HealthNational

ಹಠಾತ್ತಾಗಿ ಕುಸಿದುಬಿದ್ದು ಸಾವನ್ನಪ್ಪಿದ ಹೋಮ್‌ ಗಾರ್ಡ್‌!

ರಾಜಸ್ಥಾನ; ಅದ್ಯಾಕೋ ಇತ್ತೀಚಿನ ದಿನಗಳಲ್ಲಿ ಹಠಾತ್‌ ಸಾವಿನ ಸಂಖ್ಯೆಗಳು ಹೆಚ್ಚಾಗುತ್ತಿವೆ.. ನಿಂತಿದ್ದ ಜಾಗದಲ್ಲೇ ಕುಸಿದು ಬೀಳುವುದು, ಕೆಲಸ ಮಾಡುತ್ತಿರುವಾಗ ಇದ್ದಕ್ಕಿದ್ದಂತೆ ಕೆಳಗೆ ಬಿದ್ದು ಸಾವನ್ನಪ್ಪುವ ಪ್ರಕರಣಗಳು ದಿನವೂ ನಡೆಯುತ್ತಿವೆ.. ಅದೇ ರೀತಿಯಲ್ಲಿ ರಾಜಸ್ಥಾನದಲ್ಲಿ ಹೋಮ್‌ ಗಾರ್ಡ್‌ ಒಬ್ಬರು ಕರ್ತವ್ಯ ನಿರತರಾಗಿದ್ದಾಗಲೇ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ..
ಹೋಮ್‌ ಗಾರ್ಡ್‌ ಕೆಲಸದಲ್ಲಿ ನಿರತರಾಗಿದ್ದರು.. ಈ ವೇಳೆ ಇದ್ದಕ್ಕಿದ್ದಂತೆ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ.. ಇದರ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.. ಅದರ ವಿಡಿಯೋ ಭಯಾನಕವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ರಾಜಸ್ಥಾನದ ಅಜ್ಮೀರ್‌ನಲ್ಲಿ ಈ ದುರ್ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ..
ಪೊಲೀಸ್ ಠಾಣೆ ಬಳಿ ಹೋಮ್ ಗಾರ್ಡ್ ನಿಂತಿದ್ದರು.. ಈ ವೇಳೆ ಇದ್ದಕ್ಕಿದ್ದಂತೆ ಕೆಳಗೆ ಬಿದ್ದು ಒದ್ದಾಡಿದ್ದಾರೆ.. ಇದೇ ವೇಳೆ ಅವರ ಬಾಯಿಂದ ರಕ್ತ ಕೂಡಾ ಬಂದಿದೆ..

Share Post