HealthLifestyle

ನಿತ್ಯ ನೀವು ಮೊಸರು ಸೇವಿಸ್ತೀರಾ..?; ಹಾಗಾದ್ರೆ ಈ ಸುದ್ದಿ ಓದಲೇಬೇಕು!

ಬೆಂಗಳೂರು; ನೀವು ದಿನವೂ ಮೊಸರು ತಿನ್ನುತ್ತಿದ್ದೀರಾ..? ಹಾಗಾದ್ರೆ ನೀವು ಹಲವಾರು ಪ್ರಯೋಜನಗಳನ್ನು ಪಡೆಯುತ್ತೀರಿ.. ತೂಕ ಕಡಿಮೆಯಾಗಬೇಕು ಅಂದ್ರೆ ದಿನವೂ ಕೊಂಚ ಮೊಸರು ಸೇವನೆ ಮಾಡಬೇಕು ಅಂತ ಪೌಷ್ಟಿಕ ತಜ್ಞರು ಕೂಡಾ ಸಲಹೆ ನೀಡುತ್ತಾರೆ.. ಮೊಸರು ದೇಹದ ತೂಕ ಹೆಚ್ಚಾಗುವುದನ್ನು ತಡೆಯುತ್ತದಂತೆ.. ಮೊಸರಿನಲ್ಲಿರುವ ಕ್ಯಾಲ್ಸಿಯಂ ಮತ್ತು ರಂಜಕ ಇರುವುದರಿಂದ ಇದು ಮೂಳೆಗಳನ್ನು ಬಲಗೊಳಿಸುತ್ತದೆ..

ಇದನ್ನೂ ಓದಿ; ಭದ್ರಾವತಿ ಶಾಸಕ ಸಂಗಮೇಶ್‌ ಪುತ್ರನ ಕೊಲೆಗೆ ಜೈಲಿಂದಲೇ ಸ್ಕೆಚ್‌!

ಹಲ್ಲುಗಳು ಹಾಗೂ ದೇಹದ ಎಲ್ಲಾ ಮೂಳೆಗಳು ಗಟ್ಟಿಯಾಗಲು ಅಗತ್ಯವಾದ ಕ್ಯಾಲ್ಸಿಯಂ ಮೊಸರಿನಲ್ಲಿ ಸಿಗುತ್ತದೆ.. ಸಂಧಿವಾತ ಮತ್ತು ಆಸ್ಟಿಯೊಪೊರೋಸಿಸ್ ಅನ್ನು ಕೂಡಾ ಈ ಮೊಸರು ಸೇವನೆಯಿಂದ ತಡೆಯಬಹುದು. ಮಲಬದ್ಧತೆ, ಅತಿಸಾರ ಮತ್ತು ಹೊಟ್ಟೆ ಉಬ್ಬರವನ್ನು ಹೋಗಲಾಡಿಸಲು ಮೊಸರು ಅತ್ಯಗತ್ಯ. ಮೊಸರು ನಮ್ಮ ಜೀರ್ಣಕ್ರಿಯೆಯನ್ನು ವೇಗಗೊಳಿಸುತ್ತದೆ. ಆಹಾರದಿಂದ ಪೋಷಕಾಂಶಗಳನ್ನು ವೇಗವಾಗಿ ದೇಹಕ್ಕೆ ಪೂರೈಕೆಯಾಗಲು ಕೂಡಾ ಮೊಸರು ತುಂಬಾನೇ ಸಹಾಯ ಮಾಡುತ್ತದೆ..

ಇದನ್ನೂ ಓದಿ; ಸ್ಕ್ರೂ ಡ್ರೈವರ್‌ನಿಂದ ಪತ್ನಿಯನ್ನು ಚುಚ್ಚಿ ಚುಚ್ಚಿ ಕೊಂದ ಪಾಪಿ!

