ಸ್ಕ್ರೂ ಡ್ರೈವರ್‌ನಿಂದ ಪತ್ನಿಯನ್ನು ಚುಚ್ಚಿ ಚುಚ್ಚಿ ಕೊಂದ ಪಾಪಿ!
ಮಂಡ್ಯ(Mandya); ಇತ್ತೀಚಿನ ದಿನಗಳಲ್ಲಿ ಜನ ಯಾಕೆ ಇಷ್ಟು ಕ್ರೌರ್ಯ ಪ್ರದರ್ಶನ ಮಾಡುತ್ತಿದ್ದಾರೋ ಏನೋ ಗುತ್ತಾಗುತ್ತಿಲ್ಲ.. ಗಂಡ ಹೆಂಡತಿಯನ್ನು ಕೊಲೆ ಮಾಡೋದು, ಹೆಂಡತಿ ಗಂಡನನ್ನು ಕೊಲೆ ಮಾಡಿಸೋ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ.. ಇದೀಗ, ಮಂಡ್ಯ ಜಿಲ್ಲೆಯಲ್ಲಿ ಇಂತಹದ್ದೇ ಒಂದು ಕ್ರೌರ್ಯ ನಡೆದಿದೆ.. ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಸ್ಕ್ರೂ ಡ್ರೈವರ್‌ನಿಂದ ಚುಚ್ಚಿ ಚುಚ್ಚಿ ಕೊಂದಿದ್ದಾನೆ.. ಸಾಲದೆಂಬಂತೆ ಕೊಡಲಿಯಿಂದಲೂ ದಾಳಿ ಮಾಡಿದ್ದಾನೆ..
ಇದನ್ನೂ ಓದಿ; ಕಾರಿಗೆ ಟಚ್ ಮಾಡಿದ್ದಕ್ಕೆ ಗುದ್ದಿಸಿ ಬೈಕ್ ಚಾಲಕನ ಕೊಲೆ!
ಮಂಡ್ಯ ಜಿಲ್ಲೆ ಮಂಥನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ತೇಜಸ್ವಿನಿ ಎಂಬಾಕೆಯೇ ಕೊಲೆಯಾದ ದುರ್ದೈವಿಯಾಗಿದ್ದಾಳೆ.. ಕೌಟುಂಬಿಕ ಕಹಲ ತಾರಕಕ್ಕೇರಿ ಗಂಡ ಜಯರಾಮ್ ಈ ಕೃತ್ಯ ಎಸಗಿದ್ದಾನೆ.. ಸ್ಕ್ರೂ ಡ್ರೈವರ್‌ನಿಂದ ಮನಬಂದಂತೆ ಚುಚ್ಚಿದ್ದರಿಂದ ತೀವ್ರ ರಕ್ತಸ್ರಾವವಾಗಿ ತೇಜಸ್ವಿನಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.
ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ..
ಇದನ್ನೂ ಓದಿ; 163ನೇ ವಿಧಿ ಏನು ಹೇಳುತ್ತೆ..?; ರಾಜ್ಯಪಾಲರಿಗೆ ಸಲಹೆ ನೀಡುವ ಹಕ್ಕು ಸಂಪುಟಕ್ಕಿದೆಯಾ..?