15 ದಿನಗಳ ಕಾಲ ಸಕ್ಕರೆ ಬಳಕೆ ನಿಲ್ಲಿಸಿಬಿಟ್ಟರೆ ನಮ್ಮ ದೇಹದಲ್ಲಿ ಏನಾಗುತ್ತೆ..?
ಬೆಂಗಳೂರು; ಸಕ್ಕರೆ ಆರೋಗ್ಯಕ್ಕೆ ಒಳ್ಳೆಯದಲ್ಲ.. ಆದಷ್ಟು ಕಡಿಮೆ ಬಳಸಿ ಎಂದು ಆರೋಗ್ಯ ತಜ್ಞರು ಹೇಳುತ್ತಿರುತ್ತಾರೆ.. ಆದ್ರೆ, ನಾವು ಸೇವಿಸುವ ಬಹುತೇಕ ಸಿಹಿ ಪದಾರ್ಥಗಳಲ್ಲಿ ಬಳಸೋದು ಸಕ್ಕರೆಯೇ.. ಅದ್ರಲ್ಲೂ ಕೂಡಾ ಟೀ, ಕಾಫಿ ಪ್ರಿಯರಾಗಿದ್ದರೆ ದಿನವೂ ಅದೆಷ್ಟು ಸಕ್ಕರೆ ಅವರ ದೇಹ ಸೇರುತ್ತೋ ಗೊತ್ತಿಲ್ಲ.. ನಾವು ಸೇವಿಸುವ ಆಹಾರದಲ್ಲಿ ಸಕ್ಕರೆ ಪ್ರಮಾಣ ಜಾಸ್ತಿಯಾಗುತ್ತಾ ಹೋದಂತೆ ನಮಗೆ ಆರೋಗ್ಯ ಸಂಬಂಧಿ ಸಮಸ್ಯೆಗಳು ಹೆಚ್ಚಾಗುತ್ತಾ ಹೋಗುತ್ತವೆ.. ಸಕ್ಕರೆ ಕಾರಣದಿಂದಲೇ ಅನೇಕ ರೋಗಗಳು ನಮಗೆ ಬರುತ್ತಿವೆ.. ಮಧುಮೇಹ ಪ್ರತಿಯೊಬ್ಬರ ಮನೆಗೂ ವಕ್ಕರಿಸಿದೆ.. ಹಾಗಾದ್ರೆ ಹದಿನೈದು ದಿನ ಸತತವಾಗಿ ಸಕ್ಕರೆ ಬಳಕೆ ನಿಲ್ಲಿಸಿಬಿಟ್ಟರೆ, ನಾವು ಒಂದು ಚೂರೂ ಸಕ್ಕರೆ ಸೇವನೆ ಮಾಡದಿದ್ದರೆ ನಮ್ಮ ದೇಹದಲ್ಲಿ ಏನೆಲ್ಲಾ ಬದಲಾವಣೆ ಆಗುತ್ತೆ ಅನ್ನೋದನ್ನು ನೋಡೋಣ…
ಇದನ್ನೂ ಓದಿ; ಇಂತಹ ವ್ಯಕ್ತಿಗಳನ್ನು ಬುದ್ಧಿ ಇರುವ ಯಾವ ಹೆಣ್ಣೂ ಮದುವೆ ಆಗೋದಿಲ್ಲ..!
ಆಹಾರ ರುಚಿಯಾಗಿದ್ದ ಮಾತ್ರಕ್ಕೆ ಅದು ಆರೋಗ್ಯಕ್ಕೆ ಒಳ್ಳೆಯದು ಅಂತಲ್ಲ. ಅತಿಯಾದ ರುಚಿ ಆರೋಗ್ಯಕ್ಕೆ ಒಳ್ಳೆಯದೇನಲ್ಲ.. ಸಕ್ಕರೆಯ ರುಚಿ ಕೂಡಾ ಅಷ್ಟೇ.. ನಮ್ಮ ಬಾಯಿಗೆ ಅದು ಸಿಹಿ ನೀಡಿದರೂ ಕೂಡಾ ಮುಂದೊಂದು ದಿನ ಅದರಿಂದ ನಾವು ತೊಂದರೆ ಅನುಭವಿಸಲೇಬೇಕಾಗುತ್ತದೆ.. ಹೀಗಾಗಿ, ಸಕ್ಕರೆ ಬಳಕೆ ಕಡಿಮೆ ಮಾಡಿದರೆ ಏನಾಗುತ್ತೆ ಅನ್ನೋದನ್ನ ನೀವು ಪರೀಕ್ಷೆ ಮಾಡಿ ನೋಡಬಹುದು.. ಕೇವಲ 15 ದಿನ ಸಕ್ಕರೆ ಬಳಕೆ ಮಾಡುವುದನ್ನೇ ನಿಲ್ಲಿಸಿಬಿಟ್ಟು ನೋಡಿ ಆಗ ನಿಮ್ಮ ದೇಹದಲ್ಲಾಗುವ ಬದಲಾವಣೆ ನೋಡಿದರೆ ನಿಮಗೇ ಅರ್ಥವಾಗುತ್ತದೆ.. ಸಕ್ಕರೆ ರಹಿತ ಆಹಾರಗಳನ್ನು ಮಾತ್ರ ಕೆಲ ದಿನಗಳ ಕಾಲ ಸೇವಿಸುತ್ತಾ ಬಂದರೆ ನಿಮ್ಮ ಅನೇಕ ಆರೋಗ್ಯ ಸಮಸ್ಯೆಗಳು ಮಾಯವಾಗುತ್ತವೆ.. ಇದರಲ್ಲಿ ಯಾವ ಅನುಮಾನವೂ ಇಲ್ಲ ಎಂದು ತಜ್ಞರು ಹೇಳುತ್ತಾರೆ..
ಇದನ್ನೂ ಓದಿ; ಶೀಘ್ರದಲ್ಲೇ ಅಂಗನವಾಡಿ ಕಾರ್ಯಕರ್ತೆಯ ಗೌರವಧನ ಹೆಚ್ಚಳ; ಹೆಬ್ಬಾಳ್ಕರ್
ಸಕ್ಕರೆಯ ಬಳಕೆ ನಿಲ್ಲಿಸುವುದರಿಂದ ನಮ್ಮ ದೇಹದ ರಕ್ತನಾಳಗಳಲ್ಲಿನ ಕೊಬ್ಬನ್ನು ಕಡಿಮೆ ಮಾಡುತ್ತದೆ. ಮೆದುಳು ಏನಾದರೂ ತೊಂದರೆ ಇದ್ದರೆ ಸ್ವತಃ ರಿಪೇರಿ ಮಾಡಿಕೊಳ್ಳುತ್ತದೆ.. ಸಕ್ಕರೆ ಸೇವನೆ ಕಣ್ಣಿನ ದೃಷ್ಟಿ ಮೇಲೂ ಪರಿಣಾಮ ಬೀರುತ್ತದೆ. ನಮ್ಮ ದೇಹದಲ್ಲಿನ ಶಕ್ತಿಯ ಮಟ್ಟ ಹೆಚ್ಚುತ್ತದೆ. ರಕ್ತನಾಳಗಳ ಉರಿಯೂತ ಕಡಿಮೆಯಾಗುವುದರ ಜೊತೆಗೆ, ಸಿಹಿ ತಿನ್ನುವ ಬಯಕೆ ಕೂಡಾ ಕಡಿಮೆಯಾಗುತ್ತದೆ. ಏಕಾಗ್ರತೆ, ನೆನಪಿನ ಶಕ್ತಿ ಕೂಡಾ ಚೆನ್ನಾಗಿ ಆಗುತ್ತದೆ.. ಮುಖದ ಮೇಲಿನ ಕೊಬ್ಬು ಕರಗಿ, ತ್ವಚೆ ಕೂಡಾ ಸುಂದರವಾಗುತ್ತದೆ.. ಇದರ ಜೊತೆಗೆ ನಮ್ಮ ದೇಹದಲ್ಲಿ ಸಕ್ಕರೆ ಪ್ರಮಾಣ ನಿಯಂತ್ರಣಕ್ಕೆ ಬರುತ್ತದೆ.. ಮಧುಮೇಹ ಬರುವ ಅಪಾಯ ಕೂಡಾ ಕಡಿಮೆಯಾಗುತ್ತಾ ಹೋಗುತ್ತದೆ.. ಹಲ್ಲು, ವಸಡು ಸಮಸ್ಯೆಗಳು ಕೂಡಾ ಇಲ್ಲವಾಗುತ್ತವೆ.. ಹೃದಯದ ಆರೋಗ್ಯವೂ ಸುಧಾರಿಸಿ, ಮಾನಸಿಕ ಆರೋಗ್ಯ ಕೂಡಾ ಚೆನ್ನಾಗಿ ಆಗುತ್ತದೆ…
ಇದನ್ನೂ ಓದಿ; ಪ್ರೇಯಸಿ ಜೊತೆ ಸಿಕ್ಕಿಬಿದ್ದ ಪೊಲೀಸ್ ಹೆಡ್‌ಕಾನ್ಸ್‌ಟೇಬಲ್; ರೆಡ್‌ಹ್ಯಾಂಡಾಗಿ ಹಿಡಿದ ಪತ್ನಿ ರಂಪಾಟ..!