CrimePolitics

ಬಿಜೆಪಿ ಮೇಯರ್‌ ವಿರುದ್ಧ ಅತ್ಯಾಚಾರ ದೂರು ದಾಖಲಿಸಿದ ಮಹಿಳೆ!

ಇಂದೋರ್‌; ಇಂದೋರ್‌ನ ಬಿಜೆಪಿ ಮೇಯರ್‌ ವಿರುದ್ಧ ಮಹಿಳೆಯೊಬ್ಬರು ರೇಪ್‌ ಕೇಸ್‌ ದಾಖಲು ಮಾಡಿದ್ದಾರೆ.. ಸರ್ಕಾರಿ ಉದ್ಯೋಗದ ಆಮಿಷವೊಡ್ಡಿ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು 32 ವರ್ಷದ ಮಹಿಳೆಯೊಬ್ಬಳು ದ್ವಾರಕಾಪುರಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ..

ಇದನ್ನೂ ಓದಿ; 15 ದಿನಗಳ ಕಾಲ ಸಕ್ಕರೆ ಬಳಕೆ ನಿಲ್ಲಿಸಿಬಿಟ್ಟರೆ ನಮ್ಮ ದೇಹದಲ್ಲಿ ಏನಾಗುತ್ತೆ..?

ಇಂದೋರ್‌ನ ದ್ವಾರಕಾಪುರಿ ವಾರ್ಡ್‌ನ ಬಿಜೆಪಿ ಸದಸ್ಯ ಹಾಗೂ ಮೇಯರ್‌ ಶಾನು ಶರ್ಮಾ ಅಲಿಯಾಸ್‌ ನಿತೀಶ್‌ ಶರ್ಮಾ ವಿರುದ್ಧ ಈ ಆರೋಪ ಕೇಳಿಬಂದಿದೆ.. ಇವರು 2023ರ ಮೇ 10 ರಿಂದ 2024ರ ಏಪ್ರಿಲ್ 16ವರೆಗೆ ನನ್ನ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ್ದಾರೆ.. ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಈ ಕೃತ್ಯ ಎಸಗಲಾಗಿದೆ ಎಂದು ಮಹಿಳೆ ಆರೋಪ ಮಾಡಿದ್ದಾಳೆ.. ನಾನು ಬ್ಯಾಂಕ್‌ನಲ್ಲಿ ಒಂದು ಲಕ್ಷ ರೂಪಾಯಿ ಸಾಲ ಮಾಡಿದ್ದೆ.. ಅದನ್ನು ಶಾನು ಶರ್ಮಾ ತೀರಿಸಿದ್ದರು.. ನಾನು ಆರ್ಥಿಕ ಸಂಕಷ್ಟದಲ್ಲಿದ್ದಿದ್ದರಿಂದ ಸಹಾಯದ ನೆಪದಲ್ಲಿ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ.. ನನಗೆ ಸರ್ಕಾರಿ ನೌಕರಿ ಕೊಡಿಸುವುದಾಗಿಯೂ ಆಮಿಷವೊಡ್ಡಿ ಈ ಕೆಲಸ ಮಾಡಿದ್ದಾರೆ ಎಂದು ಮಹಿಳೆ ಆರೋಪ ಮಾಡಿದ್ದಾಳೆ..

ಇದನ್ನೂ ಓದಿ; ಇಂತಹ ವ್ಯಕ್ತಿಗಳನ್ನು ಬುದ್ಧಿ ಇರುವ ಯಾವ ಹೆಣ್ಣೂ ಮದುವೆ ಆಗೋದಿಲ್ಲ..!

ನನ್ನನ್ನು ದುರ್ಬಳಕೆ ಮಾಡಿಕೊಂಡಿದ್ದಲ್ಲದೆ ನಿನ್ನ ಬಾಯ್‌ಫ್ರೆಂಡ್‌ನಿಂದ ದೂರ ಇರು ಎಂದು ಒತ್ತಡ ಹೇರುತ್ತಿದ್ದರು.. ಆದ್ರೆ ಸಾಧ್ಯವಿಲ್ಲ ಎಂದು ಹೇಳಿದಾಗ ಆತ ನಾನು ಕೊಟ್ಟ ಹಣ ವಾಪಸ್‌ ಕೊಡು ಎಂದು ಕೇಳುತ್ತಿದ್ದಾನೆ.. ನನಗೆ ಬೆದರಿಕೆ ಹಾಕುತ್ತಿದ್ದಾನೆ.. ಹೀಗಾಗಿ ನಾನು ದೂರು ಕೊಡಬೇಕಾಯಿತು ಎಂದು ಆ ಮಹಿಳೆ ಹೇಳಿಕೊಂಡಿದ್ದಾಳೆ.

Share Post