ತ್ವಚೆಯ ಆರೈಕೆಯಲ್ಲಿಯೂ ಮೊಸರು ಉಪಯುಕ್ತವಾಗಿದೆ. ಮೊಸರು ಹೆಚ್ಚು ಸೇವನೆ ಮಾಡುವುದರಿಂದ ಚರ್ಮಕ್ಕೆ ಪೋಷಕಾಂಶಗಳನ್ನು ನೀಡುತ್ತದೆ.. ಇದರಿಂದ ಚರ್ಮ ಕಾಂತಿಯುತವಾಗುವುದಲ್ಲದೆ, ಆರೋಗ್ಯಕರವಾಗಿಯೂ ಇರುತ್ತದೆ.. ಮೊಸರಿನಲ್ಲಿರುವ ವಿಟಮಿನ್ ಇ ಮತ್ತು ಸತು ಚರ್ಮವನ್ನು ನೈಸರ್ಗಿಕವಾಗಿ ರಕ್ಷಿಸುತ್ತವೆ. ಮೊಸರು ಕೂದಲಿನ ಆರೋಗ್ಯಕ್ಕೂ ಒಳ್ಳೆಯದು. ಮೊಸರಿನಲ್ಲಿರುವ ಲ್ಯಾಕ್ಟಿಕ್ ಆಮ್ಲವು ಕೂದಲು ಬುಡಕ್ಕೆ ಪೋಷಕಾಂಶಗಳು ಮತ್ತು ಖನಿಜಗಳನ್ನು ಒದಗಿಸುತ್ತದೆ. ಇದರಿಂದಾಗಿ ತಲೆಹೊಟ್ಟು ಬರದಂತೆ ಇದು ತಡೆಯುತ್ತದೆ. ಮೊಸರು ಕೂದಲಿನ ಕಂಡಿಷನರ್ ಆಗಿಯೂ ಕೆಲಸ ಮಾಡುತ್ತದೆ. ಇದನ್ನು ಗೋರಂಟಿಯೊಂದಿಗೆ ತಲೆಗೆ ಹಚ್ಚುವುದರಿಂದ ಕೂದಲು ಉದುರುವುದು ನಿಲ್ಲುತ್ತದೆ ಎಂದು ತಜ್ಞರು ಹೇಳುತ್ತಾರೆ..

ಇದನ್ನೂ ಓದಿ; ಕಾರಿಗೆ ಟಚ್‌ ಮಾಡಿದ್ದಕ್ಕೆ ಗುದ್ದಿಸಿ ಬೈಕ್‌ ಚಾಲಕನ ಕೊಲೆ!

ಪ್ರತಿನಿತ್ಯ ನಾವು ಮೊಸರು ತಿನ್ನುವುದರಿಂದ ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡಬಹುದು. ಇದರಿಂದಾಗಿ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಇದು ಅಪಧಮನಿಗಳನ್ನು ಸ್ವಚ್ಛಗೊಳಿಸಿ, ಸರಾಗವಾಗಿ ರಕ್ತ ಪೂರೈಕೆಗೆ ಸಹಾಯ ಮಾಡುತ್ತದೆ. ಈ ಮೂಲಕ ಹೃದಯ ರೋಗಗಳನ್ನು ತಡೆಯುತ್ತದೆ. ಜೊತೆಗೆ ನಮ್ಮಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ.

ಇದನ್ನೂ ಓದಿ; 163ನೇ ವಿಧಿ ಏನು ಹೇಳುತ್ತೆ..?; ರಾಜ್ಯಪಾಲರಿಗೆ ಸಲಹೆ ನೀಡುವ ಹಕ್ಕು ಸಂಪುಟಕ್ಕಿದೆಯಾ..?

ಕೆಲವು ಸಂಶೋಧನೆಗಳ ಪ್ರಕಾರ, ಮೊಸರು ಮೆದುಳನ್ನು ಶಾಂತವಾಗಿ ಮತ್ತು ಭಾವನಾತ್ಮಕವಾಗಿ ಸಿದ್ಧಪಡಿಸುತ್ತದೆ. ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ. ಮಿದುಳಿನ ಆರೋಗ್ಯಕ್ಕೂ ಇದು ನೈಸರ್ಗಿಕ ಪರಿಹಾರವಾಗಿದೆ. ಹೆಚ್ಚಿನ ಬಾಯಿಯ ರೋಗಗಳು ಬ್ಯಾಕ್ಟೀರಿಯಾದಿಂದ ಉಂಟಾಗುತ್ತವೆ. ಮೊಸರಿನಲ್ಲಿರುವ ಉತ್ತಮ ಬ್ಯಾಕ್ಟೀರಿಯಾಗಳು ಇತರ ಬ್ಯಾಕ್ಟೀರಿಯಾಗಳು ದೇಹವನ್ನು ಪ್ರವೇಶಿಸದಂತೆ ತಡೆಯುತ್ತದೆ.

Share Post