LifestyleNational

ತಿರುಮಲ ಯಾತ್ರೆ ಹೇಗಿರಬೇಕು..?; ತಿಮ್ಮಪ್ಪನ ದರ್ಶನದ ಸರಿಯಾದ ವಿಧಾನ ಯಾವುದು..?

ತಿರುಮಲ; ತಿರುಪತಿ ತಿಮ್ಮಪ್ಪ ಪ್ರಪಂಚದ ಶ್ರೀಮಂತ ದೇವರು.. ತಿರುಮಲವಾಸನ ದರ್ಶನ ಸಿಗೋದು ಅಷ್ಟು ಸುಲಭದ ಮಾತಲ್ಲ.. ನಿತ್ಯವೂ ಲಕ್ಷಾಂತರ ಭಕ್ತರು ತಿಮ್ಮಪ್ಪನ ದರ್ಶನ ಪಡೆಯುತ್ತಾರೆ.. ಆದ್ರೆ ಹೀಗೆ ತಿಮ್ಮಪ್ಪ ದರ್ಶನ ಮಾಡುವವರು ಸರಿಯಾದ ವಿಧಾನದಲ್ಲಿ ತಿರುಮಲ ಯಾತ್ರೆ ಮಾಡುತ್ತಿದ್ದಾರಾ..? ನಿಮಗೆ ಗೊತ್ತಾ ತಿರುಮಲ ಯಾತ್ರಾ ವಿಧಾನ..? ತಿರುಪತಿ ವೆಂಕಟೇಶ್ವರನ ಸನ್ನಿಧಾನಕ್ಕೆ ಸುಮಾರು 2000 ವರ್ಷಗಳ ಇತಿಹಾಸವಿದೆ.. ಈ ದೇವರ ದರ್ಶನವನ್ನು ಸರಿಯಾದ ವಿಧಾನದೊಂದಿಗೆ ಮಾಡಿದರೆ ಮಾತ್ರ ಹೆಚ್ಚು ಶುಭಫಲಗಳು ದಕ್ಕುತ್ತವೆ ಎಂದು ಅರ್ಚಕರು ಹೇಳುತ್ತಾರೆ.. ಹಾಗಾದ್ರೆ ತಿರುಮಲ ಯಾತ್ರೆ ಹೇಗಿರಬೇಕು ಅನ್ನೋದನ್ನು ನೋಡೋಣ ಬನ್ನಿ..
ಮೊದಲು ಕಾಣಿಪಾಕಂ ಗಣೇಶನ ದರ್ಶನವಾಗಬೇಕು;
ನಾವು ಕೆಲಸ ಮಾಡುವ ಮೊದಲು ಗಣೇಶನ ಪೂಜೆ ಮಾಡುತ್ತೇವೆ.. ಮೊದಲ ಪೂಜೆ ಗಣೇಶನಿಗೇ ಸಲ್ಲಬೇಕು ಎಂದು ಎಲ್ಲರೂ ಹೇಳುತ್ತಾರೆ.. ಗಣೇಶನನ್ನು ವಿಘ್ನ ನಿವಾರಕ ಎಂದು ಕರೆಯುತ್ತಾರೆ.. ಹೀಗಾಗಿ ತಿರುಮಲ ಯಾತ್ರೆ ಮಾಡುವಾಗ ಮೊದಲಿಗೆ ಕಾಣಿಪಾಕಂನಲ್ಲಿರುವ ಗಣೇಶನ ದರ್ಶನ ಮಾಡಿಕೊಳ್ಳಬೇಕು.. ಕಾಣಿಪಾಕಂನಲ್ಲಿರುವ ಗಣೇಶನಿಗೆ ಪೂಜೆ ಸಲ್ಲಿಸಿ, ತಿರುಮಲ ಯಾತ್ರೆಯಲ್ಲಿ ಯಾವುದೇ ವಿಘ್ನಗಳು ಆಗದಂತೆ ಬೇಡಿಕೊಳ್ಳಬೇಕು.. ಕಾಣಿಪಾಕಂನಲ್ಲಿರುವ ಗಣೇಶ ಮೂರ್ತಿ ಬಾವಿಯಲ್ಲಿ ಉದ್ಭವವಾಗಿದ್ದು, ದಿನವೂ ಅದು ಬೆಳೆಯುತ್ತಿದೆ ಎಂದು ಹೇಳಲಾಗುತ್ತದೆ.. ಹೀಗಾಗಿ ಈ ಗಣೇಶ ವಿಶೇಷವೆನಿಸಿದೆ..
