Lifestyle

ನಿಮ್ಮ ಮಕ್ಕಳು ಬೇಗ ನಿದ್ರೆ ಮಾಡ್ತಿಲ್ವಾ..?ಇಲ್ಲಿದೆ ಕೆಲವು ಟಿಪ್ಸ್

ನಿದ್ರೆ ಮಾನವನ ಆರೋಗ್ಯಕ್ಕೆ ಬಹಳ ಉಪಾಯಕಾರಿ. ದಿನಕ್ಕೆ 6/8ಹಂಟೆಗಳ ಕಾಲ ಮನುಷ್ಯ ನಿದ್ರಿಸಬೇಕಾಗುತ್ತದೆ ಇಲ್ಲದಿದ್ರೆ ಮುಂದಾಗುವ ಅನಾಹುತಗಳಿಗೆ ಎಡೆಮಾಡಿಕೊಟ್ಟಂತಾಗುತ್ತದೆ. ಇನ್ನು ಚಿಕ್ಕಮಕ್ಕಳ ವಿಚಾರದಲ್ಲಿ ಹೆಚ್ಚು ಜಾಗ್ರತೆ ವಹಿಸಬೇಕಾಗುತ್ತದೆ. ಯಾಕಂದ್ರೆ  ಮಕ್ಕಳು ಬೇಗನೆ ನಿದ್ರಿಸಲು ಇಷ್ಟಪಡುವುದಿಲ್ಲ. ಮಧ್ಯ ಮಧ್ಯೆ ಏಳುವುದು, ಮಧ್ಯರಾತ್ರಿ, ಮುಂಜಾನೆ ಎನ್ನದೆ ಪದೇ ಪದೇ ಎಚ್ಚರವಾಗುವುದು ಮಕ್ಕಳ ಆರೋಗ್ಯಕ್ಕೆ ಒಳ್ಳೆಯದಲ್ಲ. ಚಿಕ್ಕ ಮಕ್ಕಳ ಬೆಳವಣಿಗೆಗೆ ಕಾರಣವಾಗುವ ಪ್ರಮುಖ ಅಂಶಗಳಲ್ಲಿ ನಿದ್ರೆ ಕೂಡ ಒಂದು. 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು 13 ಗಂಟೆಗಳವರೆಗೆ ನಿದ್ರೆ ಮಾಡಬೇಕು. ಪಾಲಕರು ತಮ್ಮ ಮಕ್ಕಳ ನಿದ್ರೆಯ ಬಗ್ಗೆ ಬಹಳ ಜಾಗರೂಕರಾಗಿರಬೇಕು.‌

ಮನೆಯಲ್ಲಿರುವ ಪೋಷಕರು ಹೆಚ್ಚು ಸಮಯ ಎಚ್ಚರವಾಗಿದ್ದರೆ ಆ ಪರಿಣಾಮವು ಮಕ್ಕಳ ಮೇಲೆ ಬೀರುತ್ತದೆ. ಮೊಬೈಲ್‌ ಮತ್ತು ಲ್ಯಾಪ್‌ಟಾಪ್‌ಗಳಂತಹ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳು ವಯಸ್ಕರ  ನಿದ್ರೆಗೆ ಬ್ರೇಕ್‌ ಹಾಕುತ್ತವೆ. ಇದು ಮಕ್ಕಳ ಮೇಲೂ ಪರಿಣಾಮ ಬೀರುತ್ತದೆ.  ಮಕ್ಕಳು ಮತ್ತು ಪೋಷಕರು ಒಂದೇ ಸಮಯಕ್ಕೆ ಮನೆಯಲ್ಲಿ ಮಲಗುವುದು ಉತ್ತಮ. ಇದು ನಿದ್ರೆಯ ಸಮಯವನ್ನು ಹೆಚ್ಚಿಸಬಹುದು.

ಮಕ್ಕಳು ಮಲಗುವ ಮುನ್ನ ಉಗುರುಬೆಚ್ಚಗಿನ ನೀರಿನಿಂದ ಸ್ನಾನ ಮಾಡಿಸಿ, ಪುಸ್ತಕಗಳನ್ನು ಓದುವುದನ್ನು ರೂಢಿಸಿಕೊಳ್ಳಬೇಕು. ಮಲಗುವ ಮುನ್ನ ಟಿವಿ ನೋಡುವುದು, ಸಾಮಾಜಿಕ ಜಾಲತಾಣಗಳನ್ನು ಬಳಸುವುದು, ವಿಡಿಯೋಗೇಮ್‌ಗಳು ಇತ್ಯಾದಿಗಳನ್ನು ಮಾಡಬಾರದು. ಶಾಂತ, ನಿಶ್ಶಬ್ದ ವಾತಾವರಣವಿದ್ದರೆ ಚೆನ್ನಾಗಿ ನಿದ್ದೆ ಬರುತ್ತದೆ. ಮಲಗುವ ಸ್ಥಳವನ್ನು ಗೊಂದಲವಿಲ್ಲದೆ ಇಡುವುದು ಉತ್ತಮ. ಮನೆ ಪೂರ್ತಿ ಕತ್ತಲೆಯಿಂದಲ್ಲದೆ ಒಂದು ಸಣ್ಣ ಬೆಡ್ ಲೈಟ್ ಇದ್ದರೆ ಒಳ್ಳೆಯದು. ಸರಿಯಾದ ಸಮಯಕ್ಕೆ ಮಕ್ಕಳು ನಿದ್ರೆ ಮಾಡುವುದರಿಂದ ಅವರ ಆರೋಗ್ಯ ಚೆನ್ನಾಗಿರುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Share Post