ಪ್ರೀತಿಸಿ ಮದುವೆಯಾದವರೂ ಮತ್ತೊಂದು ಅಕ್ರಮ ಸಂಬಂಧ ಇಟ್ಟುಕೊಳ್ಳುವುದು ಏಕೆ..?
ಪ್ರೀತಿಸುವಾಗ ಒಬ್ಬರಿಗೊಬ್ಬರು ಪ್ರಾಣ ಕೊಡೋದಕ್ಕೂ ರೆಡಿ ಇರುತ್ತಾರೆ.. ಪ್ರೀತಿಗೆ ಮನೆಯಲ್ಲಿ ಒಪ್ಪದೇ ಹೋದರೆ ಜೀವ ತೆಗೆದುಕೊಂಡವರ ಹಲವಾರು ಉದಾಹರಣೆಗಳೂ ನಮ್ಮ ಕಣ್ಣ ಮುಂದೆ ಇವೆ.. ಇದರ ನಡುವೆ ಪ್ರೀತಿಸಿದವರು ಮದುವೆಯಾಗುತ್ತಾರೆ ಎಂದಿಟ್ಟುಕೊಳ್ಳೋಣ.. ಮದುವೆಯಾದ ಮೇಲೂ ಇದೇ ಪ್ರೀತಿ ಮುಂದುವರೆಯಬೇಕು.. ಆದ್ರೆ, ಹಲವಾರು ಪ್ರೇಮ ವಿವಾಹಗಳಲ್ಲೂ ಮೋಸದ ಪ್ರಕರಣಗಳು ನಡೆಯುತ್ತಿವೆ.. ಪ್ರೀತಿಸಿ ಮದುವೆಯಾದವರು ಕೂಡಾ ಸಂಗಾತಿಗೆ ಮೋಸ ಮಾಡುತ್ತಾರೆ.. ಮದುವೆಯಾದ ಕೆಲ ತಿಂಗಳ ನಂತರ ಮತ್ತೊಂದು ಅನೈತಿಕ ಸಂಬಂಧ ಇಟ್ಟುಕೊಳ್ಳುವ ಉದಾಹರಣೆಗಳು ಸಾಕಷ್ಟು ಸಿಗುತ್ತವೆ.. ಹಾಗಾದ್ರೆ ಪ್ರೀತಿಸಿ ಮದುವೆಯಾದವರೂ ಮತ್ತೊಂದು ಅಕ್ರಮ ಸಂಬಂಧ ಇಟ್ಟುಕೊಳ್ಳುವುದೇಕೆ..? ಪ್ರೀತಿಸಿದವರಿಗೆ ಮೋಸ ಮಾಡುವುದೇಕೆ..? ಈ ಬಗ್ಗೆ ತಿಳಿಯೋಣ ಬನ್ನಿ..
ಮದುವೆಗೂ ಮುಂಚೆ ಪ್ರೀತಿಯಲ್ಲಿ ಬಿದ್ದಿರುವಾಗ ಸಂಗಾತಿಯ ಸಣ್ಣ ಪುಟ್ಟ ತಪ್ಪುಗಳು ಕಾಣಿಸುವುದಿಲ್ಲ.. ಗೊತ್ತಾದರೂ ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ.. ಯಾಕಂದ್ರೆ ಆಗ ಪ್ರಶ್ನೆ ಮಾಡಿದರೆ ಸಂಗಾತಿ ಎಲ್ಲಿ ಬಿಟ್ಟುಹೋಗಿಬಿಡುತ್ತಾರೋ ಎಂಬ ಭಯ ಕಾಡುತ್ತಿರುತ್ತದೆ.. ಆದ್ರೆ ಮದುವೆಯಾದ ಮೇಲೆ ವರಸೆ ಬದಲಾಗುತ್ತದೆ.. ಸಣ್ಣ ತಪ್ಪಾದರೂ ಅದನ್ನು ಎತ್ತಿ ತೋರಿಸುತ್ತಾರೆ.. ಪದೇ ಪದೇ ಕೋಪ ತಾಪಗಳು ಹೆಚ್ಚಾಗುತ್ತವೆ.. ಇದರಿಂದ ಮನಸ್ತಾಪಗಳಾಗುತ್ತವೆ.. ಆಗ ಸಂಗಾತಿಗಳು ಬೇರೆಯವರ ಕಡೆ ಆಕರ್ಷಿತರಾಗುವುದು ಹೆಚ್ಚಾಗುತ್ತದೆ..
ಇನ್ನು ಪ್ರೀತಿ ಮಾಡುವ ಸಮಯದಲ್ಲೇ ಹಲವರೊಂದಿಗೆ ಸುತ್ತಾಡುತ್ತಿರುತ್ತಾರೆ.. ಮದುವೆಯಾದ ಮೇಲೂ ಈ ಮೋಸದ ಸಂಬಂಧ ಮುಂದುವರೆಯುತ್ತದೆ.. ಹಲವರು ಜೊತೆ ಸುತ್ತಾಡಿದರೂ ಪ್ರೀತಿ ಹೆಸರಲ್ಲೇ ಒಬ್ಬರನ್ನು ಮದುವೆಯಾಗುತ್ತಾರೆ.. ಆದ್ರೆ, ಮದುವೆಯ ನಂತರವೂ ಇತರರೊಂದಿಗೆ ಸಂಬಂಧ ಮುಂದುವರೆಸುವವರೂ ಇದ್ದಾರೆ.. ಹುಡುಗರು ಹಾಗೂ ಹುಡುಗಿಯರು ಇಬ್ಬರೂ ಹಾಗೆ ಮಾಡುತ್ತಾರೆ..
ಮದುವೆಯಾದ ಸಂಗಾತಿಗಳ ನಡುವೆ ಲೈಂಗಿಕ ಬಯಕೆ ಸರಿಯಾಗಿ ಪೂರೈಸಲು ಆಗದೇ ಇರುವುದು.. ಸಂಗಾತಿ ಸರಿಯಾಗಿ ಲೈಂಗಿಕವಾಗಿ ಸುಖ ನೀಡದಿದ್ದರೆ ಇನ್ನೊಬ್ಬರ ಸಂಗ ಬಯಸುವವರು ಕೂಡಾ ಸಾಕಷ್ಟು ಮಂದಿ ಇದ್ದಾರೆ.. ಹೀಗಾಗಿ, ಪ್ರಾಣವೇ ಕೊಡುತ್ತೇನೆ ಎಂದು ಹೇಳಿ ಮದುವೆಯಾದವರು ಕಾಲಾಂತರ ಮೋಸ ಮಾಡುತ್ತಾ ಹೋಗುತ್ತಾರೆ..
ಪ್ರೀತಿ ಮಾಡುವಾಗ ಎಕ್ಸೈಟ್‌ಮೆಂಟ್ ಇರುತ್ತದೆ.. ಎಲ್ಲವನ್ನೂ ಜಯಿಸಿ ಸಂಸಾರ ಮಾಡುತ್ತೇವೆ.. ಯಶಸ್ವಿ ಜೀವನ ನಡೆಸುತ್ತೇವೆ ಎಂದು ಎಲ್ಲರೂ ಅಂದುಕೊಂಡಿರುತ್ತಾರೆ.. ಆದ್ರೆ ಮದುವೆಯಾದ ಮೇಲೆ ಸಮಸ್ಯೆಗಳು ಶುರುವಾಗುತ್ತವೆ.. ಇದರಿಂದ ಮನಸ್ತಾಪಗಳು ಶುರುವಾಗುತ್ತವೆ.. ಇನ್ನು ಪ್ರೀತಿಸುತ್ತಿರುವಾಗ ಅಲ್ಲಿ ಇಲ್ಲಿ ಸುತ್ತಾಟ ಇರುತ್ತದೆ.. ಮದುವೆಯಾದ ಮೇಲೆ ಜೀವನದ ಜಂಜಾಟದ ನಡುವೆ ಇದೆಲ್ಲದಕ್ಕೂ ಬ್ರೇಕ್ ಬೀಳುತ್ತದೆ.. ಆಗ ಸಂಗಾತಿ ಬೇರೊಬ್ಬರ ಜೊತೆ ಡೇಟಿಂಗ್ ಶುರು ಮಾಡಿಕೊಳ್ಳುತ್ತಾರೆ..
ಇನ್ನು ಪ್ರೀತಿಸುವಾಗ ಎಷ್ಟೇ ಕೆಲಸಗಳಿದ್ದರೂ ಒಬ್ಬರಿಗೊಬ್ಬರು ಸಮಯ ಕೊಡುತ್ತಾರೆ.. ಮಾಡೋ ಕೆಲಸ ಬಿಟ್ಟು ಇಬ್ಬರೂ ಸುತ್ತಾಡುತ್ತಾರೆ.. ಹರಟೆ ಹೊಡೆಯುತ್ತಾರೆ.. ಆದ್ರೆ ಮದುವೆಯಾದ ಮೇಲೆ ಕೆಲಸದ ಹೆಸರಲ್ಲಿ ಇಬ್ಬರಿಗೊಬ್ಬರು ಟೈಮ್ ಕೊಡೋದಿಲ್ಲ.. ಅದೂ ಕೂಡಾ ಮನಸ್ತಾಪಕ್ಕೆ ಕಾರಣವಾಗುತ್ತದೆ.. ಆಗ ಟೈಮ್ ಕೊಡುವ ಸಂಗಾತಿಗಾಗಿ ಹುಡುಕಾಟ ನಡೆಯುತ್ತದೆ.. ಹುಡುಕಿಕೊಳ್ಳುತ್ತಾರೆ ಕೂಡಾ..
ಆದ್ರೆ ಹೀಗೆ ಅಕ್ರಮ ಸಂಬಂಧಗಳನ್ನು ಇಟ್ಟುಕೊಳ್ಳುವವರು ಕೂಡಾ ಹೆಚ್ಚು ದಿನ ಸಂತೋಷದಿಂದ ಇರೋದಿಲ್ಲ.. ಅದರಿಂದ ಮತ್ತಷ್ಟು ಸಮಸ್ಯೆಗಳು ಶುರುವಾಗುತ್ತವೆ.. ಕೊನೆಗೆ ಬದುಕು ಬೀದಿಗೆ ಬಂದು ನಿಂತಿರುತ್ತದೆ.. ಹೀಗಾಗಿ ಏನೇ ಮಾಡಬೇಕೆಂದರೂ ಯೋಚಿಸಿ ಮಾಡುವುದು ಒಳ್ಳೆಯದು..