Health

ನಿತಿನ್‌ ಗಡ್ಕರಿಗೆ ಕೊರೊನಾ ಪಾಸಿಟಿವ್‌

ನವದೆಹಲಿ : ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರಿಗೆ ಕೋರೊನಾ ಪಾಸಿಟಿವ್‌ ಆಗಿದೆ. ಈ ಮುಂಚೆಯೂ ಅವರು ಪಾಸಿಟಿವ್‌ ಆಗಿದ್ದರು. 64 ವರ್ಷದ ನಿತಿನ್‌ ಅವರು ಈಗ ಐಸೋಲೇಟ್‌ ಆಗಿದ್ದಾರೆ.

ತಮಗೆ ಕೊರೊನಾ ಪಾಸಿಟಿವ್‌ ಬಂದಿರುವುದಾಗಿ ನಿತಿನ್‌ ಗಡ್ಕರಿ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ನನಗೆ ಸೌಮ್ಯ ಲಕ್ಷಣಗಳು ಇವೆ, ಅಗತ್ಯವಿರುವ ಎಲ್ಲಾ ನಿಯಮಗಳನ್ನು ಪಾಲಿಸುತ್ತಿದ್ದೇನೆ, ನಾನು ಮನೆಯಲ್ಲಿಯೇ ಐಸೋಲೇಟ್‌ ಆಗಿದ್ದೇನೆ.

ನನ್ನ ಸಂಪರ್ಕಕ್ಕೆ ಬಂದವರು ದಯವಿಟ್ಟು ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಬರೆದುಕೊಂಡಿದ್ದಾರೆ. ಈ ಮುಂಚೆ ಸೆಪ್ಟೆಭರ್‌ನಲ್ಲಿಯೂ ಇವರಿಗೆ ಸೋಂಕು ತಗುಲಿತ್ತು, ನಂತರ  ಚೇತರಿಸಿಕೊಂಡಿದ್ದರು.

 

Share Post