​ತಿರುಚಾನೂರ್‌ ಪದ್ಮ ಸರೋವರದಲ್ಲಿ ತೀರ್ಥಸ್ನಾನ​;
ಕಾಣಿಪಾಕಂ ಗಣೇಶನ ದರ್ಶನ ಮುಗಿದ ಬಳಿಕ ತಿರುಚಾನೂರ್‌ನಲ್ಲಿರುವ ಪದ್ಮಾವತಿಯವರ ದರ್ಶನ ಮಾಡಿಕೊಳ್ಳಬೇಕು.. ಅದಕ್ಕೂ ಮೊದಲು ತಿರುಚಾನೂರ್‌ ಪದ್ಮಾವತಿ ದೇಗುಲದಲ್ಲಿರುವ ಪದ್ಮ ಸರೋವರದಲ್ಲಿ ಸ್ನಾನ ಮಾಡಬೇಕು.. ಆ ಮೂಲಕ ದೇಹ ಶುದ್ಧಿ ಮಾಡಿಕೊಂಡು, ಪಾಪ ನಿವಾರಣೆ ಮಾಡಿಕೊಂಡು ಪದ್ಮಾವತಿಯ ದರ್ಶನ ಪಡೆಯುವುದು ಉತ್ತಮ.. ಕಾರ್ತಿಕ ಮಾಸದ ಶುಕ್ಲ ಪಕ್ಷದ ಪಂಚಮಿಯ ದಿನ ಪದ್ಮಾವತಿ ದೇವರು ಬಂಗಾರದ ತಾವರೆ ಹೂವಿನ ಮೇಲೆ ಕುಳಿತು ಈ ಸರೋವರದಲ್ಲಿ ಉದ್ಭವವಾದರು ಎಂದು ಐತಿಹ್ಯಗಳು ಹೇಳುತ್ತವೆ.. ಹೀಗಾಗಿ ಈ ಸರೋವರಕ್ಕೆ ಪದ್ಮ ಸರೋವರ ಎಂದು ಹೆಸರು ಬಂದಿದ್ದು, ಇಲ್ಲಿ ಸ್ನಾನ ಮಾಡಿದರೆ ಪುಣ್ಯ ಪ್ರಾಪ್ತಿಯಾಗುತ್ತೆ ಎಂದು ನಂಬಲಾಗಿದೆ. ಪದ್ಮಾವತಿ ದೇವಿಯವರು ವೆಂಕಟೇಶ್ವರನ ಪತ್ನಿಯಾಗಿದ್ದು, ವೆಂಕಟೇಶ್ವರನ ದರ್ಶನಕ್ಕೂ ಮೊದಲು ಪದ್ಮಾವತಿಯ ದರ್ಶನ ಮಾಡಬೇಕೆಂದು ಹೇಳಲಾಗುತ್ತದೆ..
​ಕಪಿಲ ತೀರ್ಥದಲ್ಲಿ ಸ್ನಾನ​;
ವೆಂಕಟೇಶ್ವರನ ಪತ್ನಿ ಪದ್ಮಾವತಿಯವರ ದರ್ಶನ ಮಾಡಿದ ಮೇಲೆ ತಿರುಮಲ ಬೆಟ್ಟಕ್ಕೆ ಹೋಗಬೇಕು.. ಕಪಿಲ ತೀರ್ಥ ಇದೆ.. ಅಲ್ಲಿ ತೀರ್ಥ ಸ್ನಾನ ಮಾಡಬೇಕು.. ಇದನ್ನು ಪಾಪನಾಶನಂ ಎಂದೂ ಕರೆಯಲಾಗುತ್ತದೆ.. ಇಲ್ಲಿ ಸ್ನಾನ ಮಾಡಿದರೆ ಪಾಪಗಳ ನಿವಾರಣೆಯಾಗುತ್ತವೆ ಎಂದು ನಂಬಲಾಗಿದೆ.. ಇಲ್ಲಿ ಸ್ನಾನ ಮಾಡಿದರೆ ವೆಂಕಟೇಶ್ವರನ ದರ್ಶನ ಸುಸೂತ್ರವಾಗಿ ಆಗುತ್ತದೆ ಎಂದು ಪುರಾಣಗಳಲ್ಲಿ ಕೂಡಾ ಹೇಳಲಾಗಿದೆ.. ಬೆಟ್ಟದಿಂದ ನೇರವಾಗಿ ನೀರು ಇಲ್ಲಿ ಕಪಿಲ ತೀರ್ಥಂ ಬೀಳುತ್ತದೆ.. ಇಲ್ಲಿ ಕಪಿಲ ಮುನಿ ಶಿವನ ವಿಗ್ರಹ ಸ್ಥಾಪನೆ ಮಾಡಿದ್ದಾರೆ..
ವೆಂಕಟೇಶ್ವರ ದೇಗುಲದ ಪುಷ್ಕರಣಿಯಲ್ಲಿ ಸ್ನಾನ;
ಪಾಪನಾಶನಂ ಅಥವಾ ಕಪಿಲ ತೀರ್ಥದಲ್ಲಿ ಸ್ನಾನ ಮಾಡಿದ ಬಳಿ ಅಲ್ಲಿನ ಶಿವನನ್ನು ದರ್ಶನ ಮಾಡಿಕೊಂಡು ವೆಂಟೇಶ್ವರ ದೇಗುಲದ ಬಳಿ ಪುಷ್ಕರಣಿಗೆ ಬರಬೇಕು. ಅಲ್ಲಿ ಮತ್ತೆ ಸ್ನಾನ ಮಾಡುವುದು ಕಡ್ಡಾಯ.. ಒಮ್ಮೊಮ್ಮೆ ಇಲ್ಲಿ ಸ್ನಾನಕ್ಕೆ ನಿಷೇಧ ಇರುತ್ತದೆ.. ಆಗ ಆ ಸ್ಥಳಕ್ಕೆ ಹೋಗಿ ನಮಸ್ಕಾರ ಮಾಡಿಕೊಂಡು ಬರಬೇಕು.. ಇಷ್ಟು ಮಾಡಿದರೆ ಬ್ರಹ್ಮಾಂಡದಲ್ಲಿರುವ ಎಲ್ಲಾ ತೀರ್ಥಗಳಲ್ಲಿ ಸ್ನಾನ ಮಾಡಿದಷ್ಟು ಪುಣ್ಯ ಬರುತ್ತದೆ ಎಂದು ಹೇಳಲಾಗುತ್ತದೆ..
ತಿಮ್ಮಪ್ಪನ ದರ್ಶನಕ್ಕೂ ಮೊದಲು ವರಾಹಸ್ವಾಮಿ ದರ್ಶನ;
ಪುಷ್ಕರಣಿ ಪಕ್ಕದಲ್ಲೇ ಸಣ್ಣದಾಗಿ ವರಾಹಸ್ವಾಮಿಯ ದೇಗುಲವಿದೆ.. ಅಂದರೆ ತಿಮ್ಮಪ್ಪನ ದೇಗುಲದ ಪಕ್ಕದಲ್ಲಿ ದೇವರ ಮೆರವಣಿಗೆ ಮಾಡುವ ಬೀದಿಯಲ್ಲಿ ಈ ದೇವಸ್ಥಾನ ಇದೆ.. ತಿಮ್ಮಪ್ಪನನ್ನು ದರ್ಶನ ಮಾಡುವ ಮೊದಲು ವರಾಹಸ್ವಾಮಿಯ ದರ್ಶನ ಮಾಡುವುದು ಕಡ್ಡಾಯ ಎನ್ನಲಾಗಿದೆ.. ವರಾಹ ರೂಪ ಕೂಡಾ ವಿಷ್ಣುವಿನ ಅವತಾರದಲ್ಲೊಂದು.. ಇದು ವೆಂಕಟೇಶ್ವರನ ರೂಪಗಳಲ್ಲಿ ಒಂದು.. ಹೀಗಾಗಿ ಪುರಾಣಗಳಲ್ಲಿ ವೆಂಕಟೇಶ್ವರನ ದರ್ಶನಕ್ಕೂ ಮೊದಲು ವರಾಹ ಸ್ವಾಮಿ ದರ್ಶನ ಮಾಡಬೇಕು ಎಂದು ಹೇಳಲಾಗಿದೆ.. ʻವರಾಹ ದರ್ಶನಾತ್‌ ಪೂರ್ವಮೇ ಶ್ರೀನಿವಾಸಂ ನಮೇನ್ನ ಚ| ದರ್ಶನಾತ್ ವರಾಹಸ್ಯ ಶ್ರೀನಿವಾಸೋ ನ ತ್ರುಪ್ಯತಿ||ʼ
​ತಿಮ್ಮಪ್ಪನ ದರ್ಶನ;
ವರಾಹ ಸ್ವಾಮಿಯ ದರ್ಶನ ಮಾಡಿದ ಬಳಿ ತಿಮ್ಮಪ್ಪನ ದರ್ಶನಕ್ಕೆ ಹೋಗಬೇಕು.. ಗಂಟೆಗಟ್ಟಲೆ ಕ್ಯೂನಲ್ಲಿ ನಿಂತು ಏಡುಕೊಂಡಲವಾಡ ವೆಂಕಟರಮಣ ಗೋವಿಂದ ಎಂದು ಕೂಗುತ್ತಾ ಭಕ್ತರು ದೇವರ ದರ್ಶನ ಪಡೆಯುತ್ತಾರೆ.. ಎಲ್ಲವನ್ನೂ ಮರೆತು ಈ ಸಮಯದಲ್ಲಿ ನಮ್ಮ ಮನಸ್ಸು ಭಗವಂತನ ಆರಾಧನೆ ಮಾಡುತ್ತಿರುತ್ತದೆ.. ಹೀಗಾಗಿಯೇ ಈ ಸ್ಥಳವನ್ನು ಕಲಿಯುಗದ ವೈಕುಂಠ ಎಂದು ಕರೆಯಲಾಗುತ್ತದೆ.. ಈ ದೇವರ ದರ್ಶನ ಮಾಡಿದರೆ ಪಾಪಗಳೆಲ್ಲಾ ಹೋಗಿ ವೈಕುಂಠ ಪ್ರಾಪ್ತಿಯಾಗುತ್ತೆ ಎಂದು ಹೇಳಲಾಗುತ್ತದೆ.
ಕೊನೆಯದಾಗಿ ಕಾಳಹಸ್ತೇಶ್ವರ ದರ್ಶನ;
ತಿರುಮಲ ತಿಮ್ಮಪ್ಪನ ದರ್ಶನದ ನಂತರ ಶ್ರೀ ಕಾಲಹಸ್ತಿಗೆ ಹೋಗಬೇಕು.. ಅಲ್ಲಿ ಶ್ರೀ ಕಾಳಹಸ್ತೇಶ್ವರನ ದರ್ಶನ ಮಾಡಬೇಕು.. ಅಲ್ಲಿಯತನಕ ತಿರುಮಲ ಯಾತ್ರೆ ಪೂರ್ಣವಾಗುವುದಿಲ್ಲ ಎಂದು ಹೇಳಲಾಗುತ್ತದೆ.. ಬೇಡರ ಕಣ್ಣಪ್ಪ ತನ್ನ ಎರಡೂ ಕಣ್ಣುಗಳನ್ನು ಅರ್ಪಿಸಿದ ಸ್ಥಳ ಎಂದು ಹೇಳಲಾಗುತ್ತದೆ. ವಾಯುವಿನ ರೂಪದಲ್ಲಿ ಶಿವನನ್ನು ಕಾಳಹಸ್ತೇಶ್ವರ ಎಂದು ಇಲ್ಲಿ ಪೂಜಿಸಲಾಗುತ್ತದೆ.

Share Post