DistrictsHealth

ಕಂಬದಲ್ಲಿದ್ದಾಗಲೇ ಪ್ರವಹಿಸಿದ ವಿದ್ಯುತ್‌!; ವಿಲವಿಲ ಒದ್ದಾಡಿದ ಲೈನ್‌ಮ್ಯಾನ್‌!

ಬಾಗಲಕೋಟೆ; ಲೈನ್‌ಮ್ಯಾನ್‌ ಒಬ್ಬರು ವಿದ್ಯುತ್‌ ಲೈನ್‌ ಸರಿ ಮಾಡಲು ಕಂಬ ಏರಿದ್ದರು.. ಇದೇ ವೇಳೆ ವಿದ್ಯುತ್‌ ಪ್ರವಹಿಸಿದ್ದು, ಕಂಬದಲ್ಲೇ ಲೈನ್‌ಮ್ಯಾನ್‌ ವಿಲವಿಲ ಒದ್ದಾಡಿದ್ದಾನೆ.. ಕೂಡಲೇ ಜನರು ಹೆಸ್ಕಾಂ ಕಚೇರಿಗೆ ಫೋನ್‌ ಮಾಡಿ ತಿಳಿಸಿದ್ದು, ಪರವಾಡ ಸದೃಶ ರೀತಿಯಲ್ಲಿ ಲೈನ್‌ಮ್ಯಾನ್‌ ಪಾರಾಗಿ ಬಂದಿದ್ದಾರೆ.. ಬಾಗಲಕೋಟೆ ಜಿಲ್ಲೆ ರಬಕವಿ-ಬನಹಟ್ಟಿ ತಾಲ್ಲೂಕಿನ ಮದಲಮಟ್ಟಿ ಗ್ರಾಮದಲ್ಲಿ ಈ ಘಟನೆ ನಡೆದಿದೆ..

ಇದನ್ನೂ ಓದಿ; ಶೂಟಿಂಗ್‌ ವೇಳೆ ಖ್ಯಾತ ತಮಿಳು ನಟ ಸೂರ್ಯ ತಲೆಗೆ ಪೆಟ್ಟು!

ಗ್ರಾಮದಲ್ಲಿ ವಿದ್ಯುತ್‌ ಸಮಸ್ಯೆಯಾಗಿದ್ದು, ಲೈನ್‌ಮ್ಯಾನ್‌ 30 ವರ್ಷದ ಪ್ರವೀಣ್‌ ಹಿರೇಮಠ ಕಂಬ ಹತ್ತಿ ಸರಿ ಮಾಡುತ್ತಿದ್ದರು.. ಈ ವೇಳೆ ವಿದ್ಯುತ್‌ ಪ್ರವಹಿಸಿದೆ.. ಇದರಿಂದ ಪ್ರವೀಣ್‌ ಕಂಬದಲ್ಲೇ ಸಿಲುಕಿ ಒದ್ದಾಡುತ್ತಿದ್ದುದನ್ನು ನೋಡಿದ ಗ್ರಾಮಸ್ಥರು ಕೂಡಲೇ ಹೆಸ್ಕಾಂಗೆ ಕರೆ ಮಾಡಿ ತಿಳಿಸಿದರು.. ಇದರಿಂದ ತಕ್ಷಣವೇ ಕರೆಂಟ್‌ ಸ್ಥಗಿತ ಮಾಡಲಾಯಿತು.. ಅನಂತರ ಗ್ರಾಮಸ್ಥರು ಪ್ರವೀಣ್‌ ಅವರನ್ನು ಕೆಳಗಿಳಿಸಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ..
ಸುರಕ್ಷಿತವಾಗಿ ಕೆಳಗಿಳಿಸಿದ ನಂತರ ಪ್ರವೀಣ್​ ಅವರನ್ನು ಬೆಳಗಾವಿಯ ಕೆಎಲ್ಇ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ; ವರಲಕ್ಷ್ಮೀ ವ್ರತದ ಪೂಜಾ ಸಮಯ ಏನು..?; ವ್ರತದ ವಿಧಾನ ಹೇಗೆ..?

Share Post