾಕಂದ್ರೆ ಹೀಗೆ ನಮ್ಮ ದೇಹ ಸೇರುವ ಫಂಗಸ್, ಧೂಳು, ವೈರಸ್ ಅನ್ನು ಹೇಗೆ ಶುದ್ಧ ಮಾಡಬೇಕು ಅನ್ನೋದು ನಮ್ಮ ಶ್ವಾಸ ವ್ಯವಸ್ಥೆಗೆ ಚೆನ್ನಾಗಿ ಗೊತ್ತಿದೆ. ವೈದ್ಯರು ಹೇಳೋ ಪ್ರಕಾರ ಶ್ವಾಸ ವ್ಯವಸ್ಥೆಯನ್ನು ದಾಟಿ ಮುಂದಕ್ಕೆ ಹೆಚ್ಚಿನ ಸೂಕ್ಷ್ಮಕಣಗಳು ಹೋಗೋದಿಲ್ಲ. ಮೂರು ಮೈಕ್ರಾನ್‌ಗಿಂತ ದೊಡ್ಡದಿರುವ ಅಣುಗಳು ಶ್ವಾಸಕೋಶದವರೆಗೋ ಹೋಗೋದಿಲ್ಲ. ಮೂರು ಮೈಕ್ರಾನ್‌ಗಿಂತ ಕಡಿಮೆ ಇರುವ ಅಣುಗಳು ಮಾತ್ರ ಶ್ವಾಸಕೋಶ ಪ್ರವೇಶಿಸುತ್ತವೆ. ಅವುಗಳನ್ನು ಎದುರಿಸುವ ಶಕ್ತಿ ನಮ್ಮ ಶ್ವಾಸ ವ್ಯವಸ್ಥೆಗೆ ಇದೆ.
ಸೂಕ್ಷ್ಮಾಣುಗಳಿಂದ ದೇಹದ ರಕ್ಷಣೆ ಹೇಗೆ ಆಗುತ್ತೆ..?
ಗಾಳಿಯ ಮೂಲಕ ಹಲವಾರು ಸೂಕ್ಷ್ಮಾಣುಗಳು ನಮ್ಮ ಶ್ವಾಸ ವ್ಯವಸ್ಥೆಗೆ ಸೇರುತ್ತವೆ. ಅವುಗಳನ್ನು ನಮ್ಮ ಶ್ವಾಸ ವ್ಯವಸ್ಥೆ ಹೇಗೆ ಹೊರಕಳುಹಿಸುತ್ತದೆ..? ಈ ಪ್ರಶ್ನೆಗೆ ಉತ್ತರವೇ ʻಸಿಲಿಯಾʼ ಎಂಬ ಸೈನಿಕರು. ಸಿಲಿಯಾ ಎಂಬುದು ಸಣ್ಣ ರೋಮಗಳು. ಇವು ಗುಂಡುಸೂಜಿ ಮೊನಚಿಗಿಂತ ಸಣ್ಣದಾಗಿರುತ್ತವೆ. ನಮ್ಮ ಶ್ವಾಸನಾಳಗಳಲ್ಲಿ ಇವು ಲಕ್ಷಗಟ್ಟಲೆ ಇರುತ್ತವೆ. ಮೂಗಿನಲ್ಲಿ ಕೂಡಾ ಇಂತ ಸಿಲಿಯಾಗಳು ಸಾಕಷ್ಟಿರುತ್ತವೆ. ಇವು ಒಂದೊಂದೂ ಐದರಿಂದ ಏಳು ಮೈಕ್ರಾನ್ ಉದ್ದವಿರುತ್ತವೆ. ಇವು ಒಂದು ಬ್ರಷ್ ರೀತಿಯಲ್ಲಿ ಕೆಲಸ ಮಾಡುತ್ತವೆ. 0.5 ಮಿಲಿ ಮೀಟರ್‌ಗಿಂತ ಕಡಿಮೆ ಇರುವ ಸೂಕ್ಷ್ಮಜೀವಿಗಳನ್ನು ಒಳಗೆ ಹೋಗದಂತೆ ತಡೆಯುವ ಕೆಲಸವನ್ನು ಇವು ಮಾಡುತ್ತವೆ. ಈ ಸಿಲಿಯಾ ಕಾರಣದಿಂದಾಗಿ ಸೂಕ್ಷ್ಮಾಣುಜೀವಿಗಳು ಒಳಗೆ ಹೋಗಲಾಗದೇ ವಾಪಸ್ ಬಂದುಬಿಡುತ್ತವೆ.
ಬಾಯಿಂದ ಯಾಕೆ ಉಸಿರಾಡಬಾರದು..?
ಸಿಲಿಯಾ ಇರುವುದರಿಂದ ಮೂಗಿನಿಂದ ಉಸಿರಾಡಿದರೆ ಸೂಕ್ಷ್ಮಾಣು ಜೀವಿಗಳು ದೇಹದೊಳಗೆ ಹೋಗದಂತೆ ತಡೆಯುತ್ತವೆ. ಮಧ್ಯದಿಂದ ಹೊರಗೆ ಕಳುಹಿಸುತ್ತವೆ. ಆದ್ರೆ ಬಾಯಿಯಿಂದ ಉಸಿರಾಡಿದೆ, ಇದು ಸಾಧ್ಯವಾಗೋದಿಲ್ಲ. ಯಾಕಂದ್ರೆ ಬಾಯಿಯಿಂದ ಉಸಿರಾಡಬಹುದಾದರೂ ಅದು ಇರೋದು ಆಹಾರ ಸೇವಿಸುವುದಕ್ಕಾಗಿ. ಮೂಗಿನಿಂದ ಆಹಾರ ಸೇವಿಸಿದರೆ ಏನು ತೊಂದರೆಯಾಗುತ್ತೆ ಅನ್ನೋದು ನಿಮಗೆ ಗೊತ್ತಿದೆ. ಅದೇ ರೀತಿ ಬಾಯಿಂದ ಉಸಿರಾಡಿದರೂ ನಮಗೆ ತೊಂದರೆ ಇದೆ. ಯಾಕಂದ್ರೆ ಬಾಯಿಯಲ್ಲಿ ಸಿಲಿಯಾನಂತಹ ಸಣ್ಣ ರೋಮಗಳು ಇಲ್ಲ. ಹೀಗಾಗಿ, ಬಾಯಿಯಿಂದ ಉಸಿರಾಡಿದರೆ ಸೂಕ್ಷ್ಮಾಣು ಜೀವಿಗಳೆಲ್ಲಾ ದೇಹ ಸೇರುತ್ತವೆ. ಇದರಿಂದ ನಮಗೆ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತವೆ.