LifestyleNational

ರಸ್ತೆಯಲ್ಲಿ ಕಂತೆ ಕಂತೆ ಹಣ ಚೆಲ್ಲಾಡಿದ ಯುವಕ!

ಬೆಂಗಳೂರು; ಕೆಲ ವರ್ಷದ ಹಿಂದೆ ವ್ಯಕ್ತಿಯೊಬ್ಬ ಬೆಂಗಳೂರಿನ ಕೆಆರ್‌ ಮಾರ್ಕೆಟ್‌ ಫ್ಲೈಓವರ್‌ ಮೇಲೆ ನಿಂತು ನೋಟುಗಳನ್ನು ಕೆಳಗೆ ಚೆಲ್ಲಿದ್ದ.. ಜನ ಆ ನೋಟುಗಳನ್ನು ಸಂಗ್ರಹಿಸಲು ಮುಗಿಬಿದ್ದಿದ್ದರು.. ಜನರ ಗಮನ ಸೆಳೆಯೋದಕ್ಕಾಗಿ ಆತ ಈ ರೀತಿ ಮಾಡಿದ್ದ.. ಇದೀಗ ಮತ್ತೊಬ್ಬ ಹೈದರಾಬಾದ್‌ನಲ್ಲಿ ಇದೇ ರೀತಿ ಮಾಡಿದ್ದಾನೆ.. ಜನನಿಬಿಡ ರಸ್ತೆಯಲ್ಲಿ ನೋಟುಗಳನ್ನು ಗಾಳಿಗೆ ಹಾರಿಬಿಟ್ಟಿದ್ದಾನೆ.. ಈ ವಿಡಿಯೋ ಈಗ ಎಲ್ಲೆಡೆ ವೈರಲ್‌ ಆಗುತ್ತಿದೆ..

ಇದನ್ನೂ ಓದಿ; ಕೋರ್ಟ್‌ ಕಣ್ತಪ್ಪಿಸಿದರಾ ಸಿದ್ದರಾಮಯ್ಯ..?; ಏನಿದು ಸಿಎಂ ವಿರುದ್ಧದ ಗಂಭೀರ ಆರೋಪ..?

ಹರ್ಷ ಎಂಬ ಯೂಟ್ಯೂಬರ್‌ ಹಾಗೂ ಇನ್ಸ್ಟಾಗ್ರಾಂ ಅಕೌಂಟ್‌ ಹೊಂದಿರುವ ವ್ಯಕ್ತಿ ಈ ಕೆಲಸ ಮಾಡಿದ್ದಾನೆ.. ಹೆಚ್ಚು ವೀಕ್ಷಣೆಗಳಿಗಾಗಿ ಈ ಟ್ರಿಕ್‌ ಉಪಯೋಗಿಸಿದ್ದಾರೆ.. ಇಟಾನೊ ಎಂಬ ಯೂಟ್ಯೂಬ್‌ ಚಾನಲ್‌ ಹೊಂದಿರುವ ಆತ ಈ ಕೆಲಸ ಮಾಡಿದ್ದಾನೆ.. ಹಣವನ್ನು ಎಸೆದಾಗ ಜನ ಮುಗಿಬೀಳುತ್ತಾರೆ. ಸ್ವಲ್ಪ ಟ್ರಾಫಿಕ್‌ ಜಾಮ್‌ ಕೂಡಾ ಆಗುತ್ತೆ.. ಅದರ ವಿಡಿಯೋಗಳನ್ನು ಅಪ್‌ಲೋಡ್‌ ಮಾಡಿ ಹೆಚ್ಚು ವೀಕ್ಷಣೆ ಗಳಿಸಿ, ಹಣ ಮಾಡುತ್ತಾನೆ.. ಇದರ ಜೊತೆಗೆ ಈ ರಸ್ತೆಗಳಲ್ಲಿ ಬೈಕ್‌ ಸ್ಟಂಟ್‌ ಮಾಡುತ್ತಾನೆ ಎಂದು ತಿಳಿದುಬಂದಿದೆ.. ಈ ರೀತಿ ಮಾಡಿ ಸಾರ್ವಜನಿಕರಿಗೆ ತೊಂದರೆ ಕೊಡುವ ಈತನ ವಿರುದ್ಧ ಸಾರ್ವಜನಿಕರಿಂದ ಆಕ್ರೋಶಗಳು ಕೂಡಾ ವ್ಯಕ್ತವಾಗಿದೆ..

ಇದನ್ನೂ ಓದಿ; ಭದ್ರಾವತಿ ಶಾಸಕ ಸಂಗಮೇಶ್‌ ಪುತ್ರನ ಕೊಲೆಗೆ ಜೈಲಿಂದಲೇ ಸ್ಕೆಚ್‌!

Share